ನ್ಯೂಯಾರ್ಕ್:ಒಂದೇ ಒಂದು ಆನ್ಲೈನ್ ಮೀಟಿಂಗ್ನಲ್ಲಿ ಏಕಾಏಕಿ 900ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಬಿಟ್ಟರೆ ಹೇಗಾಗಬಹುದು? ಆ ಕೆಲಸಗಾರರ ಪರಿಸ್ಥಿತಿಯನ್ನು ಊಹಿಸುವುದು ಕಷ್ಟ. ನ್ಯೂಯಾರ್ಕ್ ಮೂಲದ ಒಂದು ಕಂಪನಿ ದಿಢೀರ್ ಎಂಬಂತೆ ಜೂಮ್ ಆನ್ಲೈನ್ ಮೀಟಿಂಗ್ನಲ್ಲಿ ತನ್ನ ಕಂಪನಿ ಉದ್ಯೋಗಿಗಳನ್ನು ತೆಗೆದುಹಾಕಿದೆ.
ಜೂಮ್ ಕರೆಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದ ಬಾಸ್:
ಕೊರೊನಾದಿಂದ ಅನೇಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದು ಕಂಪನಿಯ ಸ್ಥಿತಿಯನ್ನು ಚರ್ಚಿಸಲು Better.com ಕಂಪನಿಯ ಮಾಲೀಕ ವಿಶಾಲ್ ಗಾರ್ಗ್ ಎಂಬುವರು ಜೂಮ್ ಆನ್ಲೈನ್ ಮೀಟಿಂಗ್ ಕರೆದಿದ್ದರು. ಆದರೆ, ಕಂಪನಿ ಬಗ್ಗೆ ಚರ್ಚಿಸದೇ ಇದ್ದಕ್ಕಿದ್ದಂತೆ ಅಲ್ಲಿಯ 900ಕ್ಕೂ ಹೆಚ್ಚು ಕೆಲಸಗಾರರನ್ನು ಅದೇ ಆನ್ಲೈನ್ ಮೀಟಿಂಗ್ನಲ್ಲೇ ತೆಗೆದುಹಾಕಿದ್ದಾರೆ.