ಕರ್ನಾಟಕ

karnataka

ETV Bharat / business

ರೆಕ್ಕೆ ಬಿಚ್ಚದ ವಿಮಾನಗಳು: ಮೇ 17ರ ತನಕ ದೇಶಿ, ಅಂತಾರಾಷ್ಟ್ರೀಯ ಹಾರಾಟ ಬಂದ್ - ಲಾಕ್​ಡೌನ್

ಕೇಂದ್ರ ಗೃಹ ಸಚಿವಾಲಯವು ಈಗಿನ ಲಾಕ್​ಡೌನ್ ಅವಧಿಯನ್ನು ಮೇ 17ರ ವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ದೇಶಿಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರ ಹಾರಾಟದ ನಿಷೇಧವನ್ನು ಮೇ 17ರ 23:59 ಗಂಟೆವರೆಗೆ ವಿಸ್ತರಿಸಲಾಗಿದೆ ಎಂದು ಸಿವಿಲ್ ಡೈರೆಕ್ಟರೇಟ್ ಜನರಲ್ ಏವಿಯೇಷನ್ ​​(ಡಿಜಿಸಿಎ) ಹೇಳಿದೆ.

international flights
ವಿಮಾನ ಹಾರಾಟ

By

Published : May 2, 2020, 5:33 PM IST

ನವದೆಹಲಿ:ಲಾಕ್‌ಡೌನ್ ಅವಧಿ ವಿಸ್ತರಿಸಿರುವ ಹಿನ್ನೆಲೆಯಲ್ಲಿ ಎಲ್ಲಾ ದೇಶಿಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಮೇ 17ರವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ಕೇಂದ್ರ ಗೃಹ ಸಚಿವಾಲಯವು ಈಗಿನ ಲಾಕ್​ಡೌನ್ ಅವಧಿಯನ್ನು ಮೇ 17ರ ವರೆಗೆ ವಿಸ್ತರಿಸಿರುವ ಆದೇಶ ಹೊರಡಿಸಿದೆ. ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ದೇಶಿಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರ ಹಾರಾಟದ ನಿಷೇಧವನ್ನು ಮೇ 17ರ 23:59 ಗಂಟೆವರೆಗೆ ವಿಸ್ತರಿಸಲಾಗಿದೆ ಎಂದು ಸಿವಿಲ್ ಡೈರೆಕ್ಟರೇಟ್ ಜನರಲ್ ಏವಿಯೇಷನ್ ​​(ಡಿಜಿಸಿಎ) ಹೇಳಿದೆ.

ಡಿಜಿಸಿಎ ಸುತ್ತೋಲೆಯಲ್ಲಿ ವಿದೇಶಿ ಮತ್ತು ದೇಶೀಯ ವಿಮಾನಯಾನ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ಆರಂಭಿಸುವ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಈ ನಿರ್ಬಂಧವು ಅಂತಾರಾಷ್ಟ್ರೀಯ ಕಾರ್ಗೋ ಮತ್ತು ಡಿಜಿಸಿಎ ನಿರ್ದಿಷ್ಟವಾಗಿ ಅನುಮೋದಿಸಿದ ವಿಮಾನಗಳಿಗೆ ಅನ್ವಯಿಸುವುದಿಲ್ಲ ಎಂದಿದೆ.

ಮಾರ್ಚ್ 25ರಿಂದ ದೇಶಿಯ ಮತ್ತು ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಹಾರಾಟದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಭಾರತವು ಪ್ರಸ್ತುತ ಒಟ್ಟು 650 ವಿಮಾನಗಳನ್ನು ಹೊಂದಿದೆ.

ABOUT THE AUTHOR

...view details