ಕರ್ನಾಟಕ

karnataka

ETV Bharat / business

ನೋಟ್ ಬ್ಯಾನ್ ಆರ್ಥಿಕತೆ ಮೇಲೆ ಮಾಡಿದ  ಭಯೋತ್ಪಾದನೆ: ರಾಗಾ, ಪ್ರಿಯಾಂಕಾ ಟ್ವೀಟರ್​ ವಾರ್​ - Priyanka Vadra Commets about Demonetisation

ರಾಹುಲ್​ ಗಾಂಧಿ ಅವರು 2016ರ ನೋಟು ಅಮಾನ್ಯೀಕರಣವು ಎನ್​​ಡಿಎ ಸರ್ಕಾರದ ಭಯೋತ್ಪಾದಕ ದಾಳಿಯಂತಿದೆ. ಈ ದಾಳಿಯ ಹಿಂದಿರುವವರನ್ನು ಇನ್ನೂ ನ್ಯಾಯಕ್ಕಾಗಿ ತರಬೇಕಾಗಿಲ್ಲ ಎಂದು ಟ್ವೀಟ್ ಮಾಡಿದ್ದಾರೆ ಪ್ರಿಯಾಂಕಾ ವಾದ್ರಾ, ಡಿಮಾನಿಟೈಸೇಷನ್​ ಇದೊಂದು ವಿಪತ್ತು ಎಂದು ವ್ಯಂಗ್ಯವಾಡಿದ್ದಾರೆ. ಯಾರಾದರೂ ಇದರ ಜವಾಬ್ದಾರಿ ಹೊರಲು ಬಯಸುವಿರಾ ಎಂದು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ

By

Published : Nov 8, 2019, 1:30 PM IST

ನವದೆಹಲಿ: ಗರಿಷ್ಠ ಮುಖಬೆಲೆಯ ನೋಟು ರದ್ದಾಗಿ ಇಂದಿಗೆ ಮೂರು ವರ್ಷ ಕಳೆದಿವೆ. ಕಾಂಗ್ರೆಸ್​ ವರಿಷ್ಠರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ರಾಹುಲ್​ ಗಾಂಧಿ ಅವರು 2016ರ ನೋಟು ಅಮಾನ್ಯೀಕರಣವು ಎನ್​​ಡಿಎ ಸರ್ಕಾರದ ಭಯೋತ್ಪಾದಕ ದಾಳಿಯಂತಿದೆ. ಈ ದಾಳಿಯ ಹಿಂದಿರುವವರನ್ನು ಇನ್ನೂ ನ್ಯಾಯಕ್ಕಾಗಿ ತರಬೇಕಾಗಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ನೋಟು ರದ್ದತಿಯಂತಹ ಭಯೋತ್ಪಾದಕ ದಾಳಿಗೆ ಇಂದು 3ನೇ ವರ್ಷ. ಇದು ಭಾರತೀಯ ಆರ್ಥಿಕತೆಯನ್ನು ಧ್ವಂಸಗೊಳಿಸಿದೆ. ಅನೇಕ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಲಕ್ಷಾಂತರ ಸಣ್ಣ ಉದ್ಯಮಗಳನ್ನು ಅಳಿಸಿಹಾಕಿದೆ. ಲಕ್ಷಾಂತರ ಭಾರತೀಯರನ್ನು ನಿರುದ್ಯೋಗಿಗಳನ್ನಾಗಿ ಮಾಡಿದ. ಈ ಕೆಟ್ಟ ದಾಳಿಯ ಹಿಂದಿನವರನ್ನು ಇನ್ನೂ ನ್ಯಾಯಕ್ಕೆ ತರಬೇಕಾಗಿಲ್ಲ ಎಂದು ಟ್ವೀಟ್​ ಮಾಡಿದ್ದಾರೆ.

ರಾಹುಲ್ ಗಾಂಧಿ ಟ್ವೀಟ್​

ಕಾಂಗ್ರೆಸ್​ನ ಇನ್ನೊಬ್ಬ ವರಿಷ್ಠೆ ಪ್ರಿಯಾಂಕಾ ವಾದ್ರಾ ಅವರು, ಡಿಮಾನಿಟೈಸೇಷನ್​ ಇದೊಂದು ವಿಪತ್ತು ಎಂದು ವ್ಯಂಗ್ಯವಾಡಿದ್ದಾರೆ. ಯಾರಾದರೂ ಇದರ ಜವಾಬ್ದಾರಿ ಹೊರಲು ಬಯಸುವಿರಾ ಎಂದು ಪ್ರಶ್ನಿಸಿದ್ದಾರೆ.

ನೋಟು ರದ್ದತಿಯ ನಂತರದ 3 ವರ್ಷ ಮತ್ತು ಸರ್ಕಾರ ಹಾಗೂ ಎಲ್ಲ ದುಷ್ಕೃತ್ಯಗಳನ್ನು ಪ್ರಶಂಸಿಸುವ ಪ್ರತಿ ಹಕ್ಕನ್ನು ಅದರ ತಲೆಯ ಮೇಲೆ ಹೇರಲಾಗಿದೆ. ಇದು ನಮ್ಮ ಆರ್ಥಿಕತೆಯನ್ನು ನಾಶಪಡಿಸಿದ ವಿನಾಶ ಎಂಬುದು ಸಾಬೀತಾಯಿತು ಎಂದು ಟ್ವಿಟ್ಟರ್​ ಮುಖಾಂತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕಾ ವಾದ್ರಾ

ABOUT THE AUTHOR

...view details