ನವದೆಹಲಿ:ಕೋವಿಡ್-19 ಸೋಂಕಿನ ಮಧ್ಯೆ ಆನ್‌ಲೈನ್ ಮಾಧ್ಯಮ ಮೂಲಕ ಜಗತ್ತಿನಾದ್ಯಂತದ ಕಂಪನಿಗಳು ವರ್ಕ್ ಫ್ರಮ್ ಹೋಮ್ ಕಲ್ಚರ್ಗೆ ಮೊರೆಹೋಗುತ್ತಿರುವುದರಿಂದ ಸೈಬರ್ ಭದ್ರತೆಯ ಬೆದರಿಕೆಗಳು ಸಹ ಹೆಚ್ಚಾಗುತ್ತಿವೆ.
ದೊಡ್ಡ ಮತ್ತು ಸಣ್ಣ ಕಂಪನಿಗಳು ವರ್ಕ್ ಫ್ರಮ್ ಹೋಮ್ ಹೆಚ್ಚಾಗುತ್ತಿದಂತೆ ಅಗಾದ ಪರಿಣಾಮ ಬೀರಲಿದೆ. ಇದು ಸೈಬರ್ ಸುರಕ್ಷತೆಯ ಅಪಾಯದ ಆತಂಕಗಳಿಗೆ ಕಾರಣವಾಗುತ್ತಿದೆ. ಲ್ಯಾಪ್‌ಟಾಪ್‌ಗಳು ಮತ್ತು ಹೋಮ್ ಪಿಸಿಗಳಿಂದ ಕಾರ್ಪೊರೇಟ್ ಸ್ವಾಮ್ಯದ ಡೇಟಾ ಪ್ರವೇಶಿಸಲಾಗುತ್ತಿದೆ. ಇನ್-ಆಫೀಸ್ ಸೆಟಪ್‌ಗಳ ಮಟ್ಟದಷ್ಟು ಫೈರ್‌ವಾಲ್ ಮತ್ತು ಸುರಕ್ಷತೆಯನ್ನು ಅವುಗಳು ಹೊಂದಿಲ್ಲ ಎನ್ನುತ್ತಾರೆ ಅಲಿಯಾ ಕನ್ಸಲ್ಟಿಂಗ್ ಸಿಇಒ ದೀಪಕ್ ಭವಾನಿ.
ನಿರ್ವಹಣೆ ಮತ್ತು ಐಟಿ ವ್ಯವಸ್ಥಾಪಕರು ಕೆಲಸ ಮುಗಿದ ಬಳಿಕ ತಮ್ಮ ಡೇಟಾದ ಅಪಾಯವನ್ನು ಮರು ಮೌಲ್ಯಮಾಪನ ಮಾಡಬೇಕಾಗುತ್ತದೆ. ಡೇಟಾ ನಷ್ಟ ತಡೆಗಟ್ಟಲು ಸಹ ಮೌಲ್ಯಮಾಪನ ಮಾಡಬೇಕಿದೆ. ಇಲ್ಲದಿದ್ದರೆ ಇದು ದುರ್ಬಳಕೆಗೆ ಕಾರಣ ಆಗಬಹುದು ಎಂದು ಹೇಳಿದರು.
ಇಮೇಲ್ ಹಗರಣಗಳು, ಫಿಶಿಂಗ್ ಮತ್ತು ರ್ಯಾನ್ಸೊಮ್ವೇರ್ ನಂತಹ ಸೈಬರ್ ದಾಳಿಗಳು ನಡೆಯಲು ಕೋವಿಡ್-19 ವೇದಿಕೆಯಾಗಬಹುದು ಎಂಬ ಭಯ ಎದುರಾಗಿದೆ. ಸೈಬರ್ ಅಪರಾಧದ ಇಮೇಲ್ ಮತ್ತು ಸಂದೇಶಗಳು ಬಳಕೆದಾರರನ್ನು ದುರುದ್ದೇಶಪೂರಿತವಾಗಿ ಲಿಂಕ್ ತೆರೆಯಲು ಪ್ರೇರೇಪಿಸುತ್ತವೆ. ಕೋವಿಡ್-19ಗೆ ಸಂಬಂಧಿಸಿದ ಮಾಹಿತಿಯ ನೆಪದಲ್ಲಿ ಲಿಂಕ್‌ಗಳು, ಪಿಡಿಎಫ್, ಎಂಪಿ 4 ಅಥವಾ ಡಾಕ್ಸ್ ಫೈಲ್‌ಗಳ ಸೋಗಿನಲ್ಲಿ ಮರೆಮಾಚುವ ದುರುದ್ದೇಶಪೂರಿತ ಫೈಲ್‌ಗಳನ್ನು ಒಳಗೊಂಡಿರುತ್ತವೆ ಎಂದು ಪಾಲೊ ಆಲ್ಟೊ ನೆಟ್‌ವರ್ಕ್ಸ್‌ನ ಭಾರತದ ಪ್ರಾದೇಶಿಕ ಉಪಾಧ್ಯಕ್ಷ ಸಾರ್ಕ್ ಅನಿಲ್ ಭಾಸಿನ್ ಎಚ್ಚರಿಸಿದ್ದಾರೆ.
ಉದ್ಯೋಗಿಗಳು ವರ್ಕ್ ಫ್ರಮ್ ಹೋಮ್ ಪ್ರವೃತ್ತಿ ಹೆಚ್ಚಾಗುವುದರೊಂದಿಗೆ ಸೈಬರ್ ಭದ್ರತಾ ಬೆದರಿಕೆಗಳು ದ್ವಿಗುಣವಾಗುತ್ತವೆ ಎಂದು ಸೋನಿಕ್ವಾಲ್‌ನ ಪ್ರಾದೇಶಿಕ ಮಾರಾಟದ ಎಪಿಎಸಿ ವಿ.ಪಿ. ಡೆಬಾಶಿಶ್ ಮುಖರ್ಜಿ ಹೇಳಿದ್ದಾರೆ.
ಕಂಪ್ಯೂಟರ್ ಸಾಧನಗಳಿಗೆ ಹ್ಯಾಕಿಂಗ್ ಮತ್ತು ಡೇಟಾವನ್ನು ಕದಿಯುವ ದುರುದ್ದೇಶಪೂರಿತ ಉದ್ದೇಶದಿಂದ ಹ್ಯಾಕರ್‌ಗಳು ಸೃಜನಶೀಲತೆಯನ್ನು ಪಡೆಯುವ ಸಮಯ ಇದಾಗಿದೆ ಎಂದು ಮುಖರ್ಜಿ ವಾರ್ನ್ ಕೂಡಾ ಮಾಡಿದ್ದಾರೆ.