ಕರ್ನಾಟಕ

karnataka

ETV Bharat / business

ಭಾರತೀಯ ಕೈಗಾರಿಕಾ ಮಹಾಸಂಘದ ನೂತನ ಅಧ್ಯಕ್ಷರಾಗಿ ಟಿವಿ ನರೇಂದ್ರನ್​ ನೇಮಕ

ವಾರ್ಷಿಕ ಸಾಮಾನ್ಯ ಸಭೆಯ ನಂತರ (ಎಜಿಎಂ), ಅದರ ರಾಷ್ಟ್ರೀಯ ಕೌನ್ಸಿಲ್ ಸಭೆಯಲ್ಲಿ ಸಿಐಐ ತನ್ನ ಹೊಸ ಪದಾಧಿಕಾರಿಗಳನ್ನು 2021-22ರ ವರ್ಷಕ್ಕೆ ಆಯ್ಕೆ ಮಾಡಿತು. ಟಾಟಾ ಸ್ಟೀಲ್ ಲಿಮಿಟೆಡ್‌ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿ ವಿ ನರೇಂದ್ರನ್ ಅವರು 2021-22ರವರೆಗೆ ಸಿಐಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಟಿವಿ ನರೇಂದ್ರನ್
ಟಿವಿ ನರೇಂದ್ರನ್

By

Published : May 31, 2021, 5:09 PM IST

ನವದೆಹಲಿ:ಟಾಟಾ ಸ್ಟೀಲ್ ಲಿಮಿಟೆಡ್‌ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿ ವಿ ನರೇಂದ್ರನ್ ಅವರನ್ನು 2021-22ರ ಹೊಸ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಭಾರತೀಯ ಕೈಗಾರಿಕಾ ಮಹಾಸಂಘ (ಸಿಐಐ) ಸೋಮವಾರ ತಿಳಿಸಿದೆ.

ನರೇಂದ್ರನ್​ ಅವರು ಕೊಟಕ್ ಮಹೀಂದ್ರಾ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಉದಯ್ ಕೊಟಕ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ವಾರ್ಷಿಕ ಸಾಮಾನ್ಯ ಸಭೆಯ ನಂತರ (ಎಜಿಎಂ), ಅದರ ರಾಷ್ಟ್ರೀಯ ಕೌನ್ಸಿಲ್ ಸಭೆಯಲ್ಲಿ ಸಿಐಐ ತನ್ನ ಹೊಸ ಪದಾಧಿಕಾರಿಗಳನ್ನು 2021-22ರ ವರ್ಷಕ್ಕೆ ಆಯ್ಕೆ ಮಾಡಿತು. ಟಾಟಾ ಸ್ಟೀಲ್ ಲಿಮಿಟೆಡ್‌ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿ ವಿ ನರೇಂದ್ರನ್ ಅವರು 2021-22ರವರೆಗೆ ಸಿಐಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ನರೇಂದ್ರನ್ ಸಿಐಐ ಜೊತೆ ಹಲವು ವರ್ಷಗಳಿಂದ ರಾಜ್ಯ, ಪ್ರಾದೇಶಿಕ ಮತ್ತು ರಾಷ್ಟ್ರಮಟ್ಟದಲ್ಲಿ ತೊಡಗಿಸಿಕೊಂಡಿದ್ದರು. 2020-21ರ ಸಿಐಐನ ಅಧ್ಯಕ್ಷ ಹುದ್ದೆಯೂ ನಿರ್ವಹಿಸಿದ್ದರು ಎಂದು ಪ್ರಕಟಣೆಯಲ್ಲಿ ಹೇಳಿದೆ.

ನರೇಂದ್ರನ್ ಐಐಎಂ ಕೋಲ್ಕತ್ತಾ ಮತ್ತು ಎನ್ಐಟಿ ತಿರುಚ್ಚಿಯ ಹಳೆಯ ವಿದ್ಯಾರ್ಥಿ. ಬಜಾಜ್ ಫಿನ್‌ಸರ್ವ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಬಜಾಜ್ ಈಗ 2021-22ರ ಸಿಐಐನ ಅಧ್ಯಕ್ಷರಾಗಲಿದ್ದಾರೆ ಎಂದು ತಿಳಿಸಲಾಗಿದೆ. ಸಿಐಐ ಜೊತೆ ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ.

ಬಜಾಜ್ 2019-20ರ ಅವಧಿಯಲ್ಲಿ ಸಿಐಐ ಪಶ್ಚಿಮ ವಲಯದ ಅಧ್ಯಕ್ಷರಾಗಿದ್ದರು. ವಿಮೆ ಮತ್ತು ಪಿಂಚಣಿ ಕುರಿತ ಸಿಐಐ ರಾಷ್ಟ್ರೀಯ ಸಮಿತಿಗಳು ಮತ್ತು ಫಿನ್‌ಟೆಕ್‌ನಲ್ಲಿ ಸಿಐಐ ಕಾರ್ಯಪಡೆಗಳನ್ನು ಮುನ್ನಡೆಸಿದ್ದರು.

ಇದೇ ವೇಳೆ ಹೀರೋ ಮೊಟೊಕಾರ್ಪ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ಸಿಇಒ ಪವನ್ ಮುಂಜಾಲ್ ಅವರು 2021-22ರವರೆಗೆ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಹೇಳಿದೆ.

ABOUT THE AUTHOR

...view details