ಕರ್ನಾಟಕ

karnataka

ETV Bharat / business

ಕೊರೊನಾ ಸಂಕಷ್ಟದಲ್ಲಿ ಕೈಗಾರಿಕಾ ಕಾರ್ಮಿಕರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ! - ವೇರಿಯಬಲ್ ತುಟಿ ಭತ್ಯೆ

ಕೇಂದ್ರ ವಲಯದಲ್ಲಿ ನಿಗದಿತ ಉದ್ಯೋಗಕ್ಕೆ ನಿಗದಿಪಡಿಸಿದ ದರಗಳು ಕೇಂದ್ರ ಸರ್ಕಾರ, ರೈಲ್ವೆ, ಗಣಿಗಳು, ತೈಲ ಕ್ಷೇತ್ರಗಳು, ಪ್ರಮುಖ ಬಂದರುಗಳು ಅಥವಾ ಕೇಂದ್ರ ಸರ್ಕಾರ ಸ್ಥಾಪಿಸಿದ ಯಾವುದೇ ನಿಗಮದ ಅಧಿಕಾರದಲ್ಲಿರುವ ಸಂಸ್ಥೆಗಳಿಗೆ ಅನ್ವಯಿಸುತ್ತವೆ..

wage
wage

By

Published : May 21, 2021, 8:31 PM IST

ನವದೆಹಲಿ : ಗಣಿಗಾರಿಕೆ ಮತ್ತು ನಿರ್ಮಾಣ ಚಟುವಟಿಕೆಗಳು ಒಳಗೊಂಡಂತೆ ಕೇಂದ್ರ ವಲಯದಲ್ಲಿ ಕಾರ್ಯನಿರತ ಕೈಗಾರಿಕಾ ಕಾರ್ಮಿಕರ ಕನಿಷ್ಠ ವೇತನವನ್ನು ಕೇಂದ್ರ ಕಾರ್ಮಿಕ ಸಚಿವಾಲಯ ಸ್ವಲ್ಪಮಟ್ಟಿಗೆ ಹೆಚ್ಚಿಸಿದೆ.

ಈ ಬದಲಾವಣೆಯು ಕೇಂದ್ರ ಕ್ಷೇತ್ರಗಳಲ್ಲಿ ನಿಗದಿತ ಉದ್ಯೋಗವನ್ನು ಮಾಡುವ ಸುಮಾರು 15 ಮಿಲಿಯನ್ ಕಾರ್ಮಿಕರಿಗೆ ಪ್ರಯೋಜನ ಆಗಲಿದೆ. ಅವರ ಮಾಸಿಕ ಆದಾಯವು 105 ರೂ.ಯಿಂದ 212 ರೂ.ಯಷ್ಟು ಆಗಲಿದೆ.

ವಿಡಿಎಯ ಈ ಹೆಚ್ಚಳವು ವಿಶೇಷವಾಗಿ ಪ್ರಸ್ತುತ ಸಾಂಕ್ರಾಮಿಕ ಕಾಲದಲ್ಲಿ 1.5 ಕೋಟಿ ಕಾರ್ಮಿಕರಿಗೆ ಅನುಕೂಲಕರವಾಗಲಿದೆ ಎಂದು ಸಂತೋಷ್ ಗಂಗ್ವಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಟೂಲ್​ಕಿಟ್ ಟ್ವೀಟ್‌ಗಳಲ್ಲಿ 'ಮ್ಯಾನಿಪ್ಯುಲೇಟೆಡ್ ಮೀಡಿಯಾ' ಟ್ಯಾಗ್‌.. ಟ್ವಿಟರ್‌ ವಿರುದ್ಧ ಸರ್ಕಾರ ಗರಂ

ಕೈಗಾರಿಕಾ ಕಾರ್ಮಿಕರ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ (ಸಿಪಿಐ-ಐಡಬ್ಲ್ಯೂ) ವಿಡಿಎ ಪರಿಷ್ಕರಿಸಲಾಗುತ್ತದೆ. ಲೇಬರ್ ಬ್ಯೂರೋ ಸಂಗ್ರಹಿಸಿದ ಬೆಲೆ ಸೂಚ್ಯಂಕದಡಿ ಇತ್ತೀಚಿನ ವಿಡಿಎ ಪರಿಷ್ಕರಣೆ ಕೈಗೊಳ್ಳಲು 2020ರ ಜುಲೈನಿಂದ ಡಿಸೆಂಬರ್‌ನ ಸರಾಸರಿ ಸಿಪಿಐ-ಐಡಬ್ಲ್ಯೂ ಬಳಸಲಾಗಿದೆ ಎಂದು ಮುಖ್ಯ ಕಾರ್ಮಿಕ ಆಯುಕ್ತ ಡಿ.ಪಿ.ಎಸ್. ನೇಗಿ ಹೇಳಿದರು.

ಕನಿಷ್ಠ ವೇತನದಲ್ಲಿ ಬದಲಾವಣೆ ಕೌಶಲ್ಯ ಮಟ್ಟ ಮತ್ತು ನಗರ ಅಥವಾ ಕೆಲಸದ ಪಟ್ಟಣ ಆಧರಿಸಿರುತ್ತದೆ ಎಂದು ನೇಗಿ ತಿಳಿಸಿದ್ದಾರೆ.

ಕೇಂದ್ರ ವಲಯದಲ್ಲಿ ನಿಗದಿತ ಉದ್ಯೋಗಕ್ಕೆ ನಿಗದಿಪಡಿಸಿದ ದರಗಳು ಕೇಂದ್ರ ಸರ್ಕಾರ, ರೈಲ್ವೆ, ಗಣಿಗಳು, ತೈಲ ಕ್ಷೇತ್ರಗಳು, ಪ್ರಮುಖ ಬಂದರುಗಳು ಅಥವಾ ಕೇಂದ್ರ ಸರ್ಕಾರ ಸ್ಥಾಪಿಸಿದ ಯಾವುದೇ ನಿಗಮದ ಅಧಿಕಾರದಲ್ಲಿರುವ ಸಂಸ್ಥೆಗಳಿಗೆ ಅನ್ವಯಿಸುತ್ತವೆ.

ಈ ದರಗಳು ಗುತ್ತಿಗೆ ಮತ್ತು ಪ್ರಾಸಂಗಿಕ ಕಾರ್ಮಿಕರಿಗೆ ಸಮಾನವಾಗಿ ಅನ್ವಯಿಸುತ್ತವೆ. ಕೈಗಾರಿಕಾ ಕಾರ್ಮಿಕರಿಗೆ ವಿಡಿಎ ಖಾಯಂ ಸರ್ಕಾರಿ ನೌಕರರ ತುಟಿ ಭತ್ಯೆಗೆ ಹೋಲುತ್ತದೆ.

ABOUT THE AUTHOR

...view details