ನವದೆಹಲಿ:ಕೇಂದ್ರ ಬಜೆಟ್ ಮಂಡನೆಯಾಗಲು ಕೆಲ ದಿನಗಳು ಬಾಕಿ ಇರುವಾಗಲೇ ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳಿಗೆ ಭರ್ಜರಿ ಗಿಫ್ಟ್ ನೀಡಿದೆ. ರಾಜ್ಯಗಳ ಅಭಿವೃದ್ಧಿಯ ದೃಷ್ಟಿಯಿಂದ ನಿಗದಿಗಿಂತ ಮುಂಚಿತವಾಗಿ ಹೆಚ್ಚುವರಿಯಾಗಿ 47,541 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಲ್ಲ ಕೇಂದ್ರಾಡಳಿತ ಪ್ರದೇಶ ಹಾಗೂ ರಾಜ್ಯಗಳಿಗೆ 47,541 ಕೋಟಿ ರೂಪಾಯಿ ತೆರಿಗೆ ಹಣವನ್ನು ಮುಂಗಡವಾಗಿ ನೀಡಿದ್ದಾರೆಂದು ಹಣಕಾಸು ಸಚಿವಾಲಯ ತಿಳಿಸಿದೆ. ಜನವರಿ ತಿಂಗಳ ಹೆಚ್ಚುವರಿ ಹಣ ಇದಾಗಿದ್ದು, ಇದೇ ತಿಂಗಳಲ್ಲಿ ಎಲ್ಲ ರಾಜ್ಯಗಳಿಗೆ 95,082 ಕೋಟಿ ರೂಪಾಯಿ ಹಂಚಿಕೆ ಮಾಡಲಾಗುವುದು ಎಂದು ಸಿಹಿ ಸುದ್ದಿಯನ್ನು ಸಹ ನೀಡಿದ್ದಾರೆ.
ಇದನ್ನೂ ಓದಿರಿ:ಅಚ್ಚರಿಯಾದರೂ ಇದು ಸತ್ಯ: ಮೃತಪಟ್ಟಿರುವುದಾಗಿ ವೈದ್ಯರಿಂದ ಘೋಷಿಸಿದ್ದ ಮಗು ಸ್ಮಶಾನದಲ್ಲಿ ಜೀವಂತ
ಕಳೆದ ಕೆಲ ದಿನಗಳ ಹಿಂದೆ ಎಲ್ಲ ರಾಜ್ಯದ ಸಿಎಂ ಮತ್ತು ಹಣಕಾಸು ಸಚಿವರೊಂದಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವರ್ಚುವಲ್ ಸಭೆ ನಡೆಸಿದ್ದರು. ಈ ವೇಳೆ ಕೋವಿಡ್ ಸಮಸ್ಯೆಯಿಂದ ಎಲ್ಲ ರಾಜ್ಯಗಳು ತೊಂದರೆಗೊಳಗಾಗಿದ್ದು, ವೇಳಾಪಟ್ಟಿಗಿಂತಲೂ ಮುಂಚಿತವಾಗಿ ಒಂದು ಕಂತು ತೆರಿಗೆ ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದರು.
ಕೇಂದ್ರ ಹಣಕಾಸು ಸಚಿವಾಲಯ ರಿಲೀಸ್ ಮಾಡಿರುವ ಪಟ್ಟಿ ಪ್ರಕಾರ ಕರ್ನಾಟಕಕ್ಕೆ 1,733.81 ಕೋಟಿ ರೂ. ತೆರಿಗೆ ಹಣ ಸಿಗಲಿದೆ. ಉಳಿದಂತೆ ಆಂಧ್ರಪ್ರದೇಶಕ್ಕೆ 1,923.98 ಕೋಟಿ ರೂ. ಬಿಹಾರಕ್ಕೆ 4,781.65 ಕೋಟಿ ರೂ. ಹಂಚಿಕೆಯಾಗಲಿದೆ.