ಕರ್ನಾಟಕ

karnataka

ETV Bharat / business

ವರ್ಷಾಂತ್ಯಕ್ಕೆ ಐಟಿ ರಿಟರ್ನ್ಸ್​ದಾರರಿಗೆ ಸಿಹಿ ಸಮಾಚಾರ: ₹ 1.56 ಲಕ್ಷ ಕೋಟಿ ತೆರಿಗೆ ಬಾಕಿ ವಾಪಸ್​ - ಆದಾಯ ತೆರಿಗೆ ಮರುಪಾವತಿ

1,31 ಕೋಟಿ ಪ್ರಕರಣಗಳಲ್ಲಿ 50,554 ಕೋಟಿ ರೂ. ಆದಾಯ ತೆರಿಗೆ ಮರುಪಾವತಿ ಮತ್ತು 2.03 ಲಕ್ಷ ಪ್ರಕರಣಗಳಲ್ಲಿ 1,06,069 ಕೋಟಿ ರೂ. ಕಾರ್ಪೊರೇಟ್ ತೆರಿಗೆ ಮರು ಪಾವತಿ ನೀಡಲಾಗಿದೆ. ಎಂದು ಆದಾಯ ತೆರಿಗೆ ಇಲಾಖೆಯ ಟ್ವೀಟ್‌ನಲ್ಲಿ ತಿಳಿಸಿದೆ.

Tax
ತೆರಿಗೆ

By

Published : Dec 30, 2020, 7:47 PM IST

ನವದೆಹಲಿ: ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) 2020ರ ಏಪ್ರಿಲ್ 1ರಿಂದ ಡಿಸೆಂಬರ್ 27ರ ನಡುವೆ 1.33 ಕೋಟಿಗೂ ಹೆಚ್ಚು ತೆರಿಗೆದಾರರಿಗೆ 1,56,624 ಕೋಟಿ ರೂ. ತೆರಿಗೆ ಬಾಕಿ ಮರುಪಾವತಿ ಮಾಡಿದೆ.

1,31 ಕೋಟಿ ಪ್ರಕರಣಗಳಲ್ಲಿ 50,554 ಕೋಟಿ ರೂ. ಆದಾಯ ತೆರಿಗೆ ಮರುಪಾವತಿ ಮತ್ತು 2.03 ಲಕ್ಷ ಪ್ರಕರಣಗಳಲ್ಲಿ 1,06,069 ಕೋಟಿ ರೂ. ಕಾರ್ಪೊರೇಟ್ ತೆರಿಗೆ ಮರುಪಾವತಿ ನೀಡಲಾಗಿದೆ. ಎಂದು ಆದಾಯ ತೆರಿಗೆ ಇಲಾಖೆಯ ಟ್ವೀಟ್‌ನಲ್ಲಿ ತಿಳಿಸಿದೆ.

ಇದನ್ನೂ ಓದಿ: ಐಟಿ ರಿಟರ್ನ್ಸ್​, ಲಾಭ ಪಾವತಿ, ಕಂಪನಿಗಳ ಟ್ಯಾಕ್ಸ್​ ಸಲ್ಲಿಕೆ ಗಡುವು ಮುಂದೂಡಿಕೆ: ಇವೇ ಕಡೇ ದಿನಗಳು

2019-20ರ ಹಣಕಾಸು ವರ್ಷದಲ್ಲಿ 4.54 ಕೋಟಿಗೂ ಹೆಚ್ಚು ತೆರಿಗೆ ರಿಟರ್ನ್ಸ್ ಅನ್ನು ಡಿಸೆಂಬರ್ 29ರವರೆಗೆ ಸಲ್ಲಿಕೆಯಾಗಿದೆ ಎಂದು ಐಟಿ ಇಲಾಖೆ ತಿಳಿಸಿದೆ.

ಕಳೆದ ವರ್ಷದ ಅವಧಿಯಲ್ಲಿ 4.77 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಆಗಿದ್ದವು. 2018-19ರ ಹಣಕಾಸು ವರ್ಷಕ್ಕೆ (ಮೌಲ್ಯಮಾಪನ ವರ್ಷ) 2019-20) ತಡವಾಗಿ ಶುಲ್ಕ ಪಾವತಿಸದೇ ಐಟಿಆರ್ ಸಲ್ಲಿಸುವ ಗಡುವು ಮುಕ್ತಾಯದ ತನಕ 5.65 ಕೋಟಿಗೂ ಅಧಿಕ ರಿಟರ್ನ್ಸ್ ಸಲ್ಲಿಕೆಯಾಗಿದೆ ಎಂದು ಐಟಿ ಇಲಾಖೆ ಮಾಹಿತಿ ನೀಡಿದೆ.

ABOUT THE AUTHOR

...view details