ಕರ್ನಾಟಕ

karnataka

By

Published : Jul 31, 2019, 12:54 PM IST

Updated : Jul 31, 2019, 3:23 PM IST

ETV Bharat / business

ಆ ರಾತ್ರಿ ಸಿದ್ಧಾರ್ಥ್​ ನಿದ್ರಿಸಲಿಲ್ಲ... ಕಾರಣ ನೂರು ಬಿಲಿಯನ್​ ಕನಸು

ವಿಶ್ವ ಶ್ರೇಷ್ಟ ಬ್ರಾಂಡ್​ ಆಗಿ ಬೆಳೆದ ಕಾಫಿ ಡೇ ಜರ್ಮನಿಯ ಚಿಬೊ ಎನ್ನುವ ಕಾಫಿ ಚೈನ್​ ಬ್ಯುಸಿನೆಸ್​ನ ಭಾರತೀಯ ಅವತರಣಿಕೆ.

ವಿ.ಜಿ ಸಿದ್ಧಾರ್ಥ್

ಹೈದರಾಬಾದ್​: 90ರ ದಶಕದಲ್ಲಿ ಭಾರತದ ಅತಿದೊಡ್ಡ ಕಾಫಿ ರಫ್ತುದಾರರಾಗಿದ್ದ ವಿ.ಜಿ ಸಿದ್ಧಾರ್ಥ್​ ಅವರಿಗೆ ಕಾಫಿ ಡೇ ಮಾಡುವ ಕನಸು ಹೇಗೆ ಬಂತು ಎಂಬುದು ಕುತೂಹಲಕಾರಿ ಸಂಗತಿ.

ಕಾಫಿಡೇ ಒಂದು ಉದ್ಯಮವಷ್ಟೇ ಅಲ್ಲ ಸಿದ್ಧಾರ್ಥ್​ ಅವರ ನೂರು ಬಿಲಿಯನ್​ ಕನಸು. ವಿಶ್ವ ಶ್ರೇಷ್ಟ ಬ್ರಾಂಡ್​ ಆಗಿ ಬೆಳೆದ ಕಾಫಿ ಡೇ ಜರ್ಮನಿಯ ಚಿಬೊ ಎನ್ನುವ ಕಾಫಿ ಚೈನ್​ ಬ್ಯುಸಿನೆಸ್​ನ ಭಾರತೀಯ ಅವತರಣಿಕೆ.

ಕಾಫಿ ಸಾಮ್ರಾಟನ ದುರಂತ ಅಂತ್ಯ... ಕಾಫಿ ಡೇ ಷೇರಿನಲ್ಲಿ ಸಾರ್ವಕಾಲಿಕ ಕುಸಿತ..!

ಒಮ್ಮೆ ಸಿದ್ಧಾರ್ಥ್​ ಅವರು ಚಿಬೊ ಸಂಸ್ಥೆಯ ಮಾಲೀಕರನ್ನು ಭೇಟಿಯಾಗಿ ಚರ್ಚೆ ಮಾಡಿದ್ದರು. ನೂರು ವರ್ಷದಿಂದ ಕಾಫಿ ಉದ್ಯಮದಲ್ಲಿರುವ ನೀವು ಹೇಗೆ ಇಷ್ಟು ಶ್ರೀಮಂತರಾದಿರಿ ಎಂದು ಸಿದ್ಧಾರ್ಥ್​ ಕೇಳಿದ್ದರಂತೆ. ಅದಕ್ಕೆ ಅವರು ನೂರಲ್ಲ 140 ವರ್ಷಗಳಿಂದ ನಾವು ಕಾಫಿ ಉದ್ಯಮದಲ್ಲಿದ್ದೇವೆ. ನಮ್ಮ ತಾತ ಎರಡನೇ ಮಹಾ ಯುದ್ಧದ ನಂತರ 1948ರಲ್ಲಿ ಹ್ಯಾಂಬರ್ಗ್​ನಲ್ಲಿ ಕೇವಲ 10/10 ಜಾಗದಲ್ಲಿ ಕಾಫಿ ಉದ್ಯಮ ಆರಂಭಿಸಿದರು ಎನ್ನುವ ಮಾತು ಹೇಳಿದರು.

ಭಾರತೀಯರ ಮನಸ್ಸಿನಲ್ಲಿ ಕಾಫಿ ಬೀಜ ಬಿತ್ತಿದ ಸಿದ್ಧಾರ್ಥ್​... ಇದು ಕಾಫಿ ಡೇ ಸಕ್ಸಸ್​ ಸ್ಟೋರಿ!

ಚಿಬೊ ಒಡೆಯನ ಮಾತು ಕೇಳಿದ ಸಿದ್ಧಾರ್ಥ್​ ಅವರ ಮಿದುಳಿನಲ್ಲಿ ಬಹಳಷ್ಟು ನಂಬರ್​ಗಳು ಹಾದುಹೋದವು. ಆ ರಾತ್ರಿ ಅವರು ನಿದ್ರೆ ಮಾಡಲಿಲ್ಲ. ವಿಶ್ವದಲ್ಲಿ ವರ್ಷಕ್ಕೆ 120 ಮಿಲಿಯನ್​ ಚೀಲ ಕಾಫಿ ಬೀಜ ಉತ್ಪಾದನೆಯಾಗುತ್ತದೆ. ಅದರ ಬೆಲೆ ಸರಿಸುಮಾರು 7 ಬಿಲಿಯನ್​ ಡಾಲರ್​. ಅದೇ ಬೀಜವನ್ನು ಸಂಸ್ಕರಿಸಿ ಕಪ್​ ರೂಪದಲ್ಲಿ ಮಾರಾಟ ಮಾಡಿದರೆ ಅದರ ಬೆಲೆ ವರ್ಷಕ್ಕೆ 100 ಬಿಲಿಯನ್​ ಡಾಲರ್​.

ಈ ಅಂಕಿ ಅಂಶಗಳಿಂದ ಅಚ್ಚರಿಗೊಳಗಾದ ಸಿದ್ಧಾರ್ಥ್​ ಜರ್ಮನಿಯ ಚಿಬೊ ಕಾಫಿ ಚೈನ್​ನಂತೆ ಭಾರತದಲ್ಲಿ ಕಾಫಿ ಡೇ ಎಂಬ ಕಾಫಿ ಚೈನ್​ ಆರಂಭಿಸಿದರು. ಬೆಂಗಳೂರಿನ ಬ್ರಿಗೇಡ್​ ರಸ್ತೆಯಲ್ಲಿ ಆರಂಭವಾದ ಸುಸಜ್ಜಿತ ಕಾಫಿ ಡೇ ಶಾಖೆಯು ಇಂದು ವಿಶ್ವಾದ್ಯಂತ 1700ಕ್ಕೂ ಹೆಚ್ಚು ಶಾಖೆಗಳಿಗೆ ವಿಸ್ತರಣೆಯಾಗಿದೆ.

Last Updated : Jul 31, 2019, 3:23 PM IST

ABOUT THE AUTHOR

...view details