ಕರ್ನಾಟಕ

karnataka

ETV Bharat / business

ವರ್ತಕರ ಒಕ್ಕೂಟದಿಂದ ಹಬ್ಬದ ಸೀಸನ್​ನಲ್ಲಿ 'ಚೀನಿ ವಸ್ತುಗಳ ಬಹಿಷ್ಕಾರ' ಆಂದೋಲನ - ಹಬ್ಬದ ಋತುವಿನಲ್ಲಿ ಚೀನಾ ವಸ್ತುಗಳ ಬಹಿಷ್ಕಾರ

ಈ ಋತುವಿನಲ್ಲಿ ರಾಖಿ, ಜನ್ಮಾಷ್ಟಮಿ, ಗಣೇಶೋತ್ಸವ, ನವರಾತ್ರಿ, ದುರ್ಗಾ ಪೂಜೆ, ಧಂತೇರಸ್, ದೀಪಾವಳಿ ಸೇರಿ ಇತರೆ ಹಬ್ಬಗಳನ್ನು ಆಚರಿಸಲಾಗುತ್ತದೆ. ಪ್ರತಿ ಉತ್ಸವದಲ್ಲೂ ಬಳಸಲಾಗುವ ವಸ್ತುಗಳ ಸಮಗ್ರ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ..

festive season
ಹಬ್ಬದ ಋತು

By

Published : Jul 8, 2020, 9:30 PM IST

ನವದೆಹಲಿ :ಭಾರತದಲ್ಲಿ ಮುಂಬರುವ ಹಬ್ಬದ ಋತುವಿನಲ್ಲಿ ಚೀನಾದಿಂದ ಆಮದು ಮಾಡಿಕೊಳ್ಳುವ ಸರಕುಗಳನ್ನು ಬಹಿಷ್ಕರಿಸುವ ಆಂದೋಲನಕ್ಕೆ ಮುಂದಾಗಲಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಬುಧವಾರ ತಿಳಿಸಿದೆ.

'ಮೇಡ್ ಇನ್ ಇಂಡಿಯಾ' ಸರಕುಗಳು ದೇಶಾದ್ಯಂತ ಗಣನೀಯ ಪ್ರಮಾಣದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಲು ವಿಸ್ತಾರವಾದ ಕಾರ್ಯತಂತ್ರವನ್ನು ಒಕ್ಕೂಟ ರೂಪಿಸಿದೆ ಎಂದು ಹೇಳಿದೆ. ಅಗಸ್ಟ್ 3ರಂದು ರಾಖಿಯಿಂದ ಆರಂಭವಾಗಿ ನವೆಂಬರ್ 25ರವರೆಗೆ ನಡೆಯುವ ಮುಂಬರುವ ಅವಧಿಯಲ್ಲಿ ಪ್ರತಿ ಹಬ್ಬಕ್ಕೆ ಸಂಬಂಧಿಸಿದ ಭಾರತೀಯ ಸರಕುಗಳು ಹೇರಳವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕೆಂದು ಸಿಎಐಟಿ ವ್ಯಾಪಾರಿಗಳಿಗೆ ಸೂಚಿಸಿದೆ.

ಈ ಋತುವಿನಲ್ಲಿ ರಾಖಿ, ಜನ್ಮಾಷ್ಟಮಿ, ಗಣೇಶೋತ್ಸವ, ನವರಾತ್ರಿ, ದುರ್ಗಾ ಪೂಜೆ, ಧಂತೇರಸ್, ದೀಪಾವಳಿ ಸೇರಿ ಇತರೆ ಹಬ್ಬಗಳನ್ನು ಆಚರಿಸಲಾಗುತ್ತದೆ. ಪ್ರತಿ ಉತ್ಸವದಲ್ಲೂ ಬಳಸಲಾಗುವ ವಸ್ತುಗಳ ಸಮಗ್ರ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ. ಅವುಗಳೇ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗಲಿವೆ. ಕಳೆದ ವರ್ಷ ಹಬ್ಬದ ಅವಧಿಯಲ್ಲಿ 20,000 ಕೋಟಿ ರೂ. ಮೌಲ್ಯದ ಚೀನಿ ಸರಕುಗಳು ಭಾರತದಲ್ಲಿ ಮಾರಾಟ ಆಗಿವೆ ಎಂದು ಹೇಳಿದೆ.

ABOUT THE AUTHOR

...view details