ನವದೆಹಲಿ: ಬಜೆಟ್‌ನಲ್ಲಿ ಘೋಷಿಸಲಾದ ತೆರಿಗೆ ವಿನಾಯಿತಿ ಮೊತ್ತವು ಜಿಫ್ಟ್ ಸಿಟಿ (ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್) ಅಂತಾರಾಷ್ಟ್ರೀಯ ಹಣಕಾಸು ಕ್ಷೇತ್ರದ ಆಕರ್ಷಣೆಯಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇಂಡಿಯಾ ಏರ್‌ಕ್ರಾಫ್ಟ್ ಲೀಸಿಂಗ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ವೆಚ್ಚ- ಪರಿಣಾಮಕಾರಿ ವೈಶಿಷ್ಟ್ಯದಿಂದಾಗಿ ಸರ್ಕಾರವು ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರವನ್ನು (ಐಎಫ್‌ಎಸ್‌ಸಿ) ವೇಗವಾಗಿ ನಿರ್ಮಿಸಿದೆ. ಜಿಫ್ಟ್ ನಗರದಲ್ಲಿ ಅಂತಾರಾಷ್ಟ್ರೀಯ ಹಣಕಾಸು ಕ್ಷೇತ್ರವನ್ನು ಆಕರ್ಷಿಸುವಂತಹ ಘೋಷಣೆಗಳ ಪ್ಯಾಕೇಜ್ಅನ್ನು ಬಜೆಟ್ ಮೂಲಕ ನೀಡಲಾಗಿದೆ ಎಂದು ಹೇಳಿದರು.
ಸೀತಾರಾಮನ್ ತಮ್ಮ 2021-22ರ ಬಜೆಟ್ ಭಾಷಣದಲ್ಲಿ ಜಿಫ್ಟ್ ಸಿಟಿಯಲ್ಲಿ ಇರುವ ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರವನ್ನು (ಐಎಫ್‌ಎಸ್‌ಸಿ) ಜಾಗತಿಕ ಹಣಕಾಸು ಕೇಂದ್ರವನ್ನಾಗಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದರು.