ಕರ್ನಾಟಕ

karnataka

ETV Bharat / business

ಹೊಸ ’ಎಂ- ಆಧಾರ್’​ ಆ್ಯಪ್ ಲಾಂಚ್​​: ನಿಮ್ಮ ಆಧಾರ್​ ಕಾರ್ಡ್​​ ಮಾಹಿತಿ ಇನ್ನಷ್ಟು ಸುರಕ್ಷ... ಹೇಗೆ ಗೊತ್ತೆ? - ಎಂಆಧಾರ್ ಆ್ಯಪ್

ಕಾರ್ಡ್​ದಾರರು ತಮ್ಮ ಮೊಬೈಲ್ ಫೋನ್‌ನಲ್ಲಿ ಹೆಸರು, ಜನ್ಮ ದಿನಾಂಕ, ಲಿಂಗ, ವಿಳಾಸ ಮತ್ತು ಛಾಯಾಚಿತ್ರದಂತಹ ಮಾಹಿತಿ ದಾಖಲಾತಿಗೆ ಈ ಆ್ಯಪ್​ ಬಳಸಿಕೊಳ್ಳಬಹುದಾಗಿದೆ. ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ(ಯುಐಡಿಎಐ) ಡೇಟಾಬೇಸ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯ ಮೂಲಕ ಗೂಗಲ್​ ಪ್ಲೇ ಸ್ಟೋರ್​ನಿಂದ ಆ್ಯಪ್​ ಡೌನ್‌ಲೋಡ್ ಮಾಡಿಕೊಳ್ಳಬಹುದು

ಆಧಾರ್

By

Published : Nov 23, 2019, 8:02 PM IST

ನವದೆಹಲಿ:ಆಧಾರ್ ಹೊಂದಿರುವವರು ತಮ್ಮ ಆಧಾರ್ ವಿವರಗಳನ್ನು ಮೊಬೈಲ್ ಫೋನ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಅನುವು ಮಾಡಿಕೊಡಲು ಹೊಸ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಲಾಗಿದೆ.

ಕಾರ್ಡ್​ದಾರರು ತಮ್ಮ ಮೊಬೈಲ್ ಫೋನ್‌ನಲ್ಲಿ ಹೆಸರು, ಜನ್ಮ ದಿನಾಂಕ, ಲಿಂಗ, ವಿಳಾಸ ಮತ್ತು ಛಾಯಾಚಿತ್ರದಂತಹ ಮಾಹಿತಿ ದಾಖಲಾತಿಗೆ ಈ ಆ್ಯಪ್​ ಬಳಸಿಕೊಳ್ಳಬಹುದಾಗಿದೆ. ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ(ಯುಐಡಿಎಐ) ಡೇಟಾಬೇಸ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯ ಮೂಲಕ ಗೂಗಲ್​ ಪ್ಲೇ ಸ್ಟೋರ್​ನಿಂದ ಆ್ಯಪ್​ ಡೌನ್‌ಲೋಡ್ ಮಾಡಿಕೊಳ್ಳಬಹುದು.

ನಿಮ್ಮ ಮೊಬೈಲ್​ನಲ್ಲಿ ಈ ಹಿಂದೆ ಡೌನ್​ಲೋಡ್​ ಮಾಡಿಕೊಳ್ಳಲಾದ ಯಾವುದೇ ಆವೃತ್ತಿ ಆ್ಯಪ್​ ಅನ್ನು ಅನ್‌ ಇನ್‌ಸ್ಟಾಲ್ ಮಾಡಿ. ನ್ಯೂ ಎಂ -ಆಧಾರ್​ ಆ್ಯಪ್ (mAadhaarApp)​ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಯುಐಡಿಎಐ ಟ್ವೀಟ್ ಮೂಲಕ ತಿಳಿಸಿದೆ.

ನಿಮ್ಮ ಆಂಡ್ರಾಯ್ಡ್ ಮತ್ತು ಐಫೋನ್‌ಗಳಲ್ಲಿ mAadhaar ಅನ್ನು ಡೌನ್​ಲೋಡ್ ಮಾಡಿಕೊಳ್ಳುವ ವಿಧಾನ ಹೀಗಿದೆ.

ಹೊಸ ಆಧಾರ್ ಅಪ್ಲಿಕೇಷನ್ ಎರಡು ಪ್ರಮುಖ ವಿಭಾಗಗಳನ್ನು ಹೊಂದಿದೆ

1) ಆಧಾರ್ ಸೇವೆಗಳ ಡ್ಯಾಶ್‌ಬೋರ್ಡ್ - ಯಾವುದೇ ಆಧಾರ್ ಹೊಂದಿರುವವರಿಗೆ ಅನ್ವಯವಾಗುವ ಎಲ್ಲ ಆಧಾರ್ ಆನ್‌ಲೈನ್ ಸೇವೆಗಳಿಗೆ ಸಿಂಗಲ್​ ವಿಂಡೋ

2) ನನ್ನ ಆಧಾರ್ ವಿಭಾಗ - ಆಯ್ದ ಪ್ರೊಫೈಲ್‌ಗಳ ಅಪ್ಲಿಕೇಷನ್‌ನಲ್ಲಿ ನೀವು ಸೇರಿಸಬಯಸುವ ಆಧಾರ್ ಪ್ರೊಫೈಲ್‌ಗಳ ಮಾಹಿತಿ ಇರಲಿದೆ

MAadhaar ಅಪ್ಲಿಕೇಷನ್‌ನ ಕೆಲವು ಅನುಕೂಲಗಳು ಹೀಗಿವೆ:

1) ನೀವು ಹೋದಲ್ಲೆಲ್ಲಾ ನಿಮ್ಮ ಮೂಲ ಆಧಾರ್ ಕಾರ್ಡ್ ಅನ್ನು ಸಾಗಿಸುವ ಅಗತ್ಯವಿಲ್ಲ. ಎಲ್ಲಾ ಆಧಾರ್ ಸೇವೆಗಳನ್ನು ಪಡೆಯಲು ನೀವು mAadhaar ಅಪ್ಲಿಕೇಷನ್ ಅನ್ನು ಬಳಸಬಹುದು

2) ಈ mAadhaar ಅಪ್ಲಿಕೇಷನ್ ಮೂಲಕ ನೀವು ಯಾವಾಗ ಬೇಕಾದರೂ ನಿಮ್ಮ ಬಯೋಮೆಟ್ರಿಕ್ಸ್ ಅನ್ನು ಲಾಕ್ ಮಾಡಬಹುದು ಅಥವಾ ತಾತ್ಕಾಲಿಕವಾಗಿ ಅನ್​ಲಾಕ್ ಮಾಡಬಹುದು

3) ಕೆಲವು ಸಮಸ್ಯೆಗಳಿಂದಾಗಿ ನಿಮ್ಮ ಮೊಬೈಲ್ ಸಂಖ್ಯೆಗೆ ಆಧಾರ್ ಒಟಿಪಿ ಕಳುಹಿಸದಿದ್ದರೆ, ನೀವು ಆಧಾರ್ ಅಪ್ಲಿಕೇಷನ್‌ನ ಸಮಯ ಆಧಾರಿತ ಒಟಿಪಿ (ಟಿಒಟಿಪಿ) ಸೌಲಭ್ಯವನ್ನು ಬಳಸಬಹುದು, ಅದು ಕೇವಲ 30 ಸೆಕೆಂಡುಗಳವರೆಗೆ ಮಾನ್ಯವಾಗಿರುತ್ತದೆ

4) mAadhaar ಬಳಕೆದಾರರು ತಮ್ಮ ವಿವರಗಳನ್ನು QR ಕೋಡ್ ಬಳಸಿ ಹಂಚಿಕೊಳ್ಳಲು ಅನುವು ಮಾಡಿಕೊಡಲಿದ್ದು, ಇದರಿಂದಾಗಿ ಯಾವುದೇ ಡೇಟಾ ಅನ್ನು ಸೋರಿಕೆಯಾಗುವುದು ತಡೆಯುತ್ತದೆ

5) ಬಳಕೆದಾರನು ತನ್ನ ಇಕೆವೈಸಿಯನ್ನು ಸಂದೇಶ ಅಥವಾ ಇಮೇಲ್ ಮೂಲಕ ನೇರವಾಗಿ ಹಂಚಿಕೊಳ್ಳಬಹುದು.

ABOUT THE AUTHOR

...view details