ಕರ್ನಾಟಕ

karnataka

ETV Bharat / business

ಕಠಿಣ ಸವಾಲುಗಳ ಮಧ್ಯೆ ಭಾರತವು ಶುದ್ಧ ಎನರ್ಜಿಯ ದಿಟ್ಟ ನಿರ್ಧಾರ ತೆಗೆದುಕೊಂಡಿದೆ: ಪ್ರಧಾನಿ ಮೋದಿ - ಭಾರತ- ಅಮೆರಿಕ ಹವಾಮಾನ ಬದಲಾವಣೆ ಮತ್ತು ಶುದ್ಧ ಎನರ್ಜಿ ಅಜಂಡಾ

2030ರ ವೇಳೆಗೆ 450 ಗಿಗಾವಾಟ್‌ಗಳ ಮಹತ್ವಾಕಾಂಕ್ಷೆಯ ನವೀಕರಿಸಬಹುದಾದ ಇಂಧನ ಗುರಿಯ ಬದ್ಧತೆ ಹೊಂದಿದ್ದೇವೆ. ನಮ್ಮ ಅಭಿವೃದ್ಧಿ ಸವಾಲುಗಳ ಹೊರತಾಗಿಯೂ ನಾವು ಶುದ್ಧ ಶಕ್ತಿ, ಇಂಧನ ದಕ್ಷತೆ, ಅರಣ್ಯೀಕರಣ ಮತ್ತು ಜೈವಿಕ ವೈವಿಧ್ಯತೆಯ ಬಗ್ಗೆ ಅನೇಕ ದಿಟ್ಟ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ವರ್ಚುವಲ್ ನಾಯಕರ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

PM Modi
PM Modi

By

Published : Apr 22, 2021, 10:30 PM IST

ನವದೆಹಲಿ:ಹವಾಮಾನ ಬದಲಾವಣೆಯ ಬೆದರಿಕೆಯನ್ನು ವಿಶ್ವದ ಲಕ್ಷಾಂತರ ಜನರಿಗೆ ಜೀವಂತ ವಾಸ್ತವ ಎಂದು ಕರೆದ ಪ್ರಧಾನಿ ನರೇಂದ್ರ ಮೋದಿ, ಭಾರತದ ಜೀವನಶೈಲಿ ಸುಸ್ಥಿರ ಸಾಂಪ್ರದಾಯಿಕ ಅಭ್ಯಾಸಗಳಲ್ಲಿ ಬೇರೂರಿದೆ. ದೇಶೀಯ ಅಭಿವೃದ್ಧಿ ಸವಾಲುಗಳ ಹೊರತಾಗಿಯೂ ಅನೇಕ ದಿಟ್ಟತನದಿಂದ ಶುದ್ಧ ಎನರ್ಜಿಯ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದರು.

2030ರ ವೇಳೆಗೆ 450 ಗಿಗಾವಾಟ್‌ಗಳ ಮಹತ್ವಾಕಾಂಕ್ಷೆಯ ನವೀಕರಿಸಬಹುದಾದ ಇಂಧನ ಗುರಿಯ ಬದ್ಧತೆ ಹೊಂದಿದ್ದೇವೆ. ನಮ್ಮ ಅಭಿವೃದ್ಧಿ ಸವಾಲುಗಳ ಹೊರತಾಗಿಯೂ ನಾವು ಶುದ್ಧ ಶಕ್ತಿ, ಇಂಧನ ದಕ್ಷತೆ, ಅರಣ್ಯೀಕರಣ ಮತ್ತು ಜೈವಿಕ ವೈವಿಧ್ಯತೆಯ ಬಗ್ಗೆ ಅನೇಕ ದಿಟ್ಟ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ವರ್ಚುವಲ್ ನಾಯಕರ ಶೃಂಗಸಭೆಯಲ್ಲಿ ಹೇಳಿದ್ದಾರೆ.

ಮಾನವೀಯತೆಯು ಇದೀಗ ಜಾಗತಿಕ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದೆ. ಈ ಘಟನೆಯು ಹವಾಮಾನ ಬದಲಾವಣೆಯ ಗಂಭೀರ ಬೆದರಿಕೆ ಮಾಯವಾಗಿಲ್ಲ ಎಂಬುದನ್ನು ಸಮಯೋಚಿತವಾಗಿ ನೆನಪಿಸುತ್ತದೆ. ಇದು ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ಜೀವಂತ ವಾಸ್ತವವಾಗಿದೆ ಎಂದರು.

ಹವಾಮಾನ ಬದಲಾವಣೆಯನ್ನು ಎದುರಿಸಲು ಮಾನವೀಯತೆಗಾಗಿ ದೃಢವಾದ ಕ್ರಮ ಅಗತ್ಯವಾಗಿದೆ. ದೊಡ್ಡ ಪ್ರಮಾಣದಲ್ಲಿ ಮತ್ತು ಜಾಗತಿಕ ವ್ಯಾಪ್ತಿಯೊಂದಿಗೆ ನಿರ್ಧಾರ ತೆಗೆದುಕೊಳ್ಳಬೇಕು. ಭಾರತದಲ್ಲಿ ನಾವು ನಮ್ಮ ಕೈಲಾದಷ್ಟು ಮಾಡುತ್ತಿದ್ದೇವೆ ಎಂದು ಹೇಳಿದರು.

ಅಧ್ಯಕ್ಷ ಬೈಡನ್ ಮತ್ತು ನಾನು ಭಾರತ-ಅಮೆರಿಕ ಹವಾಮಾನ ಮತ್ತು ಶುದ್ಧ ಇಂಧನ ಅಜೆಂಡಾ 2030 ಪಾಲುದಾರಿಕೆ ಪ್ರಾರಂಭಿಸುತ್ತಿದ್ದೇವೆ. ಒಗ್ಗೂಡಿ ನಾವು ಹೂಡಿಕೆಗಳನ್ನು ಸಜ್ಜುಗೊಳಿಸಲು, ಶುದ್ಧ ತಂತ್ರಜ್ಞಾನಗಳನ್ನು ಪ್ರದರ್ಶಿಸಲು ಮತ್ತು ಹಸಿರು ಸಹಯೋಗವನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತೇವೆ ಎಂದು ಮೋದಿ ತಿಳಿಸಿದರು.

ಹವಾಮಾನ-ಜವಾಬ್ದಾರಿಯುತ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿ, ಭಾರತದಲ್ಲಿ ಸುಸ್ಥಿರ ಅಭಿವೃದ್ಧಿಯ ಟೆಂಪ್ಲೆಟ್​ಗಳನ್ನು ರಚಿಸಲು ಭಾರತವು ಪಾಲುದಾರರನ್ನು ಸ್ವಾಗತಿಸುತ್ತದೆ. ಹಸಿರು ಹಣಕಾಸು ಮತ್ತು ಶುದ್ಧ ತಂತ್ರಜ್ಞಾನಗಳಿಗೆ ಕೈಗೆಟುಕುವ ಪ್ರವೇಶ ಅಗತ್ಯವಿರುವ ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೂ ಸಹ ಇದು ಸಹಾಯ ಮಾಡುತ್ತದೆ ಎಂದರು.

ನಾವು ಜಾಗತಿಕ ಹವಾಮಾನ ಕ್ರಿಯೆಯನ್ನು ಚರ್ಚಿಸುತ್ತಿರುವಾಗ, ನಾನು ನಿಮ್ಮೊಂದಿಗೆ ಒಂದು ಆಲೋಚನೆಯನ್ನು ತಿಳಿಸಲು ಬಯಸುತ್ತೇನೆ. ಭಾರತದ ತಲಾ ಇಂಗಾಲದ ಹೆಜ್ಜೆಗುರುತು ಜಾಗತಿಕ ಸರಾಸರಿಗಿಂತ ಶೇ 60ರಷ್ಟು ಕಡಿಮೆಯಾಗಿದೆ. ನಮ್ಮ ಜೀವನಶೈಲಿ ಇನ್ನೂ ಸುಸ್ಥಿರ ಸಾಂಪ್ರದಾಯಿಕ ಅಭ್ಯಾಸಗಳಲ್ಲಿ ಬೇರೂರಿದೆ ಎಂಬುದು ಇದಕ್ಕೆ ಕಾರಣ ಎಂದು ಪ್ರಧಾನಿ ವಿವರಿಸಿದರು.

ABOUT THE AUTHOR

...view details