ಕರ್ನಾಟಕ

karnataka

ETV Bharat / business

ಗಡಿ ಗಲಾಟೆ ಬಳಿಕ ಭಾರತದ ಮೇಲೆ ಚೀನಾ ಹ್ಯಾಕರ್​ಗಳಿಂದ ಸೈಬರ್​ ಅಟ್ಯಾಕ್​​!

ಎಫ್‌ಡಿಐ ಮೂಲಕ ಭಾರತ ಪ್ರವೇಶಿಸುವ ವಿದೇಶಿ ಕಂಪನಿಗಳ ಚಟುವಟಿಕೆಯ ಹೊಣೆಗಾರಿಕೆಯನ್ನು ಕೈಗಾರಿಕೆ ಮತ್ತು ಆಂತರಿಕ ವಾಣಿಜ್ಯ ಉತ್ತೇಜನಾ ಇಲಾಖೆ (ಡಿಪಿಐಐಟಿ) ನೋಡಿಕೊಳ್ಳುತ್ತದೆ. ಡಿಪಿಐಐಟಿ ಸೈಟ್​ ಪರದೆ ಮೇಲೆ ಚೀನಿ ಪತ್ರವೊಂದು ಕಾಣಿಸಿಕೊಂಡಿದೆ. ಚೀನಾ ಮೂಲದ ಕೆಲವು ಎಫ್​​ಡಿಐಗಳಿಗೆ ಕಡಿವಾಣ ಬಿದ್ದಿದ್ದರಿಂದ ಚೀನಿ ಹ್ಯಾಕರ್‌ಗಳು ಡಿಪಿಐಐಟಿಯ ವೆಬ್‌ಸೈಟ್ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ.

Chinese hackers
ಚೀನೀ ಹ್ಯಾಕರ್​

By

Published : Jun 22, 2020, 6:47 PM IST

ನವದೆಹಲಿ: ಹೆಚ್ಚುತ್ತಿರುವ ಭಾರತ-ಚೀನಾ ಗಡಿ ಉದ್ವಿಗ್ನತೆಯಿಂದ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್​ಟಿ-ಇನ್) ಚೀನಾದಿಂದ ಫಿಶಿಂಗ್ ದಾಳಿ ಮುನ್ನೆಚ್ಚರಿಕೆ ಮಧ್ಯೆಯೂ ಚೀನಿ ಹ್ಯಾಕರ್​​, ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರ ಇಲಾಖೆಯ ಪ್ರಮುಖ ವೆಬ್‌ಸೈಟ್​ವೊಂದನ್ನು ಹ್ಯಾಕ್​​ ಮಾಡಿದೆ.

ಎಫ್‌ಡಿಐಯ ಮೂಲಕ ಭಾರತ ಪ್ರವೇಶಿಸುವ ವಿದೇಶಿ ಕಂಪನಿಗಳ ಚಟುವಟಿಕೆಯ ಹೊಣೆಗಾರಿಕೆಯನ್ನು ಕೈಗಾರಿಕೆ ಮತ್ತು ಆಂತರಿಕ ವಾಣಿಜ್ಯ ಉತ್ತೇಜನಾ ಇಲಾಖೆ (ಡಿಪಿಐಐಟಿ) ನೋಡಿಕೊಳ್ಳುತ್ತದೆ. ಡಿಪಿಐಐಟಿ ಸೈಟ್​ ಪರದೆಯ ಮೇಲೆ ಚೀನಿ ಪತ್ರವೊಂದು ಕಾಣಿಸಿಕೊಂಡಿದೆ. ಅದು "ಧ್ಯಾನ"ನ (Meditation)ದಂತೆ ಕಾಣುತ್ತಿದೆ.

ಕೇಂದ್ರ ಸರ್ಕಾರದ ಕಣ್ಗಾವಲಿನಲ್ಲಿ ವಿದೇಶಿ ಕಂಪನಿಗಳು ಹೂಡಿಕೆ ಮಾಡಬೇಕು ಎಂಬ ಷರತ್ತನ್ನು ಇತ್ತೀಚೆಗೆ ಜಾರಿಗೆ ತರಲಾಯಿತು. ಚೀನಾ ಮೂಲದ ಕೆಲವು ಎಫ್​ಡಿಐಗಳಿಗೆ ಕಡಿವಾಣ ಬಿದ್ದಿದ್ದರಿಂದ ಚೀನಿ ಹ್ಯಾಕರ್‌ಗಳು ಡಿಪಿಐಐಟಿಯ ವೆಬ್‌ಸೈಟ್ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಹ್ಯಾಕ್​ ಬಳಿಕ ವೆಬ್‌ಸೈಟ್ ಪರಿಷ್ಕರಿಸಲಾಗಿದೆ.

ವಾಣಿಜ್ಯ ಸಚಿವಾಲಯದ ಅಧೀನದಲ್ಲಿರುವ ಡಿಪಿಐಐಟಿಯ ಹಿರಿಯ ಅಧಿಕಾರಿಯೊಬ್ಬರು ತಮ್ಮ ವೆಬ್‌ಸೈಟ್ ನಿಜಕ್ಕೂ ಹ್ಯಾಕ್ ಆಗಿದೆ ಎಂದಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಕಟಣೆ ಬಿಡುಗಡೆ ಮಾಡಲು ಸಚಿವಾಲಯ ಚಿಂತನೆ ನಡೆಸುತ್ತಿದೆ. ಹ್ಯಾಕ್​ನ ಸ್ಕ್ರೀನ್​ ಶಾಟ್​ ತನ್ನ ಬಳಿ ಇರುವುದಾಗಿ ಸುದ್ದಿ ಸಂಸ್ಥೆಯೊಂದು‌ ಹೇಳಿದೆ.

ABOUT THE AUTHOR

...view details