ಕರ್ನಾಟಕ

karnataka

ETV Bharat / business

ಭಾರತಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಪರ್ವಕಾಲ: ಅಮೆರಿಕ, ಕೆನಡಾ, ಸ್ಪೇನ್​ ಜೇಬಿನಲ್ಲಿ ಮೋದಿ ಕೈ..! - ಭಾರತದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾರುಕಟ್ಟೆ

ಜರ್ಮನಿಯು ಎರಡನೇ ಹಂತದ ರವಾನೆಯಲ್ಲಿ 50 ಲಕ್ಷ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಪಡೆಯಲಿದೆ. ಮೊದಲ ರವಾನೆಯಲ್ಲಿ ಕೇವಲ 1.5 ಮೆಟ್ರಿಕ್ ಟನ್​ ಪಡೆಯಲಿದೆ. ಡ್ರಾಕ್ಸಿಕ್ಲೋರೋಕ್ವಿನ್‌ಗಾಗಿ ಭಾರತ ಸಿದ್ಧಪಡಿಸಿದ 13 ದೇಶಗಳು ಹೀಗಿವೆ; ಅಮೆರಿಕ, ಸ್ಪೇನ್, ಜರ್ಮನಿ, ಬಹ್ರೇನ್, ಬ್ರೆಜಿಲ್, ನೇಪಾಳ, ಭೂತಾನ್, ಅಫ್ಘಾನಿಸ್ತಾನ, ಮಾಲ್ಡೀವ್ಸ್, ಬಾಂಗ್ಲಾದೇಶ, ಸೀಶೆಲ್ಸ್ ಮತ್ತು ಮಾರಿಷಸ್.

Hydroxychloroquine
ಹೈಡ್ರಾಕ್ಸಿಕ್ಲೋರೋಕ್ವಿನ್

By

Published : Apr 10, 2020, 11:36 PM IST

ನವದೆಹಲಿ: ಇಡೀ ವಿಶ್ವವೇ ಇದೀಗ ಭಾರತದ ಹಿಂದೆ ಬಿದ್ದಿದೆ. ಮಲೇರಿಯಾಗೆ ಕೊಡುವ ಹೈಡ್ರಾಕ್ಸಿಕ್ಲೋರೋಕ್ವಿನ್ (ಎಚ್​ಸಿಕ್ಯೂ) ಔಷಧ ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಮುನ್ನಚ್ಚರಿಕಾ ಕ್ರಮವಾಗಿ ಎಚ್​ಸಿಕ್ಯೂ ಮಾತ್ರ ನೀಡುತ್ತಿವೆ.

ಈಗಾಗಲೇ ಕೆಲವು ರಾಷ್ಟ್ರಗಳು ಮೊದಲ ಹಂತದ ಮಾತ್ರೆಗಳನ್ನು ಸ್ವೀಕರಿಸಿವೆ. ಎರಡನೇ ಹಂತದಲ್ಲಿ ತಮಗೆ ಎಷ್ಟು ಪ್ರಮಾಣದಲ್ಲಿ ಆಮದು ಆಗಬಹುದು ಎಂದು ಲೆಕ್ಕಚಾರದಲ್ಲಿ ತೊಡಗಿವೆ.

ಎರಡನೇ ರವಾನೆಯಲ್ಲಿ 50 ಲಕ್ಷ ಮಾತ್ರೆಗಳ ಹೈಡ್ರಾಕ್ಸಿಕ್ಲೋರೋಕ್ವಿನ್ ಸಿಗಲಿದೆ ಎಂದು ಬ್ರೆಜಿಲ್ ಮತ್ತು ಕೆನಡಾ ನಿರೀಕ್ಷಿಸುತ್ತಿವೆ. ಮೊದಲ ಹಂತದ ರವಾನೆಯಲ್ಲಿ ಬ್ರೆಜಿಲ್ 0.53 ಮೆಟ್ರಿಕ್​ ಟನ್​ ಔಷಧಿ ಸ್ವೀಕರಿಸಲಿದೆ ಎಂದು ಮೂಲಗಳು ತಿಳಿಸಿವೆ.

ಹೈಡ್ರಾಕ್ಸಿಕ್ಲೋರೋಕ್ವಿನ್‌ಗಾಗಿ ಭಾರತ 13 ದೇಶಗಳ ಮೊದಲ ಪಟ್ಟಿಯನ್ನು ಸಿದ್ಧಪಡಿಸಿದೆ. ಎಚ್‌ಸಿಕ್ಯುನ 48 ಲಕ್ಷ ಟ್ಯಾಬ್ಲೆಟ್‌ಗಳನ್ನು ಅಮೆರಿಕ ಕೇಳಿದ್ದು, ಭಾರತ 35.82 ಲಕ್ಷ ಮಾತ್ರೆಗಳನ್ನು ಮಂಜೂರು ಮಾಡಿದೆ. ಭಾರತವು ಅವರ ಕೋರಿಕೆಯಂತೆ 9 ಮೆಟ್ರಿಕ್​ ಟನ್ ಅಮೆರಿಕಕ್ಕೆ ಕಳುಹಿಸಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಜರ್ಮನಿಯು ಎರಡನೇ ಹಂತದ ರವಾನೆಯಲ್ಲಿ 50 ಲಕ್ಷ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಪಡೆಯಲಿದೆ. ಮೊದಲ ರವಾನೆಯಲ್ಲಿ ಕೇವಲ 1.5 ಮೆಟ್ರಿಕ್ ಟನ್​ ಪಡೆಯಲಿದೆ. ಡ್ರಾಕ್ಸಿಕ್ಲೋರೋಕ್ವಿನ್‌ಗಾಗಿ ಭಾರತ ಸಿದ್ಧಪಡಿಸಿದ 13 ದೇಶಗಳು ಹೀಗಿವೆ; ಅಮೆರಿಕ, ಸ್ಪೇನ್, ಜರ್ಮನಿ, ಬಹ್ರೇನ್, ಬ್ರೆಜಿಲ್, ನೇಪಾಳ, ಭೂತಾನ್, ಅಫ್ಘಾನಿಸ್ತಾನ, ಮಾಲ್ಡೀವ್ಸ್, ಬಾಂಗ್ಲಾದೇಶ, ಸೀಶೆಲ್ಸ್ ಮತ್ತು ಮಾರಿಷಸ್.

ABOUT THE AUTHOR

...view details