ನವದೆಹಲಿ: ಯೆಸ್ ಬ್ಯಾಂಕ್‌ನಿಂದ 466 ಕೋಟಿ ರೂಪಾಯಿಗಳ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಂತಾ ಗ್ರೂಪ್‌ನ ಪ್ರವರ್ತಕ ಗೌತಮ್ ಥಾಪರ್ ವಿರುದ್ಧ ಕೇಂದ್ರ ತನಿಖಾ ದಳ (ಸಿಬಿಐ) ಪ್ರಕರಣ ದಾಖಲಿಸಿದೆ. ಸಿಬಿಐ ಪ್ರಕಾರ, ಅವಂತಾ ಗ್ರೂಪ್‌ನ ಅಂಗ ಸಂಸ್ಥೆಯಾದ ಒಬಿಪಿಎಲ್‌ನ ಸಿಂಪಿ ಬಿಲ್ಡ್‌ವೆಲ್ ಪ್ರೈವೇಟ್ ಲಿಮಿಟೆಡ್ ತನ್ನ ವಿದ್ಯುತ್ ಯೋಜನೆಗಳಿಗೆ ಧನಸಹಾಯಕ್ಕಾಗಿ ಸಾಲವನ್ನು ಪಡೆದುಕೊಂಡಿದೆ.
ಯೆಸ್ ಬ್ಯಾಂಕ್ ವಂಚನೆ ಪ್ರಕರಣ: ಗೌತಮ್ ಥಾಪರ್ ವಿರುದ್ಧ ಪ್ರಕರಣ ದಾಖಲಿಸಿದ ಸಿಬಿಐ! - ಯೆಸ್ ಬ್ಯಾಂಕ್ ಹಗರಣ
ಯೆಸ್ ಬ್ಯಾಂಕ್‌ನಿಂದ ಕೋಟ್ಯಂತರ ರೂ ಸಾಲ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಂತಾ ಗ್ರೂಪ್‌ನ ಪ್ರವರ್ತಕ ಗೌತಮ್ ಥಾಪರ್ ವಿರುದ್ಧ ಪ್ರಕರಣ ದಾಖಲಿಸಿದೆ.
ಅವಂತಾ ಗ್ರೂಪ್‌ನ ಸಾಲವನ್ನು ಮರುಪಾವತಿಸಲು ಸಾಲವನ್ನು ಡೈವರ್ಟ್ ಮಾಡಲಾಗಿದೆ ಎಂದು ಅಡಿಟ್ ಬಹಿರಂಗಪಡಿಸಿದೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ. ಕಂಪನಿಯು ಸಾಲವನ್ನು ಡೀಫಾಲ್ಟ್ ಮಾಡಲು ಪ್ರಾರಂಭಿಸಿದ ನಂತರ ತನಿಖೆ ಪ್ರಾರಂಭವಾಗಿತ್ತು.
2004ರಲ್ಲಿ ಪ್ರಾರಂಭವಾದ ನಂತರ ಯೆಸ್ ಬ್ಯಾಂಕ್ ದೇಶದ ಅತ್ಯಂತ ಗ್ರಾಹಕ ಸ್ನೇಹಿ ಬ್ಯಾಂಕ್ಗಳಲ್ಲಿ ಒಂದಾಗಿತ್ತು. ಜಾಗತಿಕ ಹಣಕಾಸು ಸೇವೆಗಳ ಕಂಪನಿಯಾದ ಯುಬಿಎಸ್ ತನ್ನ ಆಸ್ತಿಯ ಗುಣಮಟ್ಟದ ಬಗ್ಗೆ ಅನುಮಾನ ಹುಟ್ಟುಹಾಕಿದಾಗ 2015ರಲ್ಲಿ ಬ್ಯಾಂಕ್ನಲ್ಲಿ ತೊಂದರೆಗಳು ಕಂಡುಬಂದವು. ಮಾರ್ಚ್ 5, 2020ರಂದು, ಆರ್‌ಬಿಐ ಯೆಸ್ ಬ್ಯಾಂಕ್‌ಗೆ ನಿಷೇಧ ವಿಧಿಸಿತು.