ನವದೆಹಲಿ :2021ರಲ್ಲಿ ತನ್ನ ಸ್ವಾಧೀನ ಪ್ರಕ್ರಿಯೆಯನ್ನು ಮುಂದುವರಿಸಿರುವ ಪ್ರಮುಖ ಆನ್‌ಲೈನ್ ಕಲಿಕಾ ವೇದಿಕೆಯಾದ ಬೈಜು'ಸ್ ನೇರ ಆನ್‌ಲೈನ್ ಕಲಿಕಾ ವೇದಿಕೆಯಾದ ವೇದಾಂತುವನ್ನು ಸುಮಾರು 600-700 ಮಿಲಿಯನ್ ಡಾಲರ್‌ಗೆ ಖರೀದಿಸಲು ಮಾತುಕತೆ ನಡೆಯುತ್ತಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.
ಇದು ಈ ವರ್ಷ ಬೈಜು ರವೀಂದ್ರನ್ ನಡೆಸುತ್ತಿರುವ ಕಂಪನಿಯ ನಾಲ್ಕನೇ ಪ್ರಮುಖ ಸ್ವಾಧೀನವಾಗಿದೆ. ಮೂಲಗಳ ಪ್ರಕಾರ, ವೇದಾಂತು ಒಪ್ಪಂದವು ಪ್ರಸ್ತುತ ಮುಂದುವರಿದ ಹಂತದಲ್ಲಿದೆ. ಅಗತ್ಯ ನಿಯಂತ್ರಕ ಅನುಮೋದನೆಗಳನ್ನು ಪೂರೈಸಿದ ನಂತರ ಶೀಘ್ರದಲ್ಲೇ ಖರೀದಿ ಕಾರ್ಯರೂಪಕ್ಕೆ ಬರಲಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ವೇದಾಂತು, ಇಂತಹ ಯಾವುದೇ ಚರ್ಚೆಗಳು ಬೈಜು'ಸ್ ಜೊತೆ ನಡೆದಿಲ್ಲ. ನಾವು ಈ ರೀತಿ ಯಾವುದನ್ನು ಪರಿಗಣಿಸುತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಆಪ್ಟಸ್ ವ್ಯಾಲ್ಯೂ ಹೌಸಿಂಗ್ ಫೈನಾನ್ಸ್ ನಿಂದಲೂ ಐಪಿಒಗೆ ನಿರ್ಧಾರ: 1 ಷೇರಿನ ಬೆಲೆ 346 ರೂ.
ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಆನ್‌ಲೈನ್ ಶಿಕ್ಷಣದ ಎಜುಟೆಕ್ ಬಗ್ಗೆ ಬೈಜು'ಸ್ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯಿಸಲಿಲ್ಲ. ವೇದಾಂತು ಕೆ-12 ಮತ್ತು ಪರೀಕ್ಷಾ ತಯಾರಿ ವಿಭಾಗಗಳಲ್ಲಿ ವೈಯಕ್ತಿಕ ಮತ್ತು ಗುಂಪು ತರಗತಿಗಳನ್ನು ನೀಡುತ್ತದೆ. ಪ್ರತಿ ತಿಂಗಳು 1.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಲೈವ್ ಅಧ್ಯಯನ ಮಾಡುತ್ತಾರೆ.
40 ದಶಲಕ್ಷಕ್ಕೂ ಹೆಚ್ಚು ಬಳಕೆದಾರರು ಉಚಿತ ಕಂಟೆಂಟ್, ಸಂದೇಹಗಳು, ಪರೀಕ್ಷೆಗಳು ಹಾಗೂ ವಿಡಿಯೋಗಳನ್ನು ವೇದಾಂತುವಿನಿಂದ ಪಡೆಯುತ್ತಿದ್ದಾರೆ. ಯುಟ್ಯೂಬ್‌ನಲ್ಲೂ ವೇದಾಂತ್‌ನ ಚಾನೆಲ್‌ನಲ್ಲಿ ಸಂಬಂಧಿತ ವಿಷಯಗಳ ಬಗ್ಗೆ ಮಾಹಿತಿ ತಿಳಿಯುತ್ತಿದ್ದಾರೆ.
ವಿಶ್ವದ ಪ್ರಮುಖ ಎಡ್‌ಟೆಕ್(ತಂತ್ರಜ್ಞಾನ ಆಧಾರಿತ ಶಿಕ್ಷಣ) ಕಂಪನಿಯಾದ ಬೈಜುಸ್, ತನ್ನ ಪ್ರಮುಖ ಕಲಿಕಾ ಆ್ಯಪ್‌ನಲ್ಲಿ 100 ಮಿಲಿಯನ್ ನೋಂದಾಯಿತ ವಿದ್ಯಾರ್ಥಿಗಳನ್ನು ಹೊಂದಿದ್ದು, ಕಳೆದ ತಿಂಗಳು ತಡವಾಗಿ 600 ಮಿಲಿಯನ್ ಡಾಲರ್‌ಗೆ ಸಿಂಗಾಪುರ್‌ನ ಪ್ರಧಾನ ಕಚೇರಿ ಪಡೆದಿತ್ತು. ಪಾಲುದಾರಿಕೆಯು 1 ಬಿಲಿಯನ್ ಡಾಲರ್‌ಗೆ ಏರಿಸುವ ಗುರಿ ಹೊಂದಿದ್ದು, 17 ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದೆ.