ನವದೆಹಲಿ : ಕೋವಿಡ್ಗೆ ಇಡೀ ಜಗತ್ತೇ ತತ್ತರಿಸಿ ಹೋಗಿದೆ. ಇದರಿಂದಾಗಿ ಭಾರತದ ಪ್ರಸಕ್ತ ಹಣಕಾಸು ಬೆಳವಣಿಗೆಯು ಶೇಕಡಾ 11 ರಿಂದ ಶೇಕಡಾ 9.5 ಕ್ಕೆ ಕುಸಿದಿದೆ ಎಂದು ಎಸ್ ಅಂಡ್ ಪಿ ಗ್ಲೋಬಲ್ ತಿಳಿಸಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡಿದ್ದರಿಂದ ಲಾಕ್ಡೌನ್ ವಿಧಿಸಲಾಯ್ತು. ಇದರಿಂದಾಗಿ ಆರ್ಥಿಕ ಚಟುವಟಿಕೆಗಳಿಗೆ ಭಾರಿ ಹೊಡೆತ ಬಿದ್ದಿದ್ದು, ಆರ್ಥಿಕತೆ ಏಕಾಏಕಿ ಕುಸಿಯಿತು.
ಒಂದೆರಡು ವರ್ಷಗಳವರೆಗೆ ಈ ಬೆಳವಣಿಗೆ ಹೀಗಿಯೇ ಇರುತ್ತದೆ. ಅಲ್ಲದೆ, ಮಾರ್ಚ್ 31, 2023 ಕ್ಕೆ ಈ ಹಣಕಾಸು ವರ್ಷ ಕೊನೆಗೊಳ್ಳಲಿದ್ದು ಭಾರತದ ಹಣಕಾಸು ಬೆಳವಣಿಗೆಯು ಶೇಕಡಾ 7.8 ರಷ್ಟು ಆಗಲಿದೆ. ದೇಶದಲ್ಲಿ ಈವರೆಗೆ ಶೇಕಡಾ 15 ರಷ್ಟು ಜನರು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ವ್ಯಾಕ್ಸಿನೇಷನ್ ಡ್ರೈವ್ಅನ್ನು ಮತ್ತಷ್ಟು ವೇಗಗೊಳಿಸಲಾಗುತ್ತದೆ ಎಂದು ಎಸ್ ಅಂಡ್ ಪಿ ಹೇಳಿದೆ.
ಕೊರೊನಾ ಮೊದಲನೆ ಅಲೆಯ ಪರಿಣಾಮವಾಗಿ 2020-21ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 7.3 ರಷ್ಟು ಕಡಿಮೆಯಾಗಿದೆ. 2019-20ರಲ್ಲಿ ಶೇಕಡಾ 4 ರಷ್ಟು ಬೆಳವಣಿಗೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯು ಆರಂಭದಲ್ಲಿ ಎರಡು ಅಂಕಿಗಳಲ್ಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಸಾಂಕ್ರಾಮಿಕ ತೀವ್ರತೆಯು ವಿವಿಧ ಏಜೆನ್ಸಿಗಳ ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಬೀರಲಿದೆ. ಈ ತಿಂಗಳ ಆರಂಭದಲ್ಲಿ, ಆರ್‌ಬಿಐ ಕೂಡ ಈ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 9.5 ಕ್ಕೆ ಇಳಿಸಿದೆ. 2020 ಕ್ಕೆ ಹೋಲಿಸಿದರೆ ಉತ್ಪಾದನೆ ಮತ್ತು ರಫ್ತು ಕಡಿಮೆ ಕುಂಠಿತಗೊಂಸಿದೆ. ಆದರೆ ಸೇವೆಗಳು ತೀವ್ರವಾಗಿ ಅಸ್ತವ್ಯಸ್ತಗೊಂಡಿವೆ. 2021 ರಲ್ಲಿ ವಾಹನ ಮಾರಾಟಗಳು ತೀವ್ರವಾಗಿ ಕುಸಿದಿದ್ದು, ಗ್ರಾಹಕರನ್ನು ಸೆಳೆಯಲು ಕಂಪನಿಗಳು ವಿಫಲವಾಗಿವೆ.
ಇದನ್ನೂ ಓದಿ:JIOPHONE NEXT... ಗಣೇಶ ಚತುರ್ಥಿ ದಿನ ಮಾರುಕಟ್ಟೆಗೆ ಲಗ್ಗೆ ಎಂದ ಅಂಬಾನಿ
ಇತ್ತೀಚೆಗೆ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಆರ್ಥಿಕತೆ ಚೇತರಿಕೆ ಕಂಡುಬರುತ್ತಿದೆ. ವಿತ್ತೀಯ ಮತ್ತು ಹಣಕಾಸಿನ ನೀತಿಗಳು ಅನುಕೂಲಕರವಾಗಿವೆ ಎಂದು ಎಸ್ ಅಂಡ್ ಪಿ ಹೇಳಿದೆ. ದೇಶೀಯ ರೇಟಿಂಗ್ ಏಜೆನ್ಸಿ ಐಸಿಆರ್ಐ ಕೂಡ ಈ ಆರ್ಥಿಕ ವರ್ಷದಲ್ಲಿ ಆರ್ಥಿಕ ಬೆಳವಣಿಗೆಯನ್ನು ಶೇಕಡಾ 8.5 ರಷ್ಟನ್ನು ನಿರೀಕ್ಷಿಸಿದೆ. ಆದರೆ ಬ್ರಿಟಿಷ್ ದಲ್ಲಾಳಿ ಸಂಸ್ಥೆ ಬಾರ್ಕ್ಲೇಸ್ ಕಳೆದ ತಿಂಗಳು ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 9.2 ಕ್ಕೆ ಇಳಿಸಿತ್ತು.