ನವದೆಹಲಿ :ತೈಲ ಮಾರುಕಟ್ಟೆಗಳು ರಕ್ತದೋಕುಳಿ ಕಂಡ ಒಂದು ದಿನದ ಬಳಿಕ ಮಂಗಳವಾರ ಕಚ್ಚಾ ತೈಲ ಬೆಲೆಯಲ್ಲಿ ಶೇ.11ರಷ್ಟು ಏರಿಕೆಯಾಗಿದೆ. ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಯೊಂದಿಗೆ (ಒಪೆಕ್) ಮಾತುಕತೆ ಮುಂದುವರಿಯಬಹುದು ಎಂದು ರಷ್ಯಾ ಸುಳಿವು ನೀಡಿದೆ.
ವರದಿಗಳ ಪ್ರಕಾರ 'ತೈಲ ಮಾರುಕಟ್ಟೆಗಳನ್ನು ಸ್ಥಿರಗೊಳಿಸಲು ಮಾಸ್ಕೋ ಒಪೆಕ್ ಜೊತೆಗಿನ ಕ್ರಮಗಳನ್ನು ತಳ್ಳಿಹಾಕಿಲ್ಲ' ಎಂದು ರಷ್ಯಾ ಇಂಧನ ಸಚಿವ ಅಲೆಕ್ಸಾಂಡರ್ ನೋವಾಕ್ ಹೇಳಿದ್ದಾರೆ. ಬ್ರೆಂಟ್ ಕಚ್ಚಾ ತೈಲವು ಪ್ರಸ್ತುತ ಪ್ರತಿ ಬ್ಯಾರೆಲ್‌ಗೆ 38 ಡಾಲರ್ನಂತೆ ವಹಿವಾಟು ನಡೆಸುತ್ತಿದೆ. ಇದು ಹಿಂದಿನ ಅಂತ್ಯದ ವೇಳೆಗೆ ಶೇ.11ರಷ್ಟು ಹೆಚ್ಚಳವಾಗಿದೆ. ಆದರೆ, ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (ಡಬ್ಲ್ಯುಟಿಐ) ಪ್ರತಿ ಬ್ಯಾರೆಲ್ ಮೇಲೆ ಶೇ. 11ರಷ್ಟು ಏರಿಕೆ ಮಾಡಿ 34 ಡಾಲರ್ನಲ್ಲಿ ಮಾರಾಟ ಮಾಡುತ್ತಿದೆ.