ನವದೆಹಲಿ:ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) 42ನೇ ಮಂಡಳಿ ಸಭೆ ನಡೆಯುತ್ತಿರುವ ವೇಳೆಯಲ್ಲಿ ಜಿಎಸ್‌ಟಿ ಪರಿಹಾರದ ಕುರಿತು ಕೇಂದ್ರದ ಹಿರಿಯ ಮುಖಂಡ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಕೇಂದ್ರ ಸರ್ಕಾರದ ವಿರುದ್ಧ ಟ್ವೀಟ್ಗಳ ಅಸ್ತ್ರ ಪ್ರಯೋಗಿಸಿದ್ದಾರೆ.
ತೆರಿಗೆ ಕೊರತೆ ಪೂರೈಸಲು 20 ರಾಜ್ಯಗಳು ಕೇಂದ್ರದ ಪ್ರಸ್ತಾವಿತ ಸಾಲ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದರೇ, ಬಿಜೆಪಿಯೇತರ ಆಡಳಿತದ ರಾಜ್ಯಗಳು ಇಂದು ನಡೆಯುತ್ತಿರುವ 42ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಇದನ್ನು ಆಕ್ಷೇಪಿಸುವ ನಿರೀಕ್ಷೆಯಿದೆ.
ಇಂದು ನಡೆಯುತ್ತಿರುವ ಜಿಎಸ್‌ಟಿ ಮಂಡಳಿ ಸಭೆಯ ಫಲಿತಾಂಶವು ಕೇಂದ್ರ ಸರ್ಕಾರವು ಕಾನೂನನ್ನು ಪಾಲಿಸುತ್ತದೆ ಮತ್ತು ಅದರ ಭರವಸೆಗಳಿಗೆ ಒಂದೊಂದು ಪರೀಕ್ಷೆಯಾಗಿದೆ. ಕೇಂದ್ರದ ಪೂರೈಕೆ ಎರಡು ಕೊರತೆಗಳಿವೆ. ಜಿಎಸ್‌ಟಿ ಪರಿಹಾರ ಮತ್ತು ವಿಶ್ವಾಸಾರ್ಹದ ಕೊರತೆ ಎಂದು ಮಾಜಿ ಹಣಕಾಸು ಸಚಿವರು ಟ್ವೀಟ್ ಮಾಡಿದ್ದಾರೆ.