ಕರ್ನಾಟಕ

karnataka

ETV Bharat / business

ಇಲ್ಲಿ ಗಮನಿಸಿ: ಸರ್ಕಾರಿ ಬ್ಯಾಂಕ್​ಗಳಿಂದ ಕೊರೊನಾ ಚಿಕಿತ್ಸೆಗೆ 5 ಲಕ್ಷ ರೂ. ತನಕ ಪರ್ಸನಲ್ ಲೋನ್! - 5 ಲಕ್ಷ ರೂ ಕೋವಿಡ್ ಚಿಕಿತ್ಸೆ ಸಾಲ

ಪಿಎಸ್​ಬಿಗಳು ಕೋವಿಡ್ ಚಿಕಿತ್ಸೆಯನ್ನು ಪೂರೈಸಲು ಸಂಬಳ ಪಡೆಯುವವರು, ಸಂಬಳ ಪಡೆಯದವರು ಮತ್ತು ಪಿಂಚಣಿದಾರರಿಗೆ 25 ಸಾವಿರದಿಂದ 5 ಲಕ್ಷ ರೂ.ವರೆಗೆ ಅಸುರಕ್ಷಿತ ವೈಯಕ್ತಿಕ ಸಾಲ ನೀಡಲಿಎಂದು ಎಂದು ಜಂಟಿ ಹೇಳಿಕೆ ನೀಡಿವೆ.

Covid-19 treatment
Covid-19 treatment

By

Published : May 31, 2021, 4:56 PM IST

ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್​ಗಳು (ಪಿಎಸ್‌ಬಿ) ಕೋವಿಡ್ ಚಿಕಿತ್ಸೆಯ ವೆಚ್ಚ ಪೂರೈಸಲು ಗ್ರಾಹಕರಿಗೆ 5 ಲಕ್ಷ ರೂ. ಅಸುರಕ್ಷಿತ ವೈಯಕ್ತಿಕ ಸಾಲ ನೀಡಲಿವೆ.

ಕೋವಿಡ್ -19ರ ತೀವ್ರವಾದ ಎರಡನೇ ಅಲೆಯ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಭಾರತೀಯ ಬ್ಯಾಂಕ್​ಗಳ ಸಂಘ (ಐಬಿಎ) ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿ ಘೋಷಿಸಿವೆ.

ಓದಿ: ಜಿಡಿಪಿ ಡೇಟಾ: ಮೈನಸ್​ 24, ಮೈನಸ್​ 7.3 ಬಳಿಕ ಮತ್ತೆ ಮೈನಸ್ ಶೇ 8ರಷ್ಟು ಕುಸಿತ!

ಪಿಎಸ್​ಬಿಗಳು ಕೋವಿಡ್ ಚಿಕಿತ್ಸೆಯನ್ನು ಪೂರೈಸಲು ಸಂಬಳ ಪಡೆಯುವವರು, ಸಂಬಳ ಪಡೆಯದವರು ಮತ್ತು ಪಿಂಚಣಿದಾರರಿಗೆ 25 ಸಾವಿರದಿಂದ 5 ಲಕ್ಷ ರೂ.ವರೆಗೆ ಅಸುರಕ್ಷಿತ ವೈಯಕ್ತಿಕ ಸಾಲ ನೀಡಲಿಎಂದು ಎಂದು ಜಂಟಿ ಹೇಳಿಕೆ ನೀಡಿವೆ.

ಈ ಸಾಲಗಳನ್ನು ರಿಯಾಯಿತಿ ಬಡ್ಡಿದರದಲ್ಲಿ ನೀಡಲಾಗುತ್ತಿದ್ದು, ಕೋವಿಡ್ ಸಾಲ ಬುಕ್​ನ ಭಾಗವಾಗಲಿದೆ ಎಂದು ಬ್ಯಾಂಕರ್‌ಗಳು ತಿಳಿಸಿದ್ದಾರೆ.

ಕೆನರಾ ಸುರಕ್ಷ ವೈಯಕ್ತಿಕ ಸಾಲ ಯೋಜನೆ

ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದ ಭಾಗವಾಗಿ ಕೆನರಾ ಸುರಕ್ಷ ವೈಯಕ್ತಿಕ ಸಾಲ ಯೋಜನೆಯನ್ನು ಕೆನರಾ ಬ್ಯಾಂಕ್ ಶುಕ್ರವಾರ ಪ್ರಕಟಿಸಿತ್ತು. ಈ ಯೋಜನೆಯಡಿ, ಕೋವಿಡ್-19 ಚಿಕಿತ್ಸೆಗಾಗಿ ಗ್ರಾಹಕರಿಗೆ ತಕ್ಷಣದ ಆರ್ಥಿಕ ಸಹಾಯವಾಗಿ ಬ್ಯಾಂಕ್ 25,000 - 5 ಲಕ್ಷ ರೂ. ಸಾಲ ನೀಡಲಿದೆ.

ಈ ಯೋಜನೆಯು ಆರು ತಿಂಗಳ ನಿಷೇಧ ನೀಡಿದರೆ, ಸಾಲದ ವಾಯ್ದೆ 2021ರ ಸೆಪ್ಟೆಂಬರ್ 30ರವರೆಗೆ ಮಾನ್ಯವಾಗಿರುತ್ತದೆ. ಈ ಯೋಜನೆಯಡಿ ವೈಯಕ್ತಿಕ ಸಾಲ ಪಡೆಯುವ ಗ್ರಾಹಕರಿಗೆ ಸಂಸ್ಕರಣಾ ಶುಲ್ಕವನ್ನು ಬ್ಯಾಂಕ್ ಮನ್ನಾ ಮಾಡಿದೆ.

ABOUT THE AUTHOR

...view details