ಕರ್ನಾಟಕ

karnataka

ETV Bharat / business

ಮೊದಲ ದಿನವೇ 41ರಷ್ಟು ಚಂದಾದಾರರನ್ನು ಪಡೆದ CarTrade Tech IPO.. ನೀವು ಚಂದಾದಾರರಾಗಬೇಕೇ? - ಆನ್‌ಲೈನ್ ಆಟೋ ಕ್ಲಾಸಿಫೈಡ್ ಪ್ಲಾಟ್‌ಫಾರ್ಮ್ ಕಾರ್​ಟ್ರೇಡ್ ಟೆಕ್‌

ವೈಯಕ್ತಿಕ ಹೂಡಿಕೆದಾರರು (RIIs) ವರ್ಗವು ಕಾರ್​​ ಟ್ರೇಡ್​ ಟೆಕ್​​ IPOದ ಶೇಕಡಾ 80 ರಷ್ಟು ಚಂದಾದಾರರಾಗಿದ್ದರೆ, ಸಾಂಸ್ಥಿಕೇತರ ಹೂಡಿಕೆದಾರರಿಗೆ ಹಂಚಿಕೆಯಾದ ಷೇರುಗಳು ಶೇಕಡಾ 3 ರಷ್ಟು ಚಂದಾದಾರರಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೊದಲ ದಿನವೇ 41% ಚಂದಾದಾರರನ್ನು ಪಡೆದ CarTrade Tech IPO
ಮೊದಲ ದಿನವೇ 41% ಚಂದಾದಾರರನ್ನು ಪಡೆದ CarTrade Tech IPO

By

Published : Aug 10, 2021, 10:09 PM IST

ನವದೆಹಲಿ:ಆನ್‌ಲೈನ್ ಆಟೋ ಕ್ಲಾಸಿಫೈಡ್ ಪ್ಲಾಟ್‌ಫಾರ್ಮ್ ಕಾರ್​ಟ್ರೇಡ್ ಟೆಕ್‌ನ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು ಚಂದಾದಾರಿಕೆಯ ಮೊದಲ ದಿನವಾದ ಸೋಮವಾರ ಶೇಕಡಾ 41 ರಷ್ಟು ಜನ ಬಿಡ್​ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಟಾಕ್ ಎಕ್ಸ್‌ಚೇಂಜ್ ಡೇಟಾ ಪ್ರಕಾರ, ರೂ. 2,998.51 ಕೋಟಿ ಐಪಿಒ(IPO) 53 ಲಕ್ಷ ಷೇರುಗಳಿಗೆ ಬಿಡ್‌ ಕೂಗಲಾಗಿದೆ. 18,532,216 ಈಕ್ವಿಟಿ ಷೇರುಗಳನ್ನು ಹೊಂದಿದ್ದು, ಪ್ರತಿ ಷೇರಿಗೆ ರೂ 1,585 ರಿಂದ 1,618 ಬೆಲೆ ನಿಗದಿ ಮಾಡಲಾಗಿದೆ.

ಚಿಲ್ಲರೆ ವೈಯಕ್ತಿಕ ಹೂಡಿಕೆದಾರರು (RIIs) ವರ್ಗವು ಈ ಐಪಿಒದ ಶೇಕಡಾ 80 ರಷ್ಟು ಚಂದಾದಾರರಾಗಿದ್ದರೆ, ಸಾಂಸ್ಥಿಕೇತರ ಹೂಡಿಕೆದಾರರಿಗೆ ಹಂಚಿಕೆಯಾದ ಷೇರುಗಳು ಶೇಕಡಾ 3 ರಷ್ಟು ಚಂದಾದಾರರಾಗಿದ್ದಾರೆ ಎಂದು ಡೇಟಾ ತೋರಿಸಿದೆ. ಆದಾಗ್ಯೂ, ಅರ್ಹ ಸಾಂಸ್ಥಿಕ ಖರೀದಿದಾರರು (QIBs) ತಮಗೆ ಹಂಚಿಕೆಯಾದ ಶೇಕಡಾ 1 ರಷ್ಟು ಷೇರುಗಳನ್ನು ಮಾತ್ರ ಖರೀದಿಸಿದ್ದಾರೆ. ಮಹೀಂದ್ರಾ ಫಸ್ಟ್ ಚಾಯ್ಸ್​ನ ಮಾಜಿ ಸಿಇಒ ವಿನಯ್ ಸಂಘಿ ಮತ್ತು 2009 ರಲ್ಲಿ ಇಬೇ ಇಂಡಿಯಾದ ಮಾಜಿ ಮುಖ್ಯಸ್ಥ ರಾಜನ್ ಮೆಹ್ರಾ ಅವರು ಕಾರ್​ಟ್ರೇಡ್ ಅನ್ನು ಸ್ಥಾಪಕರಾಗಿದ್ದಾರೆ. ಗ್ರಾಹಕರು ಬಳಸಿದ ಕಾರುಗಳು ಮತ್ತು ಹೊಸ ಕಾರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಈ ಕಂಪನಿ ಮೂಲಕ ಅವರು ಅನುವು ಮಾಡಿಕೊಟ್ಟಿದ್ದಾರೆ.

ಸಂಸ್ಥೆಯು ಮಲ್ಟಿ-ಚಾನೆಲ್ ಆಟೋ ಪ್ಲಾಟ್‌ಫಾರ್ಮ್ ಆಗಿದ್ದು, ಅದರ ಬ್ರ್ಯಾಂಡ್‌ಗಳಾದ ಕಾರ್ ವೇಲ್, ಕಾರ್‌ಟ್ರೇಡ್, ಶ್ರೀರಾಮ್ ಆಟೋಮಾಲ್, ಬೈಕ್‌ವೇಲ್, ಕಾರ್​ಟ್ರೇಡ್‌ ಎಕ್ಸ್‌ಚೇಂಜ್, ಅಡ್ರಾಯಿಟ್ ಆಟೋ ಮತ್ತು ಆಟೋಬಿಜ್ ಮೂಲಕ ವಾಹನದ ವಿಧಗಳು ಮತ್ತು ಮೌಲ್ಯವರ್ಧಿತ ಸೇವೆಗಳ ವ್ಯಾಪ್ತಿಯು ಒಳಗೊಂಡಿದೆ. ಇದು ಮಾರ್ಕ್ಯೂ ಹೂಡಿಕೆದಾರರಿಂದ ಬೆಂಬಲಿತವಾಗಿದೆ. ಮೂರು ದಿನಗಳ ಸುದೀರ್ಘ ಐಪಿಒ ಆಗಸ್ಟ್ 9 ರಂದು ಪ್ರಾರಂಭವಾಯಿತು ಮತ್ತು ಆಗಸ್ಟ್ 11, 2021 ರಂದು ಕೊನೆಗೊಳ್ಳುತ್ತದೆ.

ನೀವು ಕಾರ್​ಟ್ರೇಡ್ ಟೆಕ್ ಐಪಿಒ ಷೇರುಗಳಿಗೆ ಬಿಡ್ ಮಾಡಬೇಕೇ?

ಈ ಐಪಿಒ ಬಗೆಗಿನ ಮೌಲ್ಯಮಾಪನಗಳ ಪ್ರಕಾರ, ಕಂಪನಿಯು ಬಲವಾದ ಬ್ರಾಂಡ್ ಹೊಂದಿದ್ದು, ಉತ್ತಮ ತಂತ್ರಜ್ಞಾನ, ಲಾಭದಾಯಕ ಮತ್ತು ಸ್ಕೇಲೆಬಲ್ ವ್ಯಾಪಾರ ಮಾದರಿ ಹೊಂದಿದೆ ಎಂಬ ಅಂಶ ಬಯಲಾಗಿದೆ. ಆದ್ದರಿಂದ, ನಾವು (ಕಾರ್​ಟ್ರೇಡ್ ಟೆಕ್) ಚಂದಾದಾರಿಕೆ ರೇಟಿಂಗ್ ಅನ್ನು ಶಿಫಾರಸು ಮಾಡುತ್ತೇವೆ ಎಂದು ಷೇರು ಬ್ರೋಕಿಂಗ್​ ಕಂಪನಿಯೊಂದು ಹೇಳಿದೆ.


(Disclaimer: ಮೇಲೆ ನೀಡಲಾದ ಡೇಟಾ ಪಾಯಿಂಟ್‌ಗಳು ಮತ್ತು ವೀಕ್ಷಣೆಗಳು ಕಂಪನಿಯ ಸಂಪೂರ್ಣ ಆರ್ಥಿಕ ಆರೋಗ್ಯವನ್ನು ಪ್ರತಿಬಿಂಬಿಸದೇ ಇರಬಹುದು. ಹೂಡಿಕೆ ನಿರ್ಧಾರಕ್ಕೆ ಬರುವ ಮೊದಲು ತಮ್ಮದೇ ಸಂಶೋಧನೆಯನ್ನು ಮಾಡಲು ETv ಭಾರತ ತನ್ನ ಓದುಗರಿಗೆ ಶಿಫಾರಸು ಮಾಡುತ್ತದೆ.)

ABOUT THE AUTHOR

...view details