ನವದೆಹಲಿ:ತೈಲ ಮಾರುಕಟ್ಟೆ ಕಂಪನಿಗಳು ತೈಲ ದರ ಪರಿಷ್ಕರಿಸಿದ ಪರಿಣಾಮ, ಕೆಲ ದಿನಗಳ ಕಾಲ ಸ್ಥಿರವಾಗಿದ್ದ ಡೀಸೆಲ್ ಬೆಲೆ ಈಗ ಲೀಟರ್‌ಗೆ ₹15 ಪೈಸೆ ಏರಿಕೆ ಕಂಡಿದೆ.
ರಾಜಧಾನಿಯಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ ₹81.79 ಆಗಿದೆ. ಜೂನ್ 29 ರಿಂದ ಪೆಟ್ರೋಲ್ ಬೆಲೆ ಬದಲಾಗದೇ ಲೀಟರ್‌ಗೆ ₹80.43ರಲ್ಲೇ ಉಳಿದಿದೆ. ತೈಲ ಕಂಪನಿಗಳು ಸೋಮವಾರ ಡೀಸೆಲ್ ಬೆಲೆಯನ್ನು ₹12 ಪೈಸೆ ಅಲ್ಪ ಪ್ರಮಾಣದಲ್ಲಿ ಹೆಚ್ಚಿಸಿದವು. ನಂತರ ಶುಕ್ರವಾರದವರೆಗೆ ಅದೇ ಬೆಲೆ ಮುಂದುವರೆದಿತ್ತು.
ನಿಧಾನಗತಿಯ ಬೇಡಿಕೆಯ ಹೊರತಾಗಿಯೂ ಡೀಸೆಲ್ ಬೆಲೆಯಲ್ಲಿ ಅನಿರೀಕ್ಷಿತ ಏರಿಕೆ ಕಾಣುವ ಮೂಲಕ ಸಾರಿಗೆ ಕ್ಷೇತ್ರದಲ್ಲಿ ದೊಡ್ಡ ಅನಾನುಕೂಲಕ್ಕೆ ತಳ್ಳಿದೆ. ಡೀಸೆಲ್ ಬೆಲೆ ಹೆಚ್ಚಾದ ಕಾರಣ, ಮಾರುಕಟ್ಟೆಯಲ್ಲಿ ಡೀಸೆಲ್ ಚಾಲಿತ ಕಾರುಗಳ ಮಾರಾಟ ನಿರೀಕ್ಷೆಯ ಕುರಿತು ವಾಹನ ಕಂಪನಿಗಳಿಗೆ ಕಳವಳವನ್ನುಂಟು ಮಾಡಿದೆ.
ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ ಕ್ರಮವಾಗಿ ₹87.19, ₹83.63, ₹82.10ರೂ ಇದೆ. ಆದರೆ, ಡೀಸೆಲ್ ಬೆಲೆ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ.