ನವದೆಹಲಿ:ಬಹುಕೋಟಿ ಅಕ್ರಮ ಹೂಡಿಕೆ ಸಂಬಂಧಿಸಿದ ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ನ ಸಿಬಿಐ ವಿಶೇಷ ನ್ಯಾಯಮೂರ್ತಿ ಅಜಯ್ ಕುಮಾರ್ ಕುಹಾರ್ ಅವರು ಅನುಮತಿ ನೀಡಿದ್ದಾರೆ.
ಚಿದಂಬರಂ ಕೊರಳಿಗೆ ಐಎನ್ಎಕ್ಸ್ ಉರುಳು: ಮತ್ತಷ್ಟು ಕಗ್ಗಂಟಾದ 350 ಕೋಟಿ ರೂ. ಹಗರಣ - INX Media case
ಐಎನ್ಎಕ್ಸ್ ಮೀಡಿಯಾಗಿ ಕಾನೂನು ಬಾಹಿರವಾಗಿ 305 ಕೋಟಿ ರೂ. ಮೊತ್ತದ ವಿದೇಶಿ ಹೂಡಿಕೆ ಪ್ರೋತ್ಸಾಹ ಮಂಡಳಿಯ ಅನುಮತಿ ಒದಗಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ 2017ರ ಮೇ ತಿಂಗಳಲ್ಲಿ ಎಫ್ಐಆರ್ ದಾಖಲಿಸಿತ್ತು. ಅಕ್ಟೋಬರ್ 18ರಂದು ದೋಷಾರೋಪ ಪಟ್ಟಿ ದಾಖಲಿಸಿತ್ತು. ವಿಚಾರಣೆ ವೇಳೆ ಚಿದಂಬರಂ ಅವರನ್ನು ಇಡಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದರು.
ಐಎನ್ಎಕ್ಸ್
ಐಎನ್ಎಕ್ಸ್ ಮೀಡಿಯಾದಲ್ಲಿ ಕಾನೂನು ಬಾಹಿರವಾಗಿ 305 ಕೋಟಿ ರೂ. ಮೊತ್ತದ ವಿದೇಶಿ ಹೂಡಿಕೆ ಪ್ರೋತ್ಸಾಹ ಮಂಡಳಿಯ ಅನುಮತಿ ಒದಗಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ 2017ರ ಮೇ ತಿಂಗಳಲ್ಲಿ ಎಫ್ಐಆರ್ ದಾಖಲಿಸಿತ್ತು. ಅಕ್ಟೋಬರ್ 18ರಂದು ದೋಷಾರೋಪ ಪಟ್ಟಿ ದಾಖಲಿಸಿತ್ತು. ವಿಚಾರಣೆ ವೇಳೆ ಚಿದಂಬರಂ ಅವರನ್ನು ಇಡಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದರು.
ಇದನ್ನು ಪ್ರಶ್ನಿಸಿ ಸಿಬಿಐ ನ್ಯಾಯಾಲಯಕ್ಕೆ ಚಿದಂಬರಂ ಮೇಲ್ಮನವಿ ಸಲ್ಲಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ತಿಹಾರ್ ಜೈಲಿನಲ್ಲಿಯೇ ನವೆಂಬರ್ 22 ಹಾಗೂ 23ರಂದು ವಿಚಾರಣೆ ನಡೆಸಲು ಅನುಮತಿ ನೀಡಿದೆ.