ಕರ್ನಾಟಕ

karnataka

ETV Bharat / business

ಇಸಿಎಲ್‌ಜಿಎಸ್ ಯೋಜನೆ ಅಡಿ ₹ 77 ಸಾವಿರ ಕೋಟಿ ವಿತರಿಸಿದ ಬ್ಯಾಂಕ್​ಗಳು - ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್

ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್​ಜಿಎಸ್) ಅಡಿಯಲ್ಲಿ ಶೇ 100 ರಷ್ಟು ಹಣ ವನ್ನ ಬ್ಯಾಂಕ್​ಗಳು ಮಂಜೂರು ಮಾಡಿವೆ. ಅಂದರೆ 1,27,582.60 ಕೋಟಿ ರೂ.ಗಳಲ್ಲಿ ಜುಲೈ 20ರ ವೇಳೆಗೆ 77,613.06 ಕೋಟಿ ರೂ.ಗಳನ್ನು ಬ್ಯಾಂಕ್​ಗಳು ವಿತರಿಸಿವೆ. ಕೋವಿಡ್-19ನಿಂದ ಉಂಟಾದ ಆರ್ಥಿಕ ಬಿಕ್ಕಟ್ಟು ಮತ್ತು ಲಾಕ್​ಡೌನ್​ಗೆ ಪ್ರತಿಕ್ರಿಯೆಯಾಗಿ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್​ಜಿಎಸ್) ಅನ್ನು ಕೇಂದ್ರ ಸರ್ಕಾರ ರೂಪಿಸಿತ್ತು.

nirmala seetharaman
nirmala seetharaman

By

Published : Jul 22, 2020, 10:19 AM IST

ನವದೆಹಲಿ:ಶೇಕಡಾ 100ರಷ್ಟು ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್​ಜಿಎಸ್) ಅಡಿಯಲ್ಲಿ ಮಂಜೂರು ಮಾಡಿದ 1,27,582.60 ಕೋಟಿ ರೂ.ಗಳಲ್ಲಿ ಜುಲೈ 20ರ ವೇಳೆಗೆ 77,613.06 ಕೋಟಿ ರೂ.ಗಳನ್ನು ಬ್ಯಾಂಕ್​ಗಳು ವಿತರಿಸಿವೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಟ್ವೀಟ್​ ಮೂಲಕ ತಿಳಿಸಿದ್ದಾರೆ.

"ಜುಲೈ 20, 2020ರ ವೇಳೆಗೆ, ಸಾರ್ವಜನಿಕ ವಲಯದ ಮತ್ತು ಖಾಸಗಿ ಬ್ಯಾಂಕ್​ಗಳು ಶೇ 100ರಷ್ಟು ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯಡಿ ಮಂಜೂರು ಮಾಡಿದ ಒಟ್ಟು ಮೊತ್ತವು 1,27,582.60 ಕೋಟಿ ರೂ. ಆಗಿದ್ದು, ಅದರಲ್ಲಿ 77,613.06 ಕೋಟಿ ರೂ.ಗಳನ್ನು ಈಗಾಗಲೇ ವಿತರಿಸಲಾಗಿದೆ" ಎಂದು ಟ್ವೀಟ್ ಸಚಿವರು ಟ್ವೀಟ್​ ಮಾಡಿ ಲೆಕ್ಕ ಕೊಟ್ಟಿದ್ದಾರೆ. ಅಲ್ಲದೇ ರಾಜ್ಯವಾರು ಪಟ್ಟಿಯನ್ನೂ ಬಿಡುಗಡೆ ಮಾಡಿದ್ದಾರೆ.

"ಶೇ100 ಇಸಿಎಲ್​ಜಿಎಸ್ ಅಡಿಯಲ್ಲಿ, ಸಾರ್ವಜನಿಕ ವಲಯದ ಬ್ಯಾಂಕ್​ಗಳು ಮಂಜೂರು ಮಾಡಿದ ಸಾಲದ ಮೊತ್ತವು 70,894.59 ಕೋಟಿ ರೂ.ಗೆ ಏರಿದೆ. ಅದರಲ್ಲಿ ಜುಲೈ 20ರವರೆಗೆ 45,797.29 ಕೋಟಿ ರೂ. ವಿತರಿಸಲಾಗಿದೆ" ಎಂದು ಮತ್ತೊಂದು ಟ್ವೀಟ್​ನಲ್ಲಿ ವಿವರಣೆ ನೀಡಲಾಗಿದೆ.

ಮಂಜೂರಾದ ಸಾಲಗಳ ಒಟ್ಟು ಮೊತ್ತದಲ್ಲಿ 4,237.44 ಕೋಟಿ ರೂ.ಗಳ ಹೆಚ್ಚಳವಿದೆ ಮತ್ತು ಪಿಎಸ್‌ಬಿಗಳು ಮತ್ತು ಖಾಸಗಿ ವಲಯದ ಬ್ಯಾಂಕ್​ಗಳು ವಿತರಿಸಿದ ಸಾಲಗಳ ಸಂಚಿತ ಮೊತ್ತದಲ್ಲಿ 9,301.51 ಕೋಟಿ ರೂ.ಗಳ ಹೆಚ್ಚಳವಾಗಿದೆ ಎಂದು ಸೀತಾರಾಮನ್ ಕಚೇರಿ ತಿಳಿಸಿದೆ.

ಕೋವಿಡ್-19ನಿಂದ ಉಂಟಾದ ಆರ್ಥಿಕ ಬಿಕ್ಕಟ್ಟು ಮತ್ತು ಲಾಕ್​ಡೌನ್​ಗೆ ಪ್ರತಿಕ್ರಿಯೆಯಾಗಿ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್​ಜಿಎಸ್) ಅನ್ನು ರೂಪಿಸಲಾಗಿದ್ದು, ಇದು ಎಂಎಸ್ಎಂಇ ವಲಯದಲ್ಲಿ ಉತ್ಪಾದನೆ ಮತ್ತು ಇತರ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ.

ABOUT THE AUTHOR

...view details