ಕರ್ನಾಟಕ

karnataka

ETV Bharat / business

ಆರ್ಥಿಕತೆಗೆ ಕೆಟ್ಟ ಸುದ್ದಿ​! ಗ್ರಾಹಕರ ವಿಶ್ವಾಸ ಕಿತ್ತುಕೊಂಡ ಕೊರೊನಾ ವೈರಸ್​

ಪ್ರಸ್ತುತ ಪರಿಸ್ಥಿತಿ ಸೂಚ್ಯಂಕವು ಮೇ ತಿಂಗಳಲ್ಲಿ 58.1ರಿಂದ ದಾಖಲೆಯ 48.5ಕ್ಕೆ ಇಳಿದಿದೆ. ಇಲ್ಲಿನ 100ರ ಮಟ್ಟವು ನಿರಾಶಾವಾದವನ್ನು ಆಶಾವಾದದಿಂದ ವಿಭಜಿಸುತ್ತದೆ. ಭವಿಷ್ಯದ ನಿರೀಕ್ಷೆಗಳ ಸೂಚ್ಯಂಕವು ಪರಿಶೀಲನೆಯ ಅವಧಿಯಲ್ಲಿ 108.8 ರಿಂದ 96.4ಕ್ಕೆ ಇಳಿದಿದೆ ಎಂದು ಆರ್‌ಬಿಐ ಗ್ರಾಹಕರ ವಿಶ್ವಾಸಾರ್ಹ ಸಮೀಕ್ಷೆಯಲ್ಲಿ ಹೇಳಿದೆ.

Consumer
Consumer

By

Published : Jun 7, 2021, 1:22 PM IST

ನವದೆಹಲಿ:ಭಾರತೀಯ ಗ್ರಾಹಕರ ಆತ್ಮವಿಶ್ವಾಸವನ್ನು ಕೋವಿಡ್​-19 ಸೋಂಕು ತಗ್ಗಿಸಿದೆ. ಇದು ವಿಶ್ವದ ಅತ್ಯಂತ ಕೆಟ್ಟ ಆರ್ಥಿಕತೆಯಲ್ಲಿನ ಕಠೋರ ದತ್ತಾಂಶವಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕ ವಿಶ್ವಾಸಾರ್ಹ ಸಮೀಕ್ಷೆ ತಿಳಿಸಿದೆ.

ಪ್ರಸ್ತುತ ಪರಿಸ್ಥಿತಿ ಸೂಚ್ಯಂಕವು ಮೇ ತಿಂಗಳಲ್ಲಿ 58.1ರಿಂದ ದಾಖಲೆಯ 48.5ಕ್ಕೆ ಇಳಿದಿದೆ. ಇಲ್ಲಿನ 100ರ ಮಟ್ಟವು ನಿರಾಶಾವಾದವನ್ನು ಆಶಾವಾದದಿಂದ ವಿಭಜಿಸುತ್ತದೆ. ಭವಿಷ್ಯದ ನಿರೀಕ್ಷೆಗಳ ಸೂಚ್ಯಂಕವು ಪರಿಶೀಲನೆಯ ಅವಧಿಯಲ್ಲಿ 108.8 ರಿಂದ 96.4ಕ್ಕೆ ಇಳಿದಿದೆ ಎಂದು ಆರ್‌ಬಿಐ ಹೇಳಿದೆ.

ಇತ್ತೀಚಿನ ಸಮೀಕ್ಷೆಯ ಪ್ರಕಾರ, ಮನೆಯ ಖರ್ಚು ಕೂಡ ದುರ್ಬಲಗೊಂಡಿದೆ. ಇದು ಆರ್ಥಿಕ ಪರಿಸ್ಥಿತಿ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಗ್ರಾಹಕರ ಕಾಳಜಿಯಿಂದ ಸಂಭವಿಸಿದೆ. ಅಗತ್ಯ ಖರ್ಚು ಕೂಡ ಕಡಿಮೆಯಾಗಿದೆ ಎಂದಿದೆ.

ಓದಿ: ಸಿಲಿಕಾನ್ ವ್ಯಾಲಿ ಬದಲಾಗಿ 'TecHalli': ನಮ್ಮ ಬೆಂಗಳೂರಿಗೆ ಹೊಸ ಹೆಸರಿಟ್ಟ ಮಹೀಂದ್ರಾ, ನಿಲೇಕಣಿ

ಅಗತ್ಯವಿಲ್ಲದ ಖರ್ಚು ಸಂಕುಚಿತಗೊಳ್ಳುತ್ತಿರುವಾಗ ಮಿತವಾದ ಚಿಹ್ನೆಗಳನ್ನು ತೋರಿಸುತ್ತದೆ. ಚಿಲ್ಲರೆ ಚಟುವಟಿಕೆಯಿಂದ ಹಿಡಿದು ರಸ್ತೆ ದಟ್ಟಣೆ ಮತ್ತು ವಿದ್ಯುತ್ ಬೇಡಿಕೆಯು ಹೆಚ್ಚುತ್ತಿರುವ ನಿರುದ್ಯೋಗ ಮಟ್ಟಗಳವರೆಗಿನ ಎಲ್ಲದರಲ್ಲೂ ದೌರ್ಬಲ್ಯದ ಅಧಿಕ ಆವರ್ತನ ಸೂಚಕಗಳು ಕಾಣಿಸಿಕೊಂಡಿವೆ. ಅದರಲ್ಲೂ ಮುಖ್ಯವಾಗಿ ಬಳಕೆಯಿಂದ ಮುನ್ನಡೆಯುವ ಆರ್ಥಿಕತೆಗೆ ಇದೊಂದು ಕೆಟ್ಟ ಸುದ್ದಿ.

ABOUT THE AUTHOR

...view details