ಕರ್ನಾಟಕ

karnataka

ETV Bharat / business

'ಧ್ವಂಸಗೊಂಡಿದೆ', 'ಎದೆಗುಂದಿದೆ': ಭಾರತದ ಕೋವಿಡ್​ ಬಿಕ್ಕಟ್ಟಿಗೆ ಸತ್ಯ ನಾಡೆಲ್ಲಾ, ಸುಂದರ್ ಪಿಚೈ ಕಳವಳ - ಭಾರತದ ಕೋವಿಡ್​ಗೆ ಸತ್ಯಾ ನಾಡೆಲ್ಲಾ

ಭಾರತದಲ್ಲಿ ಹದಗೆಡುತ್ತಿರುವ ಕೋವಿಡ್ ಬಿಕ್ಕಟ್ಟನ್ನು ನೋಡಿ ವಿದೇಶಿಗರ ಮನಕಲಕುತ್ತಿದೆ. ಗೂಗಲ್ ಮತ್ತು ಗೂಗ್ಲರ್‌ಗಳು 135 ಕೋಟಿ ರೂ. ಗಿವ್‌ಇಂಡಿಯಾ, ಯುನಿಸೆಫ್​ನ ವೈದ್ಯಕೀಯ ಸರಬರಾಜು, ಹೆಚ್ಚಿನ ಸಮುದಾಯಗಳನ್ನು ಬೆಂಬಲಿಸಲು ಮತ್ತು ನಿರ್ಣಾಯಕ ಮಾಹಿತಿ ಹಬ್ಬಿಸುವ ಮೂಲಕ ನೆರವಾಗಲು ಅನುದಾನ ನೀಡಲಾಗುತ್ತಿದೆ ಎಂದು ಗೂಗಲ್​ ಸಿಇಒ ಸುಂದರ್​ ಪಿಚೈ ಟ್ವೀಟ್ ಮಾಡಿದ್ದಾರೆ.

Satya Nadella
Satya Nadella

By

Published : Apr 26, 2021, 3:11 PM IST

ನವದೆಹಲಿ:ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರದ ಸಾಂಕ್ರಾಮಿಕ ಯುದ್ಧದಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು ಭಾರತಕ್ಕೆ ಸಾಧ್ಯವಿರುವ ಎಲ್ಲ ಸಹಾಯದ ಭರವಸೆ ನೀಡಿದ್ದಾರೆ.

ಭಾರತದಲ್ಲಿ ಹದಗೆಡುತ್ತಿರುವ ಕೋವಿಡ್ ಬಿಕ್ಕಟ್ಟನ್ನು ನೋಡಿ ಆತಂಕ ವ್ಯಕ್ತಪಡಿಸಿದ್ದಾರೆ. ಗೂಗಲ್ ಮತ್ತು ಗೂಗ್ಲರ್‌ಗಳು 135 ಕೋಟಿ ರೂ. ಗಿವ್‌ಇಂಡಿಯಾ, ಯುನಿಸೆಫ್​ನ ವೈದ್ಯಕೀಯ ಸರಬರಾಜು, ಹೆಚ್ಚಿನ ಸಮುದಾಯಗಳನ್ನು ಬೆಂಬಲಿಸಲು ಮತ್ತು ನಿರ್ಣಾಯಕ ಮಾಹಿತಿ ಹಬ್ಬಿಸುವ ಮೂಲಕ ನೆರವಾಗಲು ಅನುದಾನ ನೀಡಲಾಗುತ್ತಿದೆ ಎಂದು ಪಿಚೈ ಟ್ವೀಟ್ ಮಾಡಿದ್ದಾರೆ.

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು ಭಾರತದ ಪ್ರಸ್ತುತ ಪರಿಸ್ಥಿತಿಯಿಂದ 'ಎದೆಗುಂದಿದ್ದಾರೆ' ಮತ್ತು ಅಮೆರಿಕ ಸರ್ಕಾರ ಸಹಾಯವನ್ನು ಸಜ್ಜುಗೊಳಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.

ಪರಿಹಾರ ಕಾರ್ಯಗಳಿಗೆ ನೆರವಾಗಲು ಮೈಕ್ರೋಸಾಫ್ಟ್ ತನ್ನ ಧ್ವನಿ, ಸಂಪನ್ಮೂಲಗಳು ಮತ್ತು ತಂತ್ರಜ್ಞಾನವನ್ನು ಬಳಸುವುದನ್ನು ಮುಂದುವರಿಸುತ್ತದೆ. ಆಮ್ಲಜನಕ ಸಾಂದ್ರತೆಯ ಸಾಧನಗಳ ಖರೀದಿಯನ್ನು ಬೆಂಬಲಿಸಲಿದೆ ಎಂದು ಅಭಯ ನೀಡಿದ್ದಾರೆ.

ABOUT THE AUTHOR

...view details