ಕರ್ನಾಟಕ

karnataka

ETV Bharat / business

ವಾಣಿಜ್ಯ ಸಮರ ಅಂತ್ಯವಾಡಲು ಜಂಟಿ ಪ್ರಯತ್ನ ಅಗತ್ಯ: ಅಮೆರಿಕಕ್ಕೆ ಚೀನಾ ವಾಣಿಜ್ಯ ಸಚಿವರ ಕರೆ

ಸುಂಕದ ಯುದ್ಧ ಮಾತುಕತೆಗಳು ಪುನಾರಂಭಗೊಳ್ಳುವಾಗ ಅಥವಾ ಬೀಜಿಂಗ್ ರಿಯಾಯಿತಿ ನೀಡಬಹುದೇ ಎಂಬ ಬಗ್ಗೆ ಯಾವುದೇ ಸೂಚನೆ ನೀಡಲಿಲ್ಲ. 'ಸಹಕಾರ ಮಾತ್ರವೇ ನಮ್ಮ ಮುಂದೆ ಇರುವ ಸರಿಯಾದ ಆಯ್ಕೆಯಾಗಿದೆ' ಎಂದು ವಾಂಗ್ ವೆಂಟಾವೊ ಸುದ್ದಿಗೋಷ್ಠಿಯಲ್ಲಿ ಹೇಳಿದರು.

China-US trade
China-US trade

By

Published : Feb 24, 2021, 5:44 PM IST

ಬೀಜಿಂಗ್: ವ್ಯಾಪಾರವನ್ನು ಪುನರುಜ್ಜೀವನಗೊಳಿಸಲು ಜಂಟಿ ಪ್ರಯತ್ನ ಮಾಡಬೇಕೆಂದು ಚೀನಾದ ವಾಣಿಜ್ಯ ಸಚಿವ ವಾಷಿಂಗ್ಟನ್‌ಗೆ ಮನವಿ ಮಾಡಿದರು.

ಸುಂಕದ ಯುದ್ಧ ಮಾತುಕತೆಗಳು ಪುನಾರಂಭಗೊಳ್ಳುವಾಗ ಅಥವಾ ಬೀಜಿಂಗ್ ರಿಯಾಯಿತಿ ನೀಡಬಹುದೇ ಎಂಬ ಬಗ್ಗೆ ಯಾವುದೇ ಸೂಚನೆ ನೀಡಲಿಲ್ಲ. 'ಸಹಕಾರ ಮಾತ್ರವೇ ನಮ್ಮ ಮುಂದೆ ಇರುವ ಸರಿಯಾದ ಆಯ್ಕೆಯಾಗಿದೆ' ಎಂದು ವಾಂಗ್ ವೆಂಟಾವೊ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಧ್ಯಕ್ಷ ಜೋ ಬೈಡನ್ ಬೀಜಿಂಗ್‌ ಜತೆಗೆ ವ್ಯವಹರಿಸುವ ತಂತ್ರ ಇನ್ನೂ ಪ್ರಕಟಿಸಬೇಕಾಗಿಲ್ಲ. ಆದರೆ, ವ್ಯಾಪಾರ ಮತ್ತು ತಂತ್ರಜ್ಞಾನದ ದೂರುಗಳ ಮೇಲೆ ಒತ್ತಡವನ್ನು ನವೀಕರಿಸುವ ನಿರೀಕ್ಷೆಯಿದೆ. ಈ ಹಿಂದೆ ಡೊನಾಲ್ಡ್ ಟ್ರಂಪ್‌ ಅವರು ಚೀನಾದ ಆಮದಿನ ಮೇಲೆ ಹೆಚ್ಚಿನ ತೆರಿಗೆ ಪ್ರೇರೇಪಿಸಲು ತಂತ್ರಜ್ಞಾನದ ಒತ್ತಡ ಕಾರಣವಾಗಿತ್ತು.

ಇದನ್ನೂ ಓದಿ: ಕೊರೊನ ಲಸಿಕೆ ಉಚಿತವಿಲ್ಲ! 'ಪ್ರೈವೇಟ್ ಆಸ್ಪತ್ರೆಗಳಲ್ಲಿ ಜನ ಹಣ ಪಾವತಿಸಬೇಕು'

ಜಾಗತಿಕ ವ್ಯಾಪಾರ ಅಡ್ಡಿಪಡಿಸುವ ವಾಷಿಂಗ್ಟನ್ ಮತ್ತು ಬೀಜಿಂಗ್ ಪರಸ್ಪರರ ಶತಕೋಟಿ ಡಾಲರ್ ಸರಕುಗಳ ಮೇಲೆ ಸುಂಕ ಹೆಚ್ಚಿಸಿವೆ. ಮುಂದಿನ ಶುಲ್ಕ ಮುಂದೂಡಲು ಉಭಯ ರಾಷ್ಟ್ರಗಳು ಕಳೆದ ಜನವರಿಯಲ್ಲಿ ಒಪ್ಪಿಕೊಂಡವು. ಆದರೆ, ಈಗಾಗಲೇ ವಿಧಿಸಲಾದ ಹೆಚ್ಚಿನ ತೆರಿಗೆಗಳು ಚಾಲ್ತಿಯಲ್ಲಿವೆ.

ಅಮೆರಿಕನ್ ಸೋಯಾಬೀನ್ ಮತ್ತು ಇತರ ರಫ್ತುಗಳನ್ನು ಖರೀದಿಸುವ ಮೂಲಕ ಬೀಜಿಂಗ್ ಅಮೆರಿಕದೊಂದಿಗಿನ ತನ್ನ ವ್ಯಾಪಾರ ಹೆಚ್ಚುವರಿ ಕಡಿಮೆ ಮಾಡಲು ಒಪ್ಪಿಕೊಂಡಿತು. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಇದು ನಿಗದಿಪಡಿಸಿದ ಗುರಿಗಳಿಗಿಂತ ಕಡಿಮೆಯಾಗಿ ಸುಮಾರು ಶೇ 55ರಷ್ಟು ಸರಕುಗಳನ್ನು ಖರೀದಿಸಿತು.

ಚೀನಾದ ವಿದೇಶಿ ವ್ಯಾಪಾರ ಪರಿಸ್ಥಿತಿ ತೀವ್ರ ಸಂಕೀರ್ಣವಾಗಿದೆ. ಮಾರಾಟ ಉತ್ತೇಜಿಸಲು ಬೀಜಿಂಗ್ ಇ - ಕಾಮರ್ಸ್ ಮತ್ತು ಇತರ ಉಪಕ್ರಮಗಳನ್ನು ಪ್ರಾರಂಭಿಸುತ್ತಿದೆ. ಬಂದರು, ರೈಲ್ವೆ ಮತ್ತು ಇತರ ವ್ಯಾಪಾರ - ಸಂಬಂಧಿತ ಮೂಲ ಸೌಕರ್ಯಗಳನ್ನು ನಿರ್ಮಿಸಲು ಬೆಲ್ಟ್ ಆ್ಯಂಡ್​ ರೋಡ್​​ ಇನ್​ಸೆಂಟಿವ್​ ಗಮನ ಹರಿಸಲಾಗುತ್ತಿದೆ ಎಂದು ಹೇಳಿದರು.

ABOUT THE AUTHOR

...view details