ಕರ್ನಾಟಕ

karnataka

ETV Bharat / business

ಬ್ಯಾಂಕ್​ಗಳಿಗೆ RBI ಸಾಕಷ್ಟು ಪರಿಹಾರ ಕೊಟ್ಟಿದೆ, ಸಾಲಗಾರರಿಗೆ ಅಂಥ ಪರಿಹಾರ ಸಿಕ್ಕಿಲ್ಲ: ಸುಪ್ರೀಂಗೆ ಮನವರಿಕೆ - ಸುಪ್ರೀಂಕೋರ್ಟ್​

ಅವರು (ಆರ್​ಬಿಐ) ಬ್ಯಾಂಕ್​ಗಳಿಗೆ ತುಂಬಾ ಪರಿಹಾರ ನೀಡಿದ್ದಾರೆ. ವಾಸ್ತವದಲ್ಲಿ ನಮಗೆ ಯಾವುದೇ ಪರಿಹಾರ ನೀಡಿಲ್ಲ. ನನ್ನ (ಅರ್ಜಿದಾರರ) ಕಡೆ ಯಾವುದೇ ಡೀಫಾಲ್ಟ್ ಇಲ್ಲ ಮತ್ತು ಬಡ್ಡಿಗೆ ಬಡ್ಡಿ ವಿಧಿಸುವ ಮೂಲಕ ಯೋಜನೆ ಪಡೆದುಕೊಳ್ಳಲು ನಮಗೆ ದಂಡ ವಿಧಿಸಲಾಗುವುದಿಲ್ಲ ಎಂದು ಬ್ಯಾಂಕಿನಿಂದ ಗೃಹ ಸಾಲ ಪಡೆದ ಅರ್ಜಿದಾರರ ಪರವಾಗಿ ಹಿರಿಯ ವಕೀಲ ರಾಜೀವ್ ದತ್ತಾ ಅವರು ಸುಪ್ರೀಂ ಕೋರ್ಟ್​ನ ನ್ಯಾಯಪೀಠಕ್ಕೆ ಮನವರಿಕೆ ಮಾಡಿದರು.

SC
ಎಸ್​ಸಿ

By

Published : Sep 2, 2020, 5:03 PM IST

ನವದೆಹಲಿ: ಸಾಲ ಪುನರ್​ ರಚನೆಗೆ ಬ್ಯಾಂಕ್​ಗಳಿಗೆ ಮುಕ್ತವಾದ ಅವಕಾಶವಿದೆ. ಆದರೆ ಕೋವಿಡ್​-19 ಸಾಂಕ್ರಾಮಿಕ ಸಮಯದ ನಿಷೇಧಾಜ್ಞೆ ಯೋಜನೆಯಡಿ ಮುಂದೂಡಲ್ಪಟ್ಟ ಇಎಂಐ ಪಾವತಿಗಳಿಗೆ ಬಡ್ಡಿ ವಿಧಿಸುವ ಮೂಲಕ ಪ್ರಾಮಾಣಿಕ ಸಾಲಗಾರರಿಗೆ ದಂಡ ವಿಧಿಸುವುದು ಸಲ್ಲದು ಎಂದು ಅರ್ಜಿದಾರರು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.

ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠವು ನಿಷೇಧದ ಅವಧಿಯಲ್ಲಿ ಮುಂದೂಡಲ್ಪಟ್ಟ ಕಂತುಗಳ ಮೇಲಿನ ಬಡ್ಡಿ ಪಡೆಯುವ ಮನವಿಯ ಕುರಿತು ವಿಚಾರಣೆ ಪ್ರಾರಂಭಿಸಿತು. ಬಡ್ಡಿಗೆ ಬಡ್ಡಿ ಪಾವತಿಸುವುದು ಸಾಲಗಾರರಿಗೆ ಹೊರೆ ಆಗಲಿದೆ ಎಂದು ಮನವರಿಕೆ ಮಾಡಲಾಯಿತು.

ಬ್ಯಾಂಕಿನಿಂದ ಗೃಹ ಸಾಲ ಪಡೆದ ಅರ್ಜಿದಾರ ಗಜೇಂದ್ರ ಶರ್ಮಾ ಪರವಾಗಿ ಹಾಜರಾದ ಹಿರಿಯ ವಕೀಲ ರಾಜೀವ್ ದತ್ತಾ, ನಿಷೇಧದ ಅವಧಿಯಲ್ಲಿಯೂ ಇಎಂಐ ಮೇಲಿನ ಬಡ್ಡಿ ಸಂಗ್ರಹಕ್ಕೆ ಆಕ್ಷೇಪಿಸಿದರು.

ಆರ್‌ಬಿಐ ಈ ಯೋಜನೆಯೊಂದಿಗೆ ಹೊರಬಂದಿದೆ. ನಿಷೇಧದ ಅವಧಿಯ ನಂತರ ನಾವು ಇಎಂಐ ಪಾವತಿಸುತ್ತೇವೆ ಎಂದು ಭಾವಿಸಿದ್ದೆವು. ನಂತರ ನಮಗೆ ಸಂಯೋಜಿತ ಬಡ್ಡಿ ವಿಧಿಸಲಾಗುವುದು ಎಂದು ತಿಳಿಸಲಾಯಿತು. ನಾವು ಬಡ್ಡಿಗೆ ಬಡ್ಡಿ ನೀಡುತ್ತಿರುವುದರಿಂದ ಇದು ನಮಗೆ ಹೊರೆಯಾಗುತ್ತದೆ ಎಂದು ದತ್ತಾ ಅವರು ನ್ಯಾಯಪೀಠಕ್ಕೆ ಮನವರಿಕೆ ಮಾಡಿದರು.

ಅವರು ಬ್ಯಾಂಕ್​ಗಳಿಗೆ ತುಂಬಾ ಪರಿಹಾರ ನೀಡಿದ್ದಾರೆ. ವಾಸ್ತವದಲ್ಲಿ ನಮಗೆ ಯಾವುದೇ ಪರಿಹಾರ ನೀಡಿಲ್ಲ. ನನ್ನ (ಅರ್ಜಿದಾರರ) ಕಡೆ ಯಾವುದೇ ಡೀಫಾಲ್ಟ್ ಇಲ್ಲ ಮತ್ತು ಬಡ್ಡಿಗೆ ಬಡ್ಡಿ ವಿಧಿಸುವ ಮೂಲಕ ಯೋಜನೆ ಪಡೆದುಕೊಳ್ಳಲು ನಮಗೆ ದಂಡ ವಿಧಿಸಲಾಗುವುದಿಲ್ಲ ಎಂದರು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಒಂದು ನಿಯಂತ್ರಕ. ಬ್ಯಾಂಕ್​ಗಳ ಏಜೆಂಟರಲ್ಲ. ಸಾಲಗಾರರಿಗೆ ಕೋವಿಡ್​ -19 ಅವಧಿಯಲ್ಲಿ ದಂಡ ವಿಧಿಸಲಾಗುತ್ತಿದೆ ಎಂದು ದತ್ತಾ ಹೇಳಿದ್ದಾರೆ.

ಈಗ ಸಾಲವನ್ನು ಪುನರ್​ ರಚಿಸುವುದಾಗಿ ಸರ್ಕಾರ ಹೇಳುತ್ತಿದೆ. ನೀವು ಪುನರ್​ ರಚಿಸುತ್ತೀರಿ. ಆದರೆ ಪ್ರಾಮಾಣಿಕ ಸಾಲಗಾರರಿಗೆ ದಂಡ ವಿಧಿಸಬೇಡಿ ಎಂದರು.

ಕಾನ್ಫಿಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (ಕ್ರೆಡೈ) ಪರ ಹಾಜರಾದ ಹಿರಿಯ ವಕೀಲ ಸಿ.ಎ. ಸುಂದರಂ ಅವರು, ಮೊರಟೋರಿಯಂ ಅವಧಿಯನ್ನು ಕನಿಷ್ಠ ಆರು ತಿಂಗಳವರೆಗೆ ವಿಸ್ತರಿಸಬೇಕು ಎಂದು ನ್ಯಾಯಪೀಠಕ್ಕೆ ಕೋರಿದರು.

ಬಡ್ಡಿ ಮನ್ನಾ ಮಾಡಲು ಸಾಧ್ಯವಾಗದಿದ್ದರೆ, ದಯವಿಟ್ಟು ಅದನ್ನು ಬ್ಯಾಂಕ್​ಗಳು ತಮ್ಮ ಠೇವಣಿದಾರರಿಗೆ ಪಾವತಿಸುವ ಮಟ್ಟಕ್ಕಾದರು ಇಳಿಸಿ ಎಂದರು.

ಕೈಗಾರಿಕೆಗಳಿಗೆ ನಿಷೇಧ ನಿರ್ಧರಿಸಲು ಬ್ಯಾಂಕ್​ಗಳಿಗೆ ಅಧಿಕಾರ ನೀಡಿದ ಆರ್‌ಬಿಐನ ಆಗಸ್ಟ್ 6ರ ಸುತ್ತೋಲೆಯನ್ನು ಸುಂದರಂ ಉಲ್ಲೇಖಿಸಿದ್ದಾರೆ.

ಕೋವಿಡ್​ -19 ಸಾಂಕ್ರಾಮಿಕ ಸಮಯದಲ್ಲಿ ಸಾಲ ಮರುಪಾವತಿ ಮಾಡುವ ನಿಷೇಧವನ್ನು ಎರಡು ವರ್ಷಗಳವರೆಗೆ ವಿಸ್ತರಿಸಲಾಗುವುದು. ಒತ್ತಡಕ್ಕೊಳಗಾದ ಕ್ಷೇತ್ರಗಳಿಗೆ ನೆರವಾಗಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಮಂಗಳವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದವು.

ABOUT THE AUTHOR

...view details