ಕರ್ನಾಟಕ

karnataka

ವಿದ್ಯುತ್ ವಲಯಕ್ಕೆ ಕಲ್ಲಿದ್ದಲು ಪೂರೈಕೆ ಕುಸಿತ

By

Published : Jan 14, 2021, 8:32 PM IST

ಅಧಿಕೃತ ಅಂಕಿಅಂಶಗಳ ಪ್ರಕಾರ, ಸರ್ಕಾರಿ ಸ್ವಾಮ್ಯದ ಕಂಪನಿಯು ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ 335.92 ಮೆ.ಟನ್ ಕಲ್ಲಿದ್ದಲನ್ನು ವಿದ್ಯುತ್ ಕ್ಷೇತ್ರಕ್ಕೆ ಪೂರೈಸಿತ್ತು. 2020ರ ಡಿಸೆಂಬರ್‌ನಲ್ಲಿ ಕೋಲ್ ಇಂಡಿಯಾ (ಸಿಐಎಲ್) ಇಂಧನ ಪೂರೈಕೆ 40.25 ಮೆಟ್ರಿಕ್ ಟನ್‌ಗೆ ಇಳಿದಿದ್ದು, ಕಳೆದ ಹಣಕಾಸು ವರ್ಷದ ಇದೇ ತಿಂಗಳಲ್ಲಿ 43.04 ಮೆ.ಟನ್ ಇತ್ತು.

Coal
ಕಲ್ಲಿದ್ದಲು

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ವಿದ್ಯುತ್ ವಲಯಕ್ಕೆ ಸರ್ಕಾರಿ ಸಿಐಎಲ್ ಕಲ್ಲಿದ್ದಲು ಪೂರೈಕೆ ಶೇ 5.3ರಷ್ಟು ಕುಸಿದು 318.04 ಮಿಲಿಯನ್ ಟನ್​ಗೆ (ಎಂಟಿ) ತಲುಪಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, ಸರ್ಕಾರಿ ಸ್ವಾಮ್ಯದ ಕಂಪನಿಯು ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ 335.92 ಮೆ.ಟನ್ ಕಲ್ಲಿದ್ದಲನ್ನು ವಿದ್ಯುತ್ ಕ್ಷೇತ್ರಕ್ಕೆ ಪೂರೈಸಿತ್ತು. 2020ರ ಡಿಸೆಂಬರ್‌ನಲ್ಲಿ ಕೋಲ್ ಇಂಡಿಯಾ (ಸಿಐಎಲ್) ಇಂಧನ ಪೂರೈಕೆ 40.25 ಮೆಟ್ರಿಕ್ ಟನ್‌ಗೆ ಇಳಿದಿದ್ದು, ಕಳೆದ ಹಣಕಾಸು ವರ್ಷದ ಇದೇ ತಿಂಗಳಲ್ಲಿ 43.04 ಮೆ.ಟನ್ ಇತ್ತು.

ಒಂಬತ್ತು ತಿಂಗಳ ಅವಧಿಯಲ್ಲಿ ಸಿಂಗರೇನಿ ಕೊಲಿಯರೀಸ್ ಕಂಪನಿ ಲಿಮಿಟೆಡ್ (ಎಸಿಸಿಎಲ್) ಇಂಧನ ಕ್ಷೇತ್ರಕ್ಕೆ ಪೂರೈಕೆಯು 26.87 ಮೆಟ್ರಿಕ್ ಟನ್‌ಗೆ ಇಳಿದಿದೆ. 2020ರ ಡಿಸೆಂಬರ್‌ನಲ್ಲಿ ಹಿಂದಿನ ಹಣಕಾಸು ವರ್ಷದ ಇದೇ ತಿಂಗಳಲ್ಲಿ 4.88 ಮೆ.ಟನ್​ನಿಂದ 4.50 ಮೆ.ಟನ್.ಗೆ ಇಳಿದಿದೆ ಎಂದು ಹೇಳಿದೆ.

ಇದನ್ನೂ ಓದಿ: ಚಿನ್ನ ಕೊಳ್ಳುವವರಿಗೆ ಶಾಕಿಂಗ್​ ನ್ಯೂಸ್: ಕೊರೊನಾ ಬಳಿಕ ದಿಢೀರನೇ ಏರಲಿದೆ ಬಂಗಾರದ ಬೆಲೆ

ಸಿಐಎಲ್ ಭಾರತದ ವಿದ್ಯುತ್ ಕ್ಷೇತ್ರಕ್ಕೆ ಒಣ ಇಂಧನದ ಪ್ರಮುಖ ಪೂರೈಕೆದಾರ. ಕೋವಿಡ್​-19 ಹರಡುವುದನ್ನು ನಿಯಂತ್ರಿಸಲು ಸರ್ಕಾರ ಕಳೆದ ಮಾರ್ಚ್‌ನಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಧಿಸಿತ್ತು. ದೇಶದಲ್ಲಿ ಕಡಿಮೆ ಆರ್ಥಿಕ ಚಟುವಟಿಕೆಗಳಿಂದಾಗಿ ವಿದ್ಯುತ್ ಬಳಕೆ 2020ರ ಮಾರ್ಚ್​ನಿಂದದ ಕ್ಷೀಣಿಸಲು ಪ್ರಾರಂಭಿಸಿತು.

ಕೋವಿಡ್​-19 ಪರಿಸ್ಥಿತಿಯು ಕಳೆದ ವರ್ಷದ ಮಾರ್ಚ್‌ನಿಂದ ಆಗಸ್ಟ್​ವರೆಗೆ ಸತತವಾಗಿ ಆರು ತಿಂಗಳ ಕಾಲ ವಿದ್ಯುತ್ ಬಳಕೆಯ ಮೇಲೆ ಪರಿಣಾಮ ಬೀರಿತು.

ವಿದ್ಯುತ್ ಕ್ಷೇತ್ರಕ್ಕೆ ಪಳೆಯುಳಿಕೆ ಇಂಧನವನ್ನು ಪೂರೈಸುವ ಪ್ರಮುಖ ಪೂರೈಕೆದಾರರಲ್ಲಿ ಒಬ್ಬರಾದ ಸಿಐಎಲ್, ದೇಶೀಯ ಕಲ್ಲಿದ್ದಲು ಉತ್ಪಾದನೆಯಲ್ಲಿ ಶೇ 80ಕ್ಕಿಂತ ಹೆಚ್ಚು ಪಾಲು ಹೊಂದಿದೆ. ಇದು 2023-24ರ ವೇಳೆಗೆ ಒಂದು ಶತಕೋಟಿ ಟನ್ ಉತ್ಪಾದನೆಯ ಮೇಲೆ ಕಣ್ಣಿಟ್ಟಿದೆ.

ABOUT THE AUTHOR

...view details