ಕರ್ನಾಟಕ

karnataka

ETV Bharat / business

ಕಿರಾಣಿ ಅಂಗಡಿಗಳಿಗೆ ಭಾರತೀಯ ಉದ್ಯಮಿಗಳ ಒಕ್ಕೂಟ ಸಾಥ್​... ಅಮೆಜಾನ್, ಫ್ಲಿಪ್​ಕಾರ್ಟ್​ಗೆ ನಡುಕ - ಡಿಪಿಐಐಟಿ

ಸಿಒಐವಿಡಿ -19 ಪರಿಸ್ಥಿತಿಯಲ್ಲಿ ಭಾರತೀಯ ನಾಗರಿಕರಿಗೆ ಅಗತ್ಯ ವಸ್ತುಗಳನ್ನು ಒದಗಿಸುವ ಸವಾಲನ್ನು ಪರಿಹರಿಸಬೇಕಿದೆ. ಹೀಗಾಗಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವ್ಯಾಪ್ತಿಗೆ ಬರುವ ಡಿಪಿಐಐಟಿ, ವ್ಯಾಪಾರಿ ಒಕ್ಕೂಟಗಳ ಜತೆ ಕೈಜೋಡಿಸಿ ಸಣ್ಣ ಚಿಲ್ಲರೆ ವರ್ತಕರಿಗೆ ಇ- ಕಾಮರ್ಸ್​ ಪ್ಲಾಟ್​ಫಾರ್ಮ್​ ಒದಗಿಸಲು ಮುಂದಾಗಿವೆ.

e-commerce platform
ಇ ಕಾಮರ್ಸ್​ ವೇದಿಕೆ

By

Published : Apr 24, 2020, 8:11 PM IST

ನವದೆಹಲಿ: ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಮತ್ತು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (ಡಿಪಿಐಐಟಿ), ಸ್ಥಳೀಯ ಚಿಲ್ಲರೆ ವರ್ತಕರು ಮತ್ತು ದಿನಸಿ ಅಂಗಡಿಗಳನ್ನು ಇ-ಕಾಮರ್ಸ್ ವೇದಿಕೆಯತ್ತೆ ಕರೆತರಲು ಕೈಜೋಡಿಸಿವೆ.

ಸ್ಥಳೀಯ ಮತ್ತು ಸಣ್ಣ ಅಂಗಡಿಗಳು ಹಾಗೂ ಚಿಲ್ಲರೆ ವ್ಯಾಪಾರಿಗಳು ತಮ್ಮ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಅಮೆಜಾನ್, 'ಅಮೆಜಾನ್ ಆನ್ ಲೋಕಲ್ ಶಾಪ್ಸ್' ಘೋಷಿಸಿತ್ತು. ಇದಾದ ಒಂದು ದಿನದ ಬಳಿಕ ರಿಲಯನ್ಸ್ ಇಂಡಸ್ಟ್ರೀಸ್, 'ಕಿರಾಣಿ ಅಂಗಡಿ' ಮತ್ತು ಗ್ರಾಹಕರ ನಡುವಿನ ವಹಿವಾಟು ಸಕ್ರಿಯಗೊಳಿಸಲು ಜಿಯೋಮಾರ್ಟ್ - ವಾಟ್ಸ್​ಆ್ಯಪ್​ ಸಹಭಾಗಿತ್ವ ಘೋಷಣೆ ಮಾಡಿತು.

ಸಿಒಐವಿಡಿ -19 ಪರಿಸ್ಥಿತಿಯಲ್ಲಿ ಭಾರತೀಯ ನಾಗರಿಕರಿಗೆ ಅಗತ್ಯ ವಸ್ತುಗಳನ್ನು ಒದಗಿಸುವ ಸವಾಲನ್ನು ಪರಿಹರಿಸಬೇಕಿದೆ. ಹೀಗಾಗಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವ್ಯಾಪ್ತಿಗೆ ಬರುವ ಡಿಪಿಐಐಟಿ, ವ್ಯಾಪಾರಿ ಒಕ್ಕೂಟಗಳ ಜತೆ ಕೈಜೋಡಿಸಿ ಸಣ್ಣ ಚಿಲ್ಲರೆ ವರ್ತಕರಿಗೆ ಇ- ಕಾಮರ್ಸ್​ ಪ್ಲಾಟ್​ಫಾರ್ಮ್​ ಒದಗಿಸಲು ಮುಂದಾಗಿವೆ.

ಡಿಪಿಐಐಟಿ ಮತ್ತು ಸಿಎಐಟಿ ಹೊರತುಪಡಿಸಿ ಇತರ ಪ್ರವರ್ತಕರಾದ ಸ್ಟಾರ್ಟ್ಅಪ್ ಇಂಡಿಯಾ, ಇನ್ವೆಸ್ಟ್ ಇಂಡಿಯಾ, ಅಖಿಲ ಭಾರತ ಗ್ರಾಹಕ ಉತ್ಪನ್ನಗಳ ವಿತರಕರ ಒಕ್ಕೂಟ ಮತ್ತು ಅವನಾ ಕ್ಯಾಪಿಟಲ್ ಸಹಭಾಗಿತ್ವ ನೀಡುತ್ತಿವೆ ಎಂದು ಸಿಎಐಟಿ ತಿಳಿಸಿದೆ.

ಈ ವಿಶಾಲವಾದ ಭಾರತೀಯ ಇ-ಕಾಮರ್ಸ್ ಪೋರ್ಟಲ್ ದೇಶದ ಏಳು ಕೋಟಿ ವ್ಯಾಪಾರಿಗಳನ್ನು ಸುಲಭವಾಗಿ ಪ್ರವೇಶಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತದೆ. ತಯಾರಕರು, ವಿತರಕರು, ಸಗಟು ವ್ಯಾಪಾರಿಗಳು, ದೇಶಿಯ ವ್ಯಾಪಾರದ ಚಿಲ್ಲರೆ ವರ್ತಕರು ಮತ್ತು ಗ್ರಾಹಕರು ಈ ಇ-ಕಾಮರ್ಸ್ ವೇದಿಕೆಯ ಅವಿಭಾಜ್ಯ ಅಂಗವಾಗಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details