ನವದೆಹಲಿ :ಕಾಫಿ ಡೇ ಎಂಟರ್ಪ್ರೈಸಸ್ನ ಅಂಗಸಂಸ್ಥೆಯಾದ ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ 59.38 ಕೋಟಿ ರೂಪಾಯಿ ನಷ್ಟಕ್ಕೆ ಒಳಗಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಸೆಪ್ಟೆಂಬರ್ 30ಕ್ಕೆ ಈ ವರ್ಷದ ಎರಡನೇ ತ್ರೈಮಾಸಿಕದ ಅವಧಿ ಪೂರ್ಣಗೊಂಡಿದ್ದು, ಹಿಂದಿನ ವರ್ಷ ಇದೇ ಅವಧಿಯಲ್ಲಿ ಸುಮಾರು 98.42 ಕೋಟಿ ರೂಪಾಯಿ ನಷ್ಟವಾಗಿತ್ತು ಎಂದು ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಹೇಳಿಕೆ ನೀಡಿದೆ.
ಕಾಫಿ ಡೇ ಗ್ಲೋಬಲ್ ಲಿಮಿಟೆಡ್‌ನ ಈ ವರ್ಷದ ಒಟ್ಟು ಆದಾಯವು 78.69 ಕೋಟಿ ರೂಪಾಯಿಗಳಾಗಿದ್ದು, ಹಿಂದಿನ ವರ್ಷದ ಅವಧಿಯಲ್ಲಿ ಸಂಸ್ಥೆಯ ಒಟ್ಟು ಆದಾಯ 364.24 ಕೋಟಿ ರೂಪಾಯಿಗಳಷ್ಟಿತ್ತು.
ಸಿದ್ದಾರ್ಥ್ ಹಾಸನದ ಕಾಫಿ ಕಂಪನಿಯಲ್ಲಿ 12 ಕೋಟಿ ರೂ ವ್ಯವಹಾರ ನಡೀತಿತ್ತು!
ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಉತ್ಪಾದನೆ, ಖರೀದಿ ಮತ್ತು ರಫ್ತು ವಿಭಾಗವು 7.52 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಆದಾಯ 36.31 ಕೋಟಿ ರೂಪಾಯಿಗಳಷ್ಟಿತ್ತು.
ಚಿಲ್ಲರೆ ವ್ಯಾಪಾರವು 79.68 ಕೋಟಿ ರೂ.ಗಳ ಆದಾಯವನ್ನು ಹೊಂದಿದ್ದು, ಕಳೆದ ಹಣಕಾಸು ವರ್ಷದಲ್ಲಿ ಇದೇ ತ್ರೈಮಾಸಿಕದಲ್ಲಿ 368.93 ಕೋಟಿ ರೂಪಾಯಿಗಳಷ್ಟಿತ್ತು ಎಂದು ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಹೇಳಿದೆ.
ಕೊರೊನಾ ಸೋಂಕಿನಿಂದಾಗಿ ಲಾಕ್ಡೌನ್ ಜಾರಿಯಾದ ಕಾರಣದಿಂದ ಮಾರ್ಚ್ 2020ರಿಂದ ಕಾಫಿ ಡೇ ಗ್ಲೋಬಲ್ ವಹಿವಾಟನ್ನು ಮುಚ್ಚಿತ್ತು. ಮೊದಲ ತ್ರೈಮಾಸಿಕದಲ್ಲಿ ವ್ಯಾಪಾರ ಸಂಪೂರ್ಣ ಸ್ಥಗಿತವಾಗಿತ್ತು. ಜುಲೈ ತಿಂಗಳಿಂದ ವ್ಯಾಪಾರ ಆರಂಭವಾಗಿದ್ದು, ಸದ್ಯಕ್ಕೆ ಸುಧಾರಣೆ ಕಾಣುತ್ತಿದೆ ಎಂದು ಕಂಪನಿ ಸ್ಪಷ್ಟನೆ ನೀಡಿದೆ.