ಕರ್ನಾಟಕ

karnataka

ETV Bharat / business

ಜನವರಿಯಲ್ಲಿ 1.38 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹ.. ಶೇಕಡಾ 15ರಷ್ಟು ಹೆಚ್ಚಳ! - ಕೇಂದ್ರ ಬಜೆಟ್​

ಡಿಸೆಂಬರ್ 2021ರಲ್ಲಿ 6.7 ಕೋಟಿ ಇ-ವೇ ಬಿಲ್‌ಗಳನ್ನು ಸೃಷ್ಟಿಸಲಾಗಿತ್ತು. ಇದು ನವೆಂಬರ್ 2021ರಲ್ಲಿ 5.8 ಕೋಟಿ ಇ-ವೇ ಬಿಲ್‌ಗಳನ್ನು ಸೃಷ್ಟಿಸಲಾಗಿತ್ತು. ಅಂದರೆ ನವೆಂಬರ್​​ಗಿಂತ ಶೇಕಡಾ 14ರಷ್ಟು ಹೆಚ್ಚು ಇ-ವೇ ಬಿಲ್​ಗಳು ಡಿಸೆಂಬರ್​ನಲ್ಲಿ ಸೃಷ್ಟಿಯಾಗಿವೆ.

Centre collects Rs 1,38,394-cr gross GST revenue for January 2022
ಜನವರಿಯಲ್ಲಿ 1.38 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹ

By

Published : Feb 1, 2022, 6:45 AM IST

ನವದೆಹಲಿ:ಕೇಂದ್ರ ಸರ್ಕಾರವು 2022ರ ಜನವರಿ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (GST) ಮೂಲಕ ಒಟ್ಟು 1,38,394 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಹಣಕಾಸು ಸಚಿವಾಲಯ ಸೋಮವಾರ ತಿಳಿಸಿದೆ.

ಒಟ್ಟು ಸಂಗ್ರಹವಾದ ಆದಾಯದಲ್ಲಿ ಸಿಜಿಎಸ್‌ಟಿ 24,674 ಕೋಟಿ ರೂಪಾಯಿ, ಎಸ್‌ಜಿಎಸ್‌ಟಿ ರೂ.32,016 ಕೋಟಿ, ಐಜಿಎಸ್‌ಟಿ 72,030 ಕೋಟಿ ರೂಪಾಯಿ ಮತ್ತು ಸೆಸ್ 9,674 ಕೋಟಿ ರೂಪಾಯಿ ಸಂಗ್ರಹವಾಗಿದೆ. ಐಜಿಎಸ್‌ಟಿಯ 72,030 ಕೋಟಿ ರೂಪಾಯಿಯಲ್ಲಿ ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 35,181 ಕೋಟಿ ರೂಪಾಯಿ ಸೇರಿದೆ. ಸೆಸ್​ ಮೂಲಕ ಸಂಗ್ರಹಿಸಲಾದ 9,674 ಕೋಟಿ ರೂಪಾಯಿಯಲ್ಲಿ 517 ಕೋಟಿ ರೂಪಾಯಿ ಆಮದು ಜಿಎಸ್​ಟಿ ಒಳಗೊಂಡಿದೆ ಎಂದು ಹಣಕಾಸು ಇಲಾಖೆ ಹೇಳಿದೆ.

ಹಣಕಾಸಿನ ಸಚಿವಾಲಯದ ಪ್ರಕಾರ, ಏಪ್ರಿಲ್ 2021ರಲ್ಲಿ ಅತಿ ಹೆಚ್ಚು ಮಾಸಿಕ ಜಿಎಸ್​ಟಿ ಸಂಗ್ರಹವಾಗಿದೆ. ಅಂದರೆ 1,39,708 ಕೋಟಿ ರೂಪಾಯಿಯನ್ನು ಜಿಎಸ್​ಟಿ ಮೂಲಕ ಗಳಿಸಲಾಗಿದೆ. 30 ಜನವರಿ 2022ರವರೆಗೆ ಸಲ್ಲಿಸಲಾದ ಜಿಎಸ್​​ಟಿಆರ್​-3ಬಿ(GSTR-3B) ರಿಟರ್ನ್ಸ್‌ಗಳ ಒಟ್ಟು ಸಂಖ್ಯೆಯು 1.05 ಕೋಟಿ ಇದ್ದು, ಇದರಲ್ಲಿ 36 ಲಕ್ಷ ಮೂರು ತಿಂಗಳಿಗೊಮ್ಮೆ ಸಲ್ಲಿಸುವ ರಿಟರ್ನ್ಸ್​ ಆಗಿರುತ್ತದೆ.

ಐಜಿಎಸ್‌ಟಿ ಮೂಲಕ ಬಂದ ಆದಾಯದಲ್ಲಿ 29,726 ಕೋಟಿ ರೂಪಾಯಿಗಳನ್ನು ಸಿಜಿಎಸ್‌ಟಿಗೆ ಮತ್ತು 24,180 ಕೋಟಿ ರೂಪಾಯಿಯನ್ನು ಎಸ್‌ಜಿಎಸ್‌ಟಿಗೆ ಕೇಂದ್ರ ಸರ್ಕಾರ ಈಗಾಗಲೇ ನಿಗದಿಪಡಿಸಿದೆ. ಜನವರಿ ತಿಂಗಳಿನಲ್ಲಿ ಬಂದ ಐಜಿಎಸ್​ಟಿಯಲ್ಲಿ ಕೇಂದ್ರ ಮತ್ತು ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳ ನಡುವೆ 50:50 ಅನುಪಾತದಲ್ಲಿ ತಾತ್ಕಾಲಿಕವಾಗಿ ಕೇಂದ್ರ ಸರ್ಕಾರವು 35,000 ರೂಪಾಯಿಯನ್ನು ಇತ್ಯರ್ಥಪಡಿಸಲಾಗಿದೆ. ಕೇಂದ್ರ ಸರ್ಕಾವು 2022ರ ಜನವರಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 18,000 ಕೋಟಿ ರೂಪಾಯಿಗಳ ಜಿಎಸ್​ಟಿ ಪರಿಹಾರವನ್ನು ಬಿಡುಗಡೆ ಮಾಡಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಹಿಂದಿನ ಎರಡು ವರ್ಷಕ್ಕಿಂತ ಇದೇ ವರ್ಷ ಹೆಚ್ಚು: 2022ರ ಜನವರಿ ತಿಂಗಳ ಆದಾಯವು ಕಳೆದ ವರ್ಷದ ಜನವರಿ ತಿಂಗಳ ಜಿಎಸ್​ಟಿ ಆದಾಯಕ್ಕಿಂತ ಶೇಕಡಾ 15ರಷ್ಟು ಹೆಚ್ಚಾಗಿದೆ ಮತ್ತು 2020ರ ಜನವರಿಯಲ್ಲಿ ಜಿಎಸ್​ಟಿ ಆದಾಯಕ್ಕಿಂತ ಶೇಕಡಾ 25ರಷ್ಟು ಹೆಚ್ಚಾಗಿದೆ.

ಈ ತಿಂಗಳ ಸರಕುಗಳ ಆಮದು ಆದಾಯವು ಶೇಕಡಾ 26ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ (ಸೇವೆಗಳ ಆಮದು ಸೇರಿದಂತೆ) ಬಂದ ಆದಾಯವು ಶೇಕಡಾ 12ರಷ್ಟು ಹೆಚ್ಚಾಗಿದೆ.ಒಟ್ಟಾರೆಯಾಗಿ ನಾಲ್ಕನೇ ಬಾರಿಗೆ ಜಿಎಸ್‌ಟಿ ಸಂಗ್ರಹ 1.30 ಲಕ್ಷ ಕೋಟಿ ರೂಪಾಯಿ ದಾಟಿದೆ.

ಡಿಸೆಂಬರ್ 2021ರಲ್ಲಿ 6.7 ಕೋಟಿ ಇ-ವೇ ಬಿಲ್‌ಗಳನ್ನು ಸೃಷ್ಟಿಸಲಾಗಿತ್ತು. ಇದು ನವೆಂಬರ್ 2021ರಲ್ಲಿ 5.8 ಕೋಟಿ ಇ-ವೇ ಬಿಲ್‌ಗಳನ್ನು ಸೃಷ್ಟಿಸಲಾಗಿತ್ತು. ಅಂದರೆ ನವೆಂಬರ್​​ಗಿಂತ ಶೇಕಡಾ 14ರಷ್ಟು ಹೆಚ್ಚು ಇ-ವೇ ಬಿಲ್​ಗಳು ಡಿಸೆಂಬರ್​ನಲ್ಲಿ ಸೃಷ್ಟಿಯಾಗಿವೆ. ಆರ್ಥಿಕ ಚೇತರಿಕೆ, ತೆರಿಗೆ ತಪ್ಪಿಸಿಕೊಳ್ಳುವವರ ವಿರುದ್ಧ ಕ್ರಮ, ನಕಲಿ ಬಿಲ್​ಗಳ ಮೇಲೆ ಕ್ರಮಗಳು ಜಿಎಸ್​ಟಿ ಹೆಚ್ಚಿಸಲು ಮತ್ತಷ್ಟು ಕೊಡುಗೆ ನೀಡಿವೆ. ಆದಾಯ ಹೆಚ್ಚಳದಲ್ಲಿ ಸಕಾರಾತ್ಮಕ ಪ್ರವೃತ್ತಿ ಮುಂದುವರೆದಿದೆ.

ಇದನ್ನೂ ಓದಿ:ಇಂದು ಕೇಂದ್ರ ಆಯವ್ಯಯ: ಮೋದಿ ಸರ್ಕಾರದಿಂದ ಆರ್ಥಿಕತೆಗೆ ಸಿಗುತ್ತಾ ಬೂಸ್ಟರ್ ಬಜೆಟ್?

ABOUT THE AUTHOR

...view details