ನವದೆಹಲಿ: ಭಾರತೀಯ ಟೆಲಿಕಾಂ ಮಾರುಕಟ್ಟೆ ದರ ಸಮರದಿಂದ ದೈತ್ಯ ದೂರ ಸಂಪರ್ಕ ಒಗ್ಗೂಡಿ ವಹಿವಾಟಿನಲ್ಲಿ ನಿರತವಾಗಿದ್ದರೇ ಸಾರ್ವಜನಿಕ ವಲಯದ/ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮಾತ್ರ ನಷ್ಟದತ್ತ ಮುಖಮಾಡಿ ವರ್ಷಗಳೇ ಉರುಳಿದೆ. 2008 ರ ಬಳಿಕ ಅದು ಒಮ್ಮೆಯೂ ಲಾಭದ ಕಡೆ ಮುಖಮಾಡಿಲ್ಲ.
ಕಳೆದ ವರ್ಷದ ಡಿಸೆಂಬರ್ನಲ್ಲಿ ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಒಟ್ಟು ₹ 90 ಸಾವಿರ ಕೋಟಿಯಷ್ಟು ನಷ್ಟ ಅನುಭವಿಸಿದೆ ಎಂದು ಕೋಟಕ್ ಇನ್ಸ್ಟಿಟ್ಯೂಟ್ ಇಕ್ವಿಟೀಸ್ (ಕೆಇಇ) ಇತ್ತೀಚಿನ ವರದಿಯಲ್ಲಿ ತಿಳಿಸಿದೆ. ಭಾರಿ ನಷ್ಟದಲ್ಲಿ ಸಾಗುತ್ತಿರುವ ಸಂಸ್ಥೆ ಮುಚ್ಚದಂತೆ ತಡೆಯಲು ಸರ್ಕಾರ ನೆರವಿನ ಹಸ್ತ ಚಾಚಬೇಕಿದೆ. ನಗದು ಬಂಡವಾಳ ಒದಗಿಸಿ ಅದನ್ನು ಮೇಲೆತ್ತಬೇಕು ಎಂದು ಸೂಚಿಸಿದೆ.
ಕಡಿಮೆ ಆದಾಯ ಹಾಗೂ ದರ ಸಮರದ ದುಷ್ಟರಿಣಾಮ ಇಡೀ ಉದ್ಯಮದ ಮೇಲೆ ಗಂಭೀರ ಪ್ರಭಾವ ಬೀರಿದೆ. ಮುಂದೆ ನಡೆಯಲಿರುವ ಬ್ಲಾಕ್ ಬಾಸ್ಟರ್ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ ಸಂಸ್ಥೆಗೆ ಮತ್ತಷ್ಟು ಹೊಡೆತ ಕೊಡಲಿದೆ. ಲಾಭಾಂಶ ಬರದಂತೆ ನೋಡಿಕೊಳ್ಳದಿದ್ದ ಈಗಿನ ಪರಿಣಾಮ ಇನ್ನಷ್ಟು ಬಿಗಡಾಯಿಸಲಿದೆ ಎಂದು ಎಚ್ಚರಿಸಿದೆ.
ಬಿಎಸ್ಎನ್ಎಲ್ ಕೊನೆಯ ಬಾರಿ ಧನಾತ್ಮಕ ಲಾಭ ತೋರಿಸಿದ್ದು 2008 ರಂದು. 2009ರಿಂದ 2018ರ ಅವಧಿಯಲ್ಲಿ ಕಂಪನಿಯು ₹ 82 ಸಾವಿರ ಕೋಟಿಯಷ್ಟು ಆದಾಯ ಇಲ್ಲದೆ ಸಾಗಿ ಬಂದಿದೆ. 2018ರ ಅಂತ್ಯದ ವೇಳೆಗೆ ಅದು 90,000 ಕೋಟಿ ರೂ. ದಾಟಿದೆ. ಸಿಬ್ಬಂದಿ ವೆಚ್ಚ, ನಿವೃತ್ತಿ ಲಾಭಾಂಶ ಸಂಚಯ ಒಳಗೊಂಡು ಶೇ 66ರಷ್ಟು ಆದಾಯ ಆಪೋಷನ ತೆಗೆದುಕೊಳ್ಳುತ್ತಿದೆ. ಅದು 2006ರಲ್ಲಿ ಶೇ 21ರಷ್ಟು ಹಾಗೂ 2008ರಲ್ಲಿ ಶೇ 27ರಷ್ಟು ಇದ್ದದ್ದು. ಈಗ ಶೇ 66ಕ್ಕೆ ಬಂದು ತಲುಪಿದೆ ಎಂದು ವರದಿ ತಿಳಿಸಿದೆ.