ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ 59.68 ಲಕ್ಷಕ್ಕೂ ಹೆಚ್ಚು ತೆರಿಗೆ ಪಾವತಿದಾರರಿಗೆ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) 1,40,210 ಕೋಟಿ ರೂ. ತೆರಿಗೆ ಬಾಕಿ ಹಣ ಪಾವತಿಸಿದೆ.
8 ತಿಂಗಳಲ್ಲಿ 1,40,210 ಕೋಟಿ ರೂ. ತೆರಿಗೆ ಬಾಕಿ ಮರು ಪಾವತಿಸಿದ ಸಿಬಿಡಿಟಿ! - ಆದಾಯ ತೆರಿಗೆ ಮರುಪಾವತಿ
ಸಿಬಿಡಿಟಿಯು 2020ರ ಏಪ್ರಿಲ್ 1ರಿಂದ ಡಿಸೆಂಬರ್ 1ರವರೆಗೆ 1,40,210 ಕೋಟಿ ರೂ. ಮೊತ್ತವನ್ನು 59.68 ಲಕ್ಷಕ್ಕೂ ಅಧಿಕ ತೆರಿಗೆದಾರರಿಗೆ ಪಾವತಿಸಿದೆ. 38,105 ಕೋಟಿ ರೂ.ಯಷ್ಟು ಮೊತ್ತವನ್ನು ಆದಾಯ ತೆರಿಗೆ ಮರುಪಾವತಿಯ 57,68,926 ಪ್ರಕರಣಗಳಿಗೆ ನೀಡಿದ್ದರೇ ಕಾರ್ಪೊರೇಟ್ ತೆರಿಗೆ ಮರುಪಾವತಿಯು 1,99,165 ಕೇಸ್ಗಳಿಗೆ 1,02,105 ಕೋಟಿ ರೂ. ನೀಡಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದೆ.

ಸಾಂಕ್ರಾಮಿಕ ರೋಗದಿಂದ ಉಂಟಾಗುವ ವಿತ್ತೀಯ ಸಮಸ್ಯೆ ಗಮನದಲ್ಲಿಟ್ಟುಕೊಂಡು, ಎಲ್ಲ ಮರುಪಾವತಿಗಳನ್ನು ಸಾಧ್ಯವಾದಷ್ಟು ಬೇಗ ಬಿಡುಗಡೆ ಮಾಡಲು ಒತ್ತು ನೀಡಲಾಗುತ್ತಿದೆ ಎಂದು ಹಣಕಾಸು ಸಚಿವಾಲಯ ಈ ಹಿಂದೆ ತಿಳಿಸಿತ್ತು.