ನವದೆಹಲಿ: ಇ ಕಾಮರ್ಸ್ ಸಂಸ್ಥೆ ಅಮೆಜಾನ್‌ಗೆ ಪ್ರಿಯೋನ್ ವ್ಯಾಪಾರ ಸೇವೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಭಾರತೀಯ ಸ್ಪರ್ಧಾ ಆಯೋಗ/ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ(ಸಿಸಿಐ) ಬುಧವಾರದಂದು ಅನುಮೋದನೆ ನೀಡಿದೆ.
ಪ್ರಿಯೋನ್ ವ್ಯಾಪಾರ ಸೇವೆಯು ಕ್ಯಾಟಮಾರಾನ್ ಮತ್ತು ಇ ಕಾಮರ್ಸ್ ಸಂಸ್ಥೆ ಅಮೆಜಾನ್ ನಡುವಿನ ಜಂಟಿ ಉದ್ಯಮವಾಗಿದೆ. ಸಿಸಿಐ ಈ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅಮೆಜಾನ್ ಏಷ್ಯಾ ಫೆಸಿಫಿಕ್ ರೆಸೋರ್ಸ್ ಪ್ರೈವೆಟ್ ಲಿಮಿಟೆಡ್ ಪ್ರಿಯೋನ್ ಪ್ರೈವೆಟ್ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಆಯೋಗವು ಅನುಮೋದಿಸುತ್ತದೆ ಎಂದು ಹೇಳಿದೆ.