ಮುಂಬೈ: 2021-22ರ ಹಣಕಾಸು ವರ್ಷದ ಆರಂಭಿಕ ಏಪ್ರಿಲ್ ಮಾಸಿಕದಲ್ಲಿ ಬ್ಯಾಂಕ್ಗಳಿಗೆ ಸಾಕಷ್ಟು ರಜೆಗಳು ಇರುವಾಗಲೇ ದೇಶದ ಬೇರೆ ಭಾಗದಲ್ಲಿ ಏ.13ರಿಂದ 16ರ ತನಲ ಸಾಲು ರಜೆಗಳಿವೆ. ಹೀಗಾಗಿ, ಬ್ಯಾಂಕ್ ಗ್ರಾಹಕರು ತಮ್ಮ ಸಂಬಂಧಿತ ಶಾಖೆಗಳಿಗೆ ತೆರಳುವ ಮುನ್ನ ಒಮ್ಮೆ ಕ್ಯಾಲೆಂಡರ್ ನೋಡುವುದು ಉತ್ತಮ.
ಪ್ರತಿ ವರ್ಷವೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ದೇಶಾದ್ಯಂತ ಎಲ್ಲಾ ಬ್ಯಾಂಕ್ಗಳು ಕೆಲ ಸಂದರ್ಭಗಳಲ್ಲಿ ಮುಚ್ಚಲ್ಪಡುತ್ತವೆ ಎಂದು ಹೇಳುತ್ತದೆ. ನೆಗೋಷಬಲ್ ಇನ್ಸ್ಟ್ರುಮೆಂಟ್ಸ್ ಆ್ಯಕ್ಟ್ ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ ಅಡಿ ರಜಾದಿನಗಳಾಗಿ ಘೋಷಿಸಬಹುದು.
ಇದನ್ನೂ ಓದಿ: ದಾಸ್ತಾನು ಖಾಲಿಯಾಗುವವರೆಗೂ ಹಳೆ ದರದಲ್ಲೇ ರಸಗೊಬ್ಬರ ಮಾರಾಟಕ್ಕೆ ಒಪ್ಪಿಗೆ
ಬ್ಯಾಂಕಿಂಗ್ ರಜಾದಿನಗಳು ನಿರ್ದಿಷ್ಟ ರಾಜ್ಯಗಳಲ್ಲಿ ಆಚರಿಸಲಾಗುವ ಹಬ್ಬಗಳ ಮೇಲೆ ಅವಲಂಬಿತವಾಗಿರುತ್ತವೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಭಿನ್ನವಾಗಿರುತ್ತವೆ ಎಂಬುದನ್ನು ಗ್ರಾಹಕರು ಗಮನದಲ್ಲಿರಿಸಿಕೊಳ್ಳಬೇಕು. ಎಲ್ಲ ಅಂಶಗಳನ್ನು ಪರಿಗಣಿಸಿ 2021ರ ಏಪ್ರಿಲ್ 13ರ ನಂತರದ ಬ್ಯಾಂಕ್ ರಜಾದಿನಗಳ ಪಟ್ಟಿ ಈ ರೀತಿಯಾಗಿದೆ.