ಕರ್ನಾಟಕ

karnataka

ETV Bharat / business

ಬಜೆಟ್ 2021: ಕೀಟನಾಶಕ GST ಸ್ಲ್ಯಾಬ್​ 18 ರಿಂದ 5ಕ್ಕೆ ತಗ್ಗಿಸಿ- ಪಿಎಂಎಫ್‌ಐ ಒತ್ತಾಯ - ಬಜೆಟ್​ ನಿರೀಕ್ಷೆ

ದೇಶೀಯ ಕೃಷಿ-ರಾಸಾಯನಿಕಗಳ ಉದ್ಯಮವನ್ನು ರಕ್ಷಿಸಲು ಸರ್ಕಾರವು ಕೀಟನಾಶಕಗಳ ಸುಂಕದ ನ್ಯೂನತೆಯನ್ನು (ರಫ್ತು ಪ್ರಯೋಜನೆ) ಈಗಿನ ಶೇ 2 ರಿಂದ 13ಕ್ಕೆ ಹೆಚ್ಚಿಸಬೇಕು ಎಂದು ಕೀಟನಾಶಕ ತಯಾರಕರು ಮತ್ತು ಫಾರ್ಮುಲೇಟರ್‌ಗಳ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

pesticides
ಕೀಟನಾಶಕ

By

Published : Jan 13, 2021, 5:11 PM IST

ನವದೆಹಲಿ: ಮುಂಬರುವ ಬಜೆಟ್‌ನಲ್ಲಿ ಸರ್ಕಾರವು ಕೀಟನಾಶಕಗಳ ಮೇಲಿನ ಶೇ 18ರ ಜಿಎಸ್‌ಟಿ ಸ್ಲ್ಯಾಬ್​ ಅನ್ನು ಶೇ 5ಕ್ಕೆ ಇಳಿಸಬೇಕು ಎಂದು ಕೀಟನಾಶಕ ತಯಾರಕರು ಮತ್ತು ಫಾರ್ಮುಲೇಟರ್​ಗಳ ಸಂಘ (ಪಿಎಂಎಫ್​ಐಐ) ಒತ್ತಾಯಿಸಿದೆ.

ದೇಶೀಯ ಕೃಷಿ-ರಾಸಾಯನಿಕಗಳ ಉದ್ಯಮವನ್ನು ರಕ್ಷಿಸಲು ಸರ್ಕಾರವು ಕೀಟನಾಶಕಗಳ ಸುಂಕದ ನ್ಯೂನತೆಯನ್ನು (ರಫ್ತು ಪ್ರಯೋಜನೆ) ಈಗಿನ ಶೇ 2 ರಿಂದ 13ಕ್ಕೆ ಹೆಚ್ಚಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಮೇಕ್ ಇನ್ ಇಂಡಿಯಾ ಅಭಿಯಾನದಡಿ ಸ್ಥಳೀಯವಾಗಿ ಮಧ್ಯವರ್ತಿಗಳು ಮತ್ತು ತಾಂತ್ರಿಕ ದರ್ಜೆಯ ಕೀಟನಾಶಕಗಳಿಗೆ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಆರ್ಥಿಕ ಮತ್ತು ಇತರ ಅಭಿವೃದ್ಧಿ ನೆರವು ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದೆ.

ಪಿಎಂಎಫ್​ಐಐ 200ಕ್ಕೂ ಹೆಚ್ಚು ಸಣ್ಣ, ಮಧ್ಯಮ ಮತ್ತು ದೊಡ್ಡ ಪ್ರಮಾಣದ ಭಾರತೀಯ ಕೀಟನಾಶಕ ತಯಾರಕರು, ವ್ಯಾಪಾರಿಗಳ ಸಂಘಟನೆಯನ್ನು ಪ್ರತಿನಿಧಿಸುತ್ತಿದೆ.

ಇದನ್ನೂ ಓದಿ: ಕೋಲ್​ ಇಂಡಿಯಾ ಬಂಡವಾಳ ವೆಚ್ಚ ಶೇ 30ರಷ್ಟು ಹೆಚ್ಚಳ

ಜಿಎಸ್​ಟಿ ಕಡಿತದಿಂದ ಭಾರತದ ಒಟ್ಟು ಮೂರನೇ ಎರಡರಷ್ಟು ರೈತರಿಗೆ ಇದರಿಂದ ನೆರವಾಗುತ್ತದೆ. ಈಗ ಕೇಂದ್ರ ವ್ಯಾಪ್ತಿಗೂ ಯಾವುದೇ ನಷ್ಟವಾಗದಂತೆ ತಮ್ಮ ಬೆಳೆಗಳನ್ನು ರಕ್ಷಣೆ ನೀಡುತ್ತದೆ. ಇದು ರೈತರಿಗೆ ಕನಿಷ್ಠ ನಷ್ಟದೊಂದಿಗೆ ಬೆಳೆಗಳನ್ನು ಕೊಯ್ಲು ಮಾಡಲು ಮತ್ತು ಉತ್ತಮ ಆದಾಯವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಪಿಎಂಎಫ್​ಎಐ ಅಧ್ಯಕ್ಷ ಪ್ರದೀಪ್ ದೇವ್ ಹೇಳಿದರು.

ABOUT THE AUTHOR

...view details