ಕೋಲ್ಕತ್ತಾ (ಪಶ್ಚಿಮಬಂಗಾಳ) :ಬಿಸ್ಕೆಟ್ ಉತ್ಪಾದಿಸುವ ದೇಶದ ಪ್ರಮುಖ ಕಂಪನಿಯಾದ ಬ್ರಿಟಾನಿಯಾ ಇಂಡಸ್ಟ್ರೀಸ್ ಲಿಮಿಟೆಡ್ (BIL) ತನ್ನ ಕಾರ್ಖಾನೆಗಳಲ್ಲಿ ಮಹಿಳಾ ಉದ್ಯೋಗಿಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಮುಂದಾಗಿದೆ. 2024ರ ವೇಳೆಗೆ ತನ್ನೆಲ್ಲಾ ಕಾರ್ಖಾನೆಗಳಲ್ಲಿ ಶೇ.50 ರಷ್ಟು ಮಹಿಳೆಯರಿಗೆ ಉದ್ಯೋಗ ನೀಡುವ ಗುರಿ ಇಟ್ಟುಕೊಂಡಿದೆ ಎಂದು ಕಂಪನಿ ಹೇಳಿಕೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಬಿಐಎಲ್ ಮಾರುಕಟ್ಟೆ ಅಧಿಕಾರಿ ಅಮಿತ್ ದೋಷಿ, ಪ್ರಸ್ತುತ ಕಂಪನಿಯ ಕಾರ್ಖಾನೆಗಳ ಉದ್ಯೋಗಿಗಳಲ್ಲಿ ಶೇ.38ರಷ್ಟು ಮಹಿಳೆಯರಿದ್ದಾರೆ. ಇದನ್ನು ಮುಂದಿನ 2 ವರ್ಷಗಳಲ್ಲಿ 50 ಪ್ರತಿಶತ ಅನುಪಾತಕ್ಕೆ ಕೊಂಡೊಯ್ಯುವ ಗುರಿ ಹೊಂದಿದ್ದೇವೆ ಎಂದರು.
ಬ್ರಿಟಾನಿಯಾದ ಗುವಾಹಟಿ ಕಾರ್ಖಾನೆಯಲ್ಲಿ ಪ್ರಸ್ತುತ ಮಹಿಳೆಯರ ಪ್ರಮಾಣ ಶೇ.60ರಷ್ಟಿದೆ. ಅದನ್ನು ಶೇ.65ಕ್ಕೆ ಹೆಚ್ಚಿಸಲಾಗುವುದು. ಇಂಜಿನಿಯರಿಂಗ್, ಟೇಪಿಂಗ್ ಮತ್ತು ಗ್ರೈಂಡಿಂಗ್ ಮತ್ತು ಪ್ಯಾಕಿಂಗ್, ಹೌಸ್‌ಕೀಪಿಂಗ್, ಪ್ಯಾಂಟ್ರಿ, ಲ್ಯಾಬ್ ಟೆಸ್ಟಿಂಗ್, ಕ್ಯಾಂಟೀನ್ ಮತ್ತು ಸೆಕ್ಯುರಿಟಿಯಂತಹ ಪುರುಷರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಮಹಿಳಾ ಉದ್ಯೋಗಿಗಳನ್ನು ನೇಮಿಸಲು ಕಂಪನಿ ಚಿಂತಿಸಿದೆ ಎಂದರು.