ಕರ್ನಾಟಕ

karnataka

ETV Bharat / business

ವಾಲ್ ಸ್ಟ್ರೀಟ್ ಷೇರುಪೇಟೆಯಲ್ಲಿ ಏರಿಕೆ - ಮುಂಬೈ ಷೇರುಪೇಟೆಯಲ್ಲಿ ಏರಿಕೆ

ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬೆಳವಣಿಗೆ ಹಿನ್ನೆಲೆ ಮುಂಬೈ ಷೇರುಪೇಟೆಯಲ್ಲಿ ಏರಿಕೆ ಕಂಡು ಬಂದಿದ್ದು, ವಾಲ್ ಸ್ಟ್ರೀಟ್‌ನಲ್ಲಿ ಷೇರುಗಳು ವ್ಯಾಪಕ ಲಾಭ ಗಳಿಸಿವೆ.

ವಾಲ್ ಸ್ಟ್ರೀಟ್ ಶೇರುಪೇಟೆಯಲ್ಲಿ ಏರಿಕೆ
ವಾಲ್ ಸ್ಟ್ರೀಟ್ ಶೇರುಪೇಟೆಯಲ್ಲಿ ಏರಿಕೆ

By

Published : Mar 10, 2021, 7:46 AM IST

ಮುಂಬೈ: ಅಮೆರಿಕದ ವಾಲ್ ಸ್ಟ್ರೀಟ್​​​​​ನಲ್ಲಿ ಷೇರುಪೇಟೆಯ ಸಕಾರಾತ್ಮಕ ಬೆಳವಣಿಗೆಯ ಪರಿಣಾಮ ಮಂಗಳವಾರ (ಮಾರ್ಚ್ 09) ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ ಮತ್ತು ನಿಫ್ಟಿ ಭರ್ಜರಿ ಏರಿಕೆ ಕಂಡಿದೆ.

ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬೆಳವಣಿಗೆ ಹಿನ್ನೆಲೆ ಮುಂಬೈ ಷೇರುಪೇಟೆಯಲ್ಲಿ ಏರಿಕೆ ಕಂಡು ಬಂದಿದ್ದು, ವಾಲ್ ಸ್ಟ್ರೀಟ್‌ನಲ್ಲಿ ಷೇರುಗಳು ವ್ಯಾಪಕ ಲಾಭ ಗಳಿಸಿವೆ. ಎಸ್ & ಪಿ 500 ಶೇ 1.9 ನಷ್ಟು ಏರಿಕೆಯಾಗಿದ್ದು, ಟೆಕ್ ಕಂಪನಿಗಳ ಷೇರುಗಳು ಹೆಚ್ಚು ಲಾಭ ಗಳಿಸಿವೆ. ಅಮೆರಿಕದ ನಾಸ್ಡಾಕ್ ಕಾಂಪೋಸಿಟ್ ಶೇ4.1 ನಷ್ಟು ಏರಿಕೆಯಾಗಿದ್ದು, ಆಪಲ್, ಅಮೆಜಾನ್, ಫೇಸ್‌ಬುಕ್ ಮತ್ತು ಸಿಸ್ಕೋ ಲಾಭಗಳಿಸಿವೆ.

ಇತ್ತೀಚಿನ ದಿನಗಳಲ್ಲಿ ಟೆಕ್ - ಹೆವಿ ಇಂಡೆಕ್ಸ್ ಸಹ ಷೇರುಪೇಟೆಯಲ್ಲಿ ಮುನ್ನುಗ್ಗುತ್ತಿದೆ. ಇನ್ನು ಡೌ ಜೋನ್ಸ್ ಕೈಗಾರಿಕಾ ಸರಾಸರಿ 201 ಪಾಯಿಂಟ್‌ಗಳು ಅಥವಾ ಶೇ 0.6 ರಷ್ಟಕ್ಕೆ ತಲುಪಿದೆ.

ಬಿಪಿಸಿಎಲ್ ನಿಫ್ಟಿ ಗರಿಷ್ಠ ಪ್ರಮಾಣದ ನಷ್ಟ ಕಂಡಿದ್ದು, ಅದೇ ರೀತಿ ಐಒಸಿ, ಒಎನ್ ಜಿಸಿ, ಪವರ್ ಗ್ರಿಡ್ ಕಾರ್ಪೋರೇಷನ್, ಯುಪಿಎಲ್, ಹೀರೋ ಮೋಟೊ ಕಾರ್ಪೋರೇಷನ್ ನಿಫ್ಟಿ ನಷ್ಟ ಕಂಡಿದೆ.

ABOUT THE AUTHOR

...view details