ನವದೆಹಲಿ:ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳ (ಎಂಎಸ್‌ಎಂಇ) ವಲಯಕ್ಕೆ 3 ಲಕ್ಷ ಕೋಟಿ ರೂ. ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್‌ಜಿಎಸ್) ಅಡಿಯಲ್ಲಿ ಬ್ಯಾಂಕ್ಗಳು ಸುಮಾರು 1.23 ಲಕ್ಷ ಕೋಟಿ ರೂ. ಸಾಲವನ್ನು ಮಂಜೂರು ಮಾಡಿವೆ ಎಂದು ಹಣಕಾಸು ಸಚಿವಾಲಯ ಗುರುವಾರ ತಿಳಿಸಿದೆ.
ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಮೇ ತಿಂಗಳಲ್ಲಿ 20 ಲಕ್ಷ ಕೋಟಿ ರೂ. ಆತ್ಮನಿರ್ಭರ ಭಾರತ ಅಭಿಯಾನ ಪ್ಯಾಕೇಜ್ ಘೋಷಿಸಿದರು. ಇದರಲ್ಲಿ 3 ಲಕ್ಷ ರೂ.ವರೆಗೂ ಉದ್ಯಮಿಗಳಿಗೆ ಮೇಲಾಧಾರ ಇಲ್ಲದೆ ಸಾಲ ನೀಡುವುದಾಗಿ ಘೋಷಿಸಿದ್ದರು.
2020ರ ಜುಲೈ 15ರ ವೇಳೆಗೆ ಪಿಎಸ್‌ಬಿಗಳು ಮತ್ತು ಖಾಸಗಿ ಬ್ಯಾಂಕ್ಗಳು ಶೇ 100ರಷ್ಟು ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯಡಿ ಮಂಜೂರು ಮಾಡಿದ ಒಟ್ಟು ಮೊತ್ತ 1,23,345.16 ಕೋಟಿ ರೂ. ಆಗಿದೆ. ಅದರಲ್ಲಿ 68,311.55 ಕೋಟಿ ರೂ. ಈಗಾಗಲೇ ವಿತರಿಸಲಾಗಿದೆ ಎಂದು ಹಣಕಾಸು ಸಚಿವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
2020ರ ಜುಲೈ 9ಕ್ಕೆ ಹೋಲಿಸಿದರೆ ಮಂಜೂರಾದ ಸಾಲಗಳ ಒಟ್ಟು ಮೊತ್ತದಲ್ಲಿ 3,245.79 ಕೋಟಿ ರೂ. ಹೆಚ್ಚಳವಿದೆ. ವಿತರಿಸಲಾದ ಸಾಲಗಳ ಒಟ್ಟು ಮೊತ್ತದಲ್ಲಿ 6,323.65 ಕೋಟಿ ರೂ. ಏರಿಕೆಯಾಗಿದೆ. ಪಿಎಸ್‌ಬಿಗಳು ಮತ್ತು ಖಾಸಗಿ ವಲಯದ ಬ್ಯಾಂಕ್ಗಳು ಒಟ್ಟಾಗಿ 2020 ಜುಲೈ 15ರವರೆಗೆ ವಿತರಿಸಿವೆ ಎಂದು ಸೀತಾರಾಮನ್ ಹೇಳಿದ್ದಾರೆ.