ಮುಂಬೈ:ಏವಿಯೇಷನ್ ಟರ್ಬೈನ್ ಇಂಧನವನ್ನು (ಎಟಿಎಫ್) ಜಿಎಸ್‌ಟಿ ವ್ಯಾಪ್ತಿಗೆ ತರಬೇಕೆಂಬ ವಿಮಾನಯಾನ ಉದ್ಯಮದ ಬೇಡಿಕೆಯ ಮೇಲೆ ನಾಗರಿಕ ವಿಮಾನಯಾನ ಸಚಿವಾಲಯ ಕಾರ್ಯನಿರತವಾಗಿದೆ. ಈ ವಿಷಯವನ್ನು ಹಣಕಾಸು ಸಚಿವಾಲಯದೊಂದಿಗೆ ಕೈಗೆತ್ತಿಕೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಮಾನಯಾನ ಇಂಧನ ಟರ್ಬೈನ್ ಇಂಧನವನ್ನು (ಎಟಿಎಫ್) ಜಿಎಸ್‌ಟಿ ಅಡಿಯಲ್ಲಿ ತರಲು ನಾಗರಿಕ ವಿಮಾನಯಾನ ಇಲಾಖೆ ಕೆಲಸ ಮಾಡುತ್ತಿದೆ. ಈ ಬಗ್ಗೆ ಹಣಕಾಸು ಸಚಿವಾಲಯದ ಗಮನಕ್ಕೆ ತರಲಾಗಿದೆ ಎಂದು ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲಾ ಅವರು ಜಾಗತಿಕ ವಾಯುಯಾನ-ವಾಯು ಸರಕು ಸಮ್ಮೇಳನದಲ್ಲಿ ಹೇಳಿದರು.
ಇದನ್ನೂ ಓದಿ: 2021ರಲ್ಲಿ ಭಾರತದ ಆರ್ಥಿಕತೆ ಸದೃಢವಾಗಿ ವೃದ್ಧಿಸಲಿದೆ: ಸಿಇಒಗಳ ಬಲ'ವಾದ'
ವಿಮಾನ ನಿರ್ವಹಣೆಗೆ ಎಟಿಎಫ್ ಅಥವಾ ಜೆಟ್ ಇಂಧನ ವೆಚ್ಚ ಶೇ 45-55ರಷ್ಟಿದೆ. ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಈ ವೆಚ್ಚ ನಮ್ಮ ದೇಶದಲ್ಲಿ ಅತ್ಯಧಿಕವಾಗಿದೆ. ಎಟಿಎಫ್ ಅನ್ನು ಜಿಎಸ್‌ಟಿ ಅಡಿಯಲ್ಲಿ ತರಬೇಕೆಂದು ಉದ್ಯಮ ಬಯಸುತ್ತದೆ. ಈ ವಿಷಯದ ಬಗ್ಗೆ ನಾವು ಕೆಲಸ ಮಾಡುತ್ತಿದ್ದೇವೆ ಎಂದರು.
ಈ ವಿಷಯವನ್ನು ಹಣಕಾಸು ಸಚಿವಾಲಯದ ಗಮನಕ್ಕೆ ತರಲಾಗಿದ್ದು, ಜಿಎಸ್‌ಟಿ ಪರಿಷತ್ತಿನಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ನಾವೂ ಇದಕ್ಕಾಗಿ ಕಾರ್ಯ ನಿರತವಾಗಿದ್ದೇವೆ. ಆರ್ಥಿಕ ಕ್ಷೇತ್ರಗಳ ಬಹುಪಾಲು ಭಾಗವು ದೊಡ್ಡ ಸಂಕಷ್ಟಗಳನ್ನು ಎದುರಿಸಿದೆ. ವಾಯುಯಾನವೂ ಹೊರತಾಗಿಲ್ಲ ಎಂದು ಹೇಳಿದರು.