ನವದೆಹಲಿ:ಬಿಟ್‌ಕಾಯಿನ್ ಮತ್ತು ಎಥೆರಿಯಮ್‌ನಂತಹ ಕ್ರಿಪ್ಟೋಕರೆನ್ಸಿಗಳ ರಕ್ತದೋಕುಳಿ ಕಂಡ ಒಂದು ದಿನದ ನಂತರ ಉದ್ಯಮಿಗಳು ಗುರುವಾರ ಜನರು ಭರವಸೆ ಕಳೆದುಕೊಳ್ಳದಂತೆ ಮತ್ತು ತಮ್ಮ ಹೂಡಿಕೆಗಳ ಬಗ್ಗೆ ದೀರ್ಘಾವಧಿಯ ನಿರ್ಧಾರ ತೆಗೆದುಕೊಳ್ಳದಂತೆ ವಿನಂತಿಸಿದ್ದಾರೆ.
ಬಿಟ್ ಕಾಯಿನ್ 2009ರಲ್ಲಿ ಬೆಳಕಿಗೆ ಬಂದ ಮೊದಲ ಕ್ರಿಪ್ಟೋಕರೆನ್ಸಿಗಳಲ್ಲಿ ಒಂದು. ಭೌತಿಕವಾಗಿ ಅಸ್ತಿತ್ವವಿಲ್ಲದ ಸಂಪೂರ್ಣ ಡಿಜಿಟಲ್ ಕರೆನ್ಸಿ. ಡಿಜಿಟಲ್ ಕರೆನ್ಸಿಗೆ ಇರುವ ನಿಯಮಗಳನ್ನು ಉಪಯೋಗಿಸಲಾಗುತ್ತದೆ. ಇದೊಂದು ಅತ್ಯಂತ ಸೂಕ್ಷ್ಮ ಹಾಗೂ ವಿಕೇಂದ್ರೀಕೃತ ಡಿಜಿಟಲ್ ಕರೆನ್ಸಿಯಾಗಿದೆ. ಇದರ ಮೂಲ ಮೌಲ್ಯ ಬ್ಲಾಕ್‌ಚೈನ್ ತಂತ್ರಜ್ಞಾನದಿಂದ ಆಧಾರಿತವಾಗುತ್ತದೆ.
ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಡಿಜಿಟಲ್ ನಾಣ್ಯಗಳನ್ನು ಪಾವತಿಯಾಗಿ ಬಳಸದಂತೆ ಎಚ್ಚರಿಕೆ ನೀಡಿದ ನಂತರ, ಬಿಟ್‌ಕಾಯಿನ್‌ನ ಬೆಲೆ ತಿಂಗಳಲ್ಲಿ ಮೊದಲ ಬಾರಿಗೆ 40,000 ಡಾಲರ್‌ಗಿಂತ ಕಡಿಮೆಯಾಗಿದೆ. ಇತರ ಕ್ರಿಪ್ಟೋಕರೆನ್ಸಿಗಳ ಮೇಲೂ ಇದು ಒತ್ತಡ ಹೇರಿತು.
ಪರಿಸರ ಹಾನಿ ಉಲ್ಲೇಖಿಸಿದ ಟೆಸ್ಲಾ ಕಳೆದ ವಾರ ತನ್ನ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಪಾವತಿ ಕ್ರಮವಾಗಿ ಬಿಟ್‌ಕಾಯಿನ್‌ಗೆ ಬ್ರೇಕ್ ಹಾಕಿದ ನಂತರ, ವೇಗವಾಗಿ ಬೆಳೆಯುತ್ತಿರುವ ಕ್ರಿಪ್ಟೋ ಮಾರುಕಟ್ಟೆಗೆ ಚೀನಾದ ನಡೆ ಎರಡನೇ ಆಘಾತವಾಗಿದೆ.
ಜೆಬ್‌ಪೇ ಸಹ - ಸಿಇಒ ಅವಿನಾಶ್ ಶೇಖರ್ ಅವರ ಪ್ರಕಾರ, ಬಿಟ್‌ಕಾಯಿನ್ ಬೆಲೆಯಲ್ಲಿ ಅದರ ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ 40 ಪ್ರತಿಶತದಷ್ಟು ಕುಸಿತವು ನಾಟಕೀಯವಾಗಿ ಕಾಣುತ್ತದೆ. ಆದರೆ, ಕ್ರಿಪ್ಟೋ ಸೇರಿದಂತೆ ಅನೇಕ ಮಾರುಕಟ್ಟೆಗಳಲ್ಲಿ ಇದು ಸಾಮಾನ್ಯವಾಗಿದೆ ಎಂದರು.
ಓದಿ: ಐಟಿ ರಿಟರ್ನ್ಸ್ ಸಲ್ಲಿಕೆ ಗಡುವು ವಿಸ್ತರಣೆ: ಕೊನೆಯ ದಿನಾಕ ಯಾವುದು ಗೊತ್ತೇ?
ಇಂತಹ ತಿದ್ದುಪಡಿಗಳು ಮುಖ್ಯವಾಗಿ ಅಲ್ಪಾವಧಿಯ ವ್ಯಾಪಾರಿಗಳು ಲಾಭ ಪಡೆದುಕೊಳ್ಳಲಿದ್ದಾರೆ. ಹೂಡಿಕೆದಾರರು ಮೊದಲು ಶಿಕ್ಷಣದಲ್ಲಿ ಹೂಡಿಕೆ ಮಾಡಬೇಕು. ಷೇರುಗಳನ್ನು ಖರೀದಿಸುವ ಮೊದಲು ಕಂಪನಿಯ ಮಾಹಿತಿ ನೋಡುವಂತೆ ನೀವು ಬಿಟ್‌ಕಾಯಿನ್, ಎಥೆರಿಯಮ್ ಮತ್ತು ಇತರ ಕ್ರಿಪ್ಟೋ ಸ್ವತ್ತುಗಳ ಮೂಲ ಮೌಲ್ಯ ಸಂಶೋಧಿಸಿ ಎಂದು ಸಲಹೆ ನೀಡಿದ್ದಾರೆ.
ಬುಧವಾರ ಸುಮಾರು 1 ಟ್ರಿಲಿಯನ್ ಡಾಲರ್ (1 ಲಕ್ಷ ಕೋಟಿ) ಇಡೀ ಕ್ರಿಪ್ಟೋ ವಲಯದ ಮಾರುಕಟ್ಟೆ ಬಂಡವಾಳೀಕರಣ ಅಳಿಸಿದಂತಾಗಿದೆ.
ರೂಪಾಯಿ ವೆಚ್ಚದ ಸರಾಸರಿ ಮತ್ತು ಎಸ್‌ಐಪಿಗಳಂತಹ ತಂತ್ರಗಳನ್ನು ಚಂಚಲತೆಯ ಮೂಲಕ ಹೆಚ್ಚು ವಿಶ್ವಾಸದಿಂದ ನಡೆಸಲು ಮತ್ತು ದೀರ್ಘಕಾಲೀನ ದೃಷ್ಟಿಕೋನ ಬಳಸಿ ಎಂದರು.
ಭಾರತದಲ್ಲಿ ಬಿಟ್‌ಕಾಯಿನ್‌ನಲ್ಲಿ ಹೂಡಿಕೆ ಕಾನೂನುಬದ್ಧವೇ?
ಭಾರತದಲ್ಲಿ ಬಿಟ್‌ಕಾಯಿನ್ ಮೇಲೆ ಹೂಡಿಕೆ ಮಾಡುವುದು ನಿಷೇಧಿತವಲ್ಲ. ಇದನ್ನು ಯಾವುದೇ ಕೇಂದ್ರ ಪ್ರಾಧಿಕಾರ ನಿಯಂತ್ರಿಸುವುದಿಲ್ಲ. ಭಾರತದ ಸುಪ್ರೀಂಕೋರ್ಟ್ 2019ರ ಫೆಬ್ರವರಿ 25ರ ತನ್ನ ತೀರ್ಪಿನಲ್ಲಿ, 'ಶೀಘ್ರದಲ್ಲೇ ಕ್ರಿಪ್ಟೋಕರೆನ್ಸಿ ನಿಯಂತ್ರಣ ನೀತಿಗಳನ್ನು ಜಾರಿಗೆ ತರುವಂತೆ ಸರ್ಕಾರವನ್ನು ಕೋರಿತ್ತು. ಆದರೆ, ಅಂದಿನಿಂದ ಇಂದಿನ ತನಕ ಯಾವುದೇ ನೀತಿಯ ಪ್ರಗತಿ ಕಂಡು ಬಂದಿಲ್ಲ.
ಕ್ರಿಪ್ಟೋ ಕರೆನ್ಸಿಗಳಲ್ಲಿ ವ್ಯಾಪಾರ ಮಾಡಿ, ಯಾವುದೇ ಕಾನೂನು ಉಲ್ಲಂಘಿಸದಿದ್ದರೂ ವಹಿವಾಟಿನ ವೇಳೆ ವಿವಾದ ಉಂಟಾದರೆ ಯಾವುದೇ ನಿಯಮಗಳು, ಮಾರ್ಗಸೂಚಿಗಳ ಅಥವಾ ಸರ್ಕಾರದ ಬೆಂಬಲವಿಲ್ಲ.
ಕ್ರಿಪ್ಟೋ ಕರೆನ್ಸಿ ಮಸೂದೆ ತರಲು ಭಾರತ ಸರ್ಕಾರ ಯೋಜಿಸುತ್ತಿರುವುದರಿಂದ ಕ್ರಿಪ್ಟೋ ಕುಸಿತ ಸಂಭವಿಸಿದೆ. ಅಮೆರಿಕ, ಇಂಗ್ಲೆಂಡ್, ಜಪಾನ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಈ ಕರೆನ್ಸಿಗಳನ್ನು ನಿಯಂತ್ರಿಸುವ ಅಭಿವೃದ್ಧಿಶೀಲ ರಾಷ್ಟ್ರಗಳ ಮಾದರಿಯಲ್ಲಿ ಭಾರತವು ನಿಯಮಗಳನ್ನು ರೂಪಿಸಬೇಕು ಎಂದು ತಜ್ಞರ ಅಭಿಪ್ರಾಯ.
ವಾಜಿರ್ಎಕ್ಸ್ ಸಂಸ್ಥಾಪಕ ಮತ್ತು ಸಿಇಒ ನಿಸ್ಚಾಲ್ ಶೆಟ್ಟಿ ಅವರು, ಭಾರತದ ಕ್ರಿಪ್ಟೋ ನೀತಿಯು ನಾವೀನ್ಯತೆ ಮತ್ತು ಗ್ರಾಹಕರ ಸುರಕ್ಷತೆ ಬೆಳೆಸುವತ್ತ ಸಜ್ಜಾಗಬೇಕು. ನಾವು ಕೆಟ್ಟ ಚಟುವಟಿಕೆಗಳನ್ನು ತಡೆಯಲು ಶಕ್ತರಾಗಿರಬೇಕು. ಆದರೆ, ಉಳಿದ ಅವಕಾಶ ನೀಡುವ ಮೂಲಕ ನಾವೀನ್ಯತೆಯ ಬಾಗಿಲು ತೆರೆದಿಡಬೇಕು ಎಂದರು.
ಪ್ರಸ್ತುತ, ದೇಶದ ಸಂಪೂರ್ಣ ಕ್ರಿಪ್ಟೋ ವಲಯ ನಿಯಂತ್ರಿಸುವ ಸ್ಥಿತಿಯಲ್ಲಿ ಒಂದೇ ನಿಯಂತ್ರಕಗಳಿಲ್ಲ. ಕ್ರಿಪ್ಟೋಕರೆನ್ಸಿಯನ್ನು ನಿಷೇಧಿಸಬೇಡಿ ಎಂದು ಕೈಗಾರಿಕಾ ಸಂಸ್ಥೆ ಐಎಎಂಎಐ ಸರ್ಕಾರಕ್ಕೆ ಮನವಿ ಮಾಡಿದೆ. ಆದರೆ ಪರಿಸರ ವ್ಯವಸ್ಥೆ ನಿಯಂತ್ರಿಸಲು ದೃಢವಾದ ಕಾರ್ಯ ವಿಧಾನದ ಅಗತ್ಯವಿದೆ ಎಂದು ಹೇಳಿದೆ.
ಭಾರತದಲ್ಲಿ ಬಿಟ್‌ಕಾಯಿನ್‌ಗಳನ್ನು ಎಲ್ಲಿ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು?
ವಾಜಿರ್ ಎಕ್ಸ್, ಕಾಯಿನ್ ಸ್ವಿಚ್, ಜೆಬ್‌ಪೇ, ಕಾಯಿನ್ ಡಿಎಕ್ಸ್ (Wazir X, CoinSwitch, ZebPay, CoinDcx) ಪ್ಲಾಟ್ಫಾರ್ಮ್ನಂತಹ ವಿನಿಮಯ ಕೇಂದ್ರಗಳಲ್ಲಿ ಬಿಟ್ ಕಾಯಿನ್ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು. ಈ ವಿನಿಮಯ ಕೇಂದ್ರಗಳಲ್ಲಿ ಟ್ರೇಡಿಂಗ್ ಖಾತೆ ತೆರೆಯಬೇಕು. ಬ್ಯಾಂಕ್ ಖಾತೆಯಿಂದ ಟ್ರೇಡಿಂಗ್ ಖಾತೆಗೆ ಹಣ ವರ್ಗಾಯಿಸಬಹುದು ಮತ್ತು ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿ ಖರೀದಿ ಮತ್ತು ಮಾರಾಟ ಮಾಡಬಹುದು.
ಬಿಟ್‌ಕಾಯಿನ್ ನಿಯಮಗಳು ಸರ್ಕಾರದಿಂದ ನಿಯಂತ್ರಿತವಾಗುತ್ತವೆಯೇ?
ಭಾರತದಲ್ಲಿ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರಗಳು ಪ್ರಸ್ತುತ ಸ್ವಯಂ ನಿಯಂತ್ರಕ ಸಂಸ್ಥೆ (ಎಸ್‌ಆರ್‌ಒ) ಚೌಕಟ್ಟಿನಡಿಯಲ್ಲಿ ನಡೆಯುತ್ತಿವೆ. ಯಾವುದೇ ಸರ್ಕಾರಿ ನಿಯಂತ್ರಕ ಚೌಕಟ್ಟಿನ ವ್ಯಾಪ್ತಿಗೆ ಬರುವುದಿಲ್ಲ. ಭಾರತದಲ್ಲಿ ಕಾರ್ಯಾಚರಣೆ ಪ್ರಾರಂಭಿಸಲು ಯಾವುದೇ ಪರವಾನಗಿ ಅಗತ್ಯವಿಲ್ಲ.
ಬಿಟ್‌ಕಾಯಿನ್ ಟ್ರೇಡಿಂಗ್ ಖಾತೆ ತೆರೆಯಲು ಯಾವ ದಾಖಲೆ ಒದಗಿಸಬೇಕು?
ಕಾನೂನುಬದ್ಧ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರಗಳು ಬಿಟ್‌ಕಾಯಿನ್ ಖರೀದಿ ಮತ್ತು ಮಾರಾಟ ಮಾಡಲು ಗ್ರಾಹಕರು ತಮ್ಮ ಕೆವೈಸಿ ವಿವರ, ಬ್ಯಾಂಕ್ ಖಾತೆ ಮತ್ತು ನೋಂದಾಯಿತ ಮೊಬೈಲ್ ಫೋನ್ ಸಂಖ್ಯೆ ನೀಡುವಂತೆ ಕೇಳುತ್ತವೆ. ಕೆವೈಸಿ ಪರಿಶೀಲನೆ ಪ್ಯಾನ್ ಮತ್ತು ಆಧಾರ್ ಕಾರ್ಡ್ ಮೂಲಕ ಸ್ವೀಕರಿಸಲಾಗುತ್ತದೆ. ಹಣವನ್ನು ನೋಂದಾಯಿತ ಬ್ಯಾಂಕ್ ಖಾತೆಗೆ ಮತ್ತು ಬೇರೆ ಯಾವುದೇ ಮೂಲದಿಂದ ವರ್ಗಾಯಿಸಬಹುದು.
ಬಿಟ್‌ಕಾಯಿನ್ ಮೌಲ್ಯ ಏಕೆ ಅಸ್ಥಿರವಾಗಿದೆ?
ಇತರ ಯಾವುದೇ ಆಸ್ತಿಗೆ ಹೋಲಿಸಿದರೆ ಬಿಟ್‌ಕಾಯಿನ್ ಬಹಳ ಸೌಮ್ಯ ಸ್ವಭಾವದ ವ್ಯಾಪಾರ ಮಾರುಕಟ್ಟೆಯಾಗಿದೆ. ಇದು ಸದಾ ಚಂಚಲತೆಯಿಂದ ವಹಿವಾಟು ನಡೆಸುತ್ತದೆ. ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಸ್ಟಾಕ್‌ಗಳು ದೊಡ್ಡ ಕ್ಯಾಪ್ ಸ್ಟಾಕ್‌ಗಳಿಗಿಂತ ಹೆಚ್ಚು ಸೌಮ್ಯವಾಗಿವೆ.