ಕರ್ನಾಟಕ

karnataka

ETV Bharat / business

ದೃಷ್ಟಿಗೋಚರ ರೇಖೆ ಮೀರಿ ಡ್ರೋನ್​ಗಳ​ ಪ್ರಾಯೋಗಿಕ ಹಾರಾಟಕ್ಕೆ 20 ಸಂಸ್ಥೆಗಳಿಗೆ ಅನುಮತಿ

ದೃಷ್ಟಿಗೋಚರ ರೇಖೆಯನ್ನು ಮೀರಿ ಡ್ರೋನ್ ಕಾರ್ಯಾಚರಣೆಗೆ ಸಂಬಂಧ ನಂತರದ ಯುಎವಿ ನಿಯಮಗಳ ಪೂರಕ ಚೌಕಟ್ಟಿನ ಅಭಿವೃದ್ಧಿಗೆ ನೆರವಾಗುವ ದೃಷ್ಟಿಯಿಂದ ಇದಕ್ಕೆ ಪ್ರಾಥಮಿಕ ಅನುಮತಿ ನೀಡಲಾಗಿದೆ. ಭವಿಷ್ಯದಲ್ಲಿ ಡ್ರೋನ್​ಗಳ ಅನುಮತಿ ಮತ್ತು ಡ್ರೋನ್ ಗಳನ್ನು ಬಳಸುವ ಇತರ ಪ್ರಮುಖ ಅರ್ಜಿಗಳಿಗೆ ಚೌಕಟ್ಟು ರೂಪಿಸಲು ಬಿವಿಎಲ್ಒಎಸ್ ಸಹಾಯ ಮಾಡುತ್ತದೆ ಎಂದು ನಾಗರೀಕ ವಿಮಾನಯಾನ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

drone flights
drone flights

By

Published : May 5, 2021, 7:01 PM IST

ನವದೆಹಲಿ: ದೃಷ್ಟಿಗೋಚರ ರೇಖೆ ಮೀರಿ (ಬಿವಿಎಲ್ಒಎಸ್) ಡ್ರೋನ್ ವಿಮಾನಗಳ ಪ್ರಾಯೋಗಿಕ ಹಾರಾಟ ನಡೆಸಲು ಮಾನವ ರಹಿತ ವಿಮಾನ ವ್ಯವಸ್ಥೆ (ಯುಎಎಸ್) ನಿಯಮಗಳು 2021ರಿಂದ 20 ಸಂಸ್ಥೆಗಳಿಗೆ ನಾಗರಿಕ ವಿಮಾನಯಾನ ಸಚಿವಾಲಯ ಷರತ್ತುಬದ್ಧ ವಿನಾಯಿತಿ ನೀಡಿದೆ.

ದೃಷ್ಟಿಗೋಚರ ರೇಖೆಯನ್ನು ಮೀರಿ ಡ್ರೋನ್ ಕಾರ್ಯಾಚರಣೆಗೆ ಸಂಬಂಧ ನಂತರದ ಯುಎವಿ ನಿಯಮಗಳ ಪೂರಕ ಚೌಕಟ್ಟಿನ ಅಭಿವೃದ್ಧಿಗೆ ನೆರವಾಗುವ ದೃಷ್ಟಿಯಿಂದ ಇದಕ್ಕೆ ಪ್ರಾಥಮಿಕ ಅನುಮತಿ ನೀಡಲಾಗಿದೆ. ಭವಿಷ್ಯದಲ್ಲಿ ಡ್ರೋನ್​ಗಳ ಅನುಮತಿ ಮತ್ತು ಡ್ರೋನ್ಗಳನ್ನು ಬಳಸುವ ಇತರ ಪ್ರಮುಖ ಅರ್ಜಿಗಳಿಗೆ ಚೌಕಟ್ಟು ರೂಪಿಸಲು ಬಿವಿಎಲ್ಒಎಸ್ ಸಹಾಯ ಮಾಡುತ್ತದೆ ಎಂದು ನಾಗರೀಕ ವಿಮಾನಯಾನ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಡ್ರೋನ್​ಗಳ ಬಿವಿಎಲ್ಒಎಸ್ ಹಾರಾಟ ನಡೆಸಲು ಕೇಂದ್ರ ಸರ್ಕಾರ ಪ್ರಾಯೋಗಿಕ ಮೌಲ್ಯಮಾಪನ ಮತ್ತು ನಿಗಾ ಸಮಿತಿ ರಚಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಮೇಲೆ ತಿಳಿಸಿದ ಉದ್ದೇಶಕ್ಕಾಗಿ ನಾಗರಿಕ ವಿಮಾನಯಾನ ಮಹಾ ನಿರ್ದೇಶಕರು ಇಒಐ ನೋಟಿಸ್ ನೀಡಿದ್ದಾರೆ. ಬೀಮ್ ಸಮಿತಿ 34 ಆಸಕ್ತರ ಅರ್ಜಿಗಳನ್ನು ಮೌಲ್ಯಮಾಪನ ಮಾಡಿದ್ದು, ಇದರಲ್ಲಿ 20 ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.

ಈ ವಿನಾಯಿತಿಗಳು ಇಒಐ ನೋಟಿಸ್​ನಲ್ಲಿ ತಿಳಿಸಲಾದ ಅವಶ್ಯತೆಗಳು ಮತ್ತು ಬೀಮ್ ಸಮಿತಿಯಿಂದ ನೀಡಲಾದ ನಿರ್ದೇಶನಗಳು/ ವಿನಾಯಿತಿಗಳು (ಭವಿಷ್ಯದಲ್ಲಿ ನೀಡಲಾಗುವುದು) ಸಂಪೂರ್ಣ ಅನುಸರಣೆಗೆ ಒಳಪಟ್ಟಿರುತ್ತದೆ. ಈ ಷರತ್ತುಬದ್ಧ ಅನುಮತಿ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲು ಅದು ಮಾನ್ಯವಾಗಿರುತ್ತದೆ.

ಕಾರ್ಯಾಚರಣೆಗೆ ಆಯ್ಕೆಯಾದ ಪಟ್ಟಿ

  1. ಏರೋಸ್ಪೇಸ್ ಇಂಡಸ್ಟ್ರಿ ಡವಲಪ್ ಮೆಂಟ್ ಅಸೋಸಿಯೇಷನ್ ಆಫ್ ತಮಿಳುನಾಡು (ಎಐಡಿಎಟಿ)
  2. ಎಎನ್ಆರ್ಎ ಕನ್ಸೋರ್ಷಿಯಮ್ ಎ
  3. ಎಎನ್ಆರ್​ಎ ಕನ್ಸೋರ್ಷಿಯಮ್ ಬಿ
  4. ಅಸ್ಟೆರಿಯಾ ಏರೋಸ್ಪೇಷ್ ಪ್ರೈವೇಟ್​ ಲಿಮಿಟೆಡ್
  5. ಆಟೋ ಮೈಕ್ರೋ ಯುಎಎಸ್ ಏರೋಟೆಕ್ ಪ್ರೈವೇಟ್​ ಲಿಮಿಟೆಡ್
  6. ಸೆಂಟಿಲಿಯನ್ ನೆಟ್ ವರ್ಕ್ಸ್ ಪ್ರೈವೇಟ್​ ಲಿಮಿಟೆಡ್
  7. ಕ್ಲಿಯರ್ ಸ್ಕೈ ಫ್ಲೈಟ್ ಕನ್ಸೋರ್ಷಿಯಮ್
  8. ದಕ್ಷ ಅನ್ ಮ್ಯಾನ್ಡ್ ಸಿಸ್ಟಮ್ಸ್ ಪ್ರೈವೇಟ್​ ಲಿಮಿಟೆಡ್
  9. ದುಂಜೋ ಏರ್ ಕನ್ಸೋರ್ಷಿಯಮ್
  10. ಮರುತ್ ಡ್ರೋನ್ ಟೆಕ್ ಪ್ರೈವೇಟ್​ ಲಿಮಿಟೆಡ್
  11. ಸಾಗರ್ ಡಿಫೆನ್ಸ್ ಇಂಜಿನಿಯರಿಂಗ್ ಪ್ರೈವೇಟ್​ ಲಿಮಿಟೆಡ್
  12. ಸೌಬಿಕ ಕನ್ಸೋರ್ಷಿಯಮ್
  13. ಸ್ಕೈಲಾರ್ಕ್ ಡ್ರೋನ್ಸ್ ಅಂಡ್ ಸ್ವಿಗ್ಗಿ
  14. ಶಾಪ್ ಎಕ್ಸ್ ಒಮ್ನಿಪ್ರೆಸೆಂಟ್ ಕನ್ಸೋರ್ಷಿಯಮ್
  15. ಸ್ಪೈಸ್ ಜೆಟ್ ಲಿಮಿಟೆಡ್
  16. ಟೆರಾಡ್ರೋಣ್ ಕನ್ಸೋರ್ಷಿಯಮ್ ಬಿ
  17. ದಿ ಕನ್ಸೋರ್ಷಿಯಮ್
  18. ತ್ರೋಟ್ಲೆ ಏರೋಸ್ಪೇಸ್ ಸಿಸ್ಟಮ್ಸ್ ಪ್ರೈವೇಟ್​ ಲಿಮಿಟೆಡ್
  19. ವ್ಯಾಲ್ಯು ಥಾಟ್ ಐಟಿ ಸಲೂಷನ್ಸ್ ಪ್ರೈವೇಟ್​ ಲಿಮಿಟೆಡ್
  20. ವರ್ಜಿನಿಯಾ ಟೆಕ್ ಇಂಡಿಯಾ

ABOUT THE AUTHOR

...view details