ಚೆನ್ನೈ: ಇಡೀ ಜಗತ್ತನ್ನು ಆವರಿಸಿರುವ ಕೊರೊನಾ ವೈರಸ್ನ ಉಗಮ ಸ್ಥಾನವಾದ ಚೀನಾ ವಿರುದ್ಧ ವಿಶ್ವ ಸಮುದಾಯ ತಿರುಗಿ ಬಿದ್ದಿವೆ. ಬೀಜಿಂಗ್‌ನೊಂದಿಗಿನ ತಮ್ಮ ವ್ಯಾಪಾರ ಸಂಬಂಧಗಳ ಬಗ್ಗೆ ಪುನರ್ವಿಮರ್ಶಿಸುವ ಒತ್ತಡಕ್ಕೆ ಒಳಗಾಗಿವೆ. ಚೀನಾದ ಮೇಲೆ ಅನುಮಾನ ಮತ್ತು ಅಪನಂಬಿಕೆ ಹೆಚ್ಚುತ್ತಿದ್ದು, ಅದಾಗಿಯೂ ವಿಶ್ವದ ಇತರ ಭಾಗಗಳೊಂದಿಗೆ ವ್ಯಾಪಾರ ಪಾಲುದಾರನಾಗಿ ಡ್ರ್ಯಾಗನ್ ಮುಂದುವರೆದಿದೆ.
ಚೀನಾದ ವುಹಾನ್ ಪ್ರಾಂತ್ಯದಿಂದ ಸಾಂಕ್ರಾಮಿಕ ರೋಗ ಹರಡಿರುವ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಕೋರಿ ಚೀನಾದ ಮಿತ್ರರಾಷ್ಟ್ರಗಳು ತನ್ನೊಂದಿಗೆ ಸೇರಿಕೊಂಡಿದ್ದಾರೆ ಎಂದು ಅಮೆರಿಕ ಬೀಜಿಂಗ್ ವಿರುದ್ಧ ಧ್ವನಿ ಎತ್ತುತ್ತಿದೆ. ಜೊತೆಗೆ ಸಾಂಕ್ರಾಮಿಕ ರೋಗದ ಬಗ್ಗೆ ಸಮಯಕ್ಕೆ ಸರಿಯಾಗಿ ಚೀನಾ ವಿಶ್ವಕ್ಕೆ ಎಚ್ಚರಿಕೆ ನೀಡಲಿಲ್ಲ ಎಂದಿದೆ.
ಇದರ ಪರಿಣಾಮವಾಗಿ ಉದ್ಯಮಿಗಳು ತಮ್ಮ ಉತ್ಪಾದನಾ ನೆಲೆಯನ್ನು ಚೀನಾದಿಂದ ಹೊರಗೆ ಸ್ಥಳಾಂತರಿಸಲು ಬಯಸಿದ್ದಾರೆ. ಭಾರತ ಅವರನ್ನು ಆಕರ್ಷಿಸುವ ಪ್ರಬಲ ಸ್ಥಾನದಲ್ಲಿದೆ. ಚೀನಾವನ್ನು ತೊರೆಯುವ ದೇಶಗಳು ಭಾರತದಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸಲಿವೆ. ಇದು ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಹೆಚ್ಚಿಸುವ ನಿರೀಕ್ಷೆಯಿದ್ದು, ಮುಖ್ಯವಾಗಿ ನೇಯ್ಗೆ ಮತ್ತು ರೆಡಿಮೇಡ್ ಗಾರ್ಮೆಂಟ್ ಕ್ಷೇತ್ರಕ್ಕೆ ವರದಾನವಾಗಲಿದೆ.