ಕರ್ನಾಟಕ

karnataka

ETV Bharat / business

ವ್ಯಾಪಾರಿಗಳಿಗೆ ವಿಲನ್​ಗಳಂತಾದ ಬ್ಯಾಂಕ್​ಗಳು.. ಸೀತಾರಾಮನ್​ಗೆ ವರ್ತಕರ ಒಕ್ಕೂಟ ದೂರು

ಬ್ಯಾಂಕ್​ಗಳು 'ವ್ಯಾಪಾರದ ಮೂಲಭೂತ ಹಕ್ಕಗಳನ್ನು' ಉಲ್ಲಂಘಿಸಿವೆ. ಭಾರತದ ಸಂವಿಧಾನದಡಿಯಲ್ಲಿ ನಿಷೇಧಿಸಲಾಗಿರುವ ದೇಶದ ಜನರೊಳಗಿನ ಭಿನ್ನಾಭಿಪ್ರಾಯವನ್ನು ಸಹ ದಾಟಿದೆ ಎಂದು ಸಿಎಐಟಿ ಆರೋಪಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ..

FM
ಹಣಕಾಸು ಸಚಿವೆ

By

Published : Nov 30, 2020, 6:10 PM IST

ನವದೆಹಲಿ :ಸಣ್ಣ ಉದ್ಯಮಗಳಿಗೆ ಹಾನಿ ಉಂಟು ಮಾಡುವ ಇ-ಕಾಮರ್ಸ್ ಕಂಪನಿಗಳೊಂದಿಗೆ ಬ್ಯಾಂಕ್​ಗಳು ಅಪವಿತ್ರ ಒಪ್ಪಂದ ಮಾಡಿಕೊಂಡು ಮಾರುಕಟ್ಟೆ ಪ್ರವೇಶಿಸುವುದನ್ನು ತಡೆಯುವಂತೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಒತ್ತಾಯಿಸಿದೆ.

ಸೀತಾರಾಮನ್‌ ಅವರೊಂದಿಗೆ ನಡೆಸಿದ ಸಂವಹನದಲ್ಲಿ(ಪತ್ರ), ಗ್ರಾಹಕರು ಇ-ಕಾಮರ್ಸ್ ಪೋರ್ಟಲ್‌ಗಳಿಂದ ತಮ್ಮ ಕಾರ್ಡ್‌ಗಳ ಮೂಲಕ ಖರೀದಿಸಿದಾಗ ಕೆಲವು ಬ್ಯಾಂಕ್​ಗಳು ಶೇ 10ರಷ್ಟು ಕ್ಯಾಶ್ ಬ್ಯಾಕ್ ಅಥವಾ ರಿಯಾಯಿತಿ ನೀಡುವ ಬಗ್ಗೆ ವರ್ತಕರ ಒಕ್ಕೂಟ ಗಂಭೀರ ಕಳವಳ ವ್ಯಕ್ತಪಡಿಸಿದೆ.

ಪ್ರಧಾನಿ ಮೋದಿ ಒಂದು ಸೆಕೆಂಡ್​ ವ್ಯರ್ಥ ಮಾಡದೆ ಆರ್ಥಿಕ ಸುಧಾರಣೆಗೆ ಶ್ರಮಿಸುತ್ತಿದ್ದಾರೆ - ಅಮಿತ್ ಶಾ

ಹಲವು ಬ್ಯಾಂಕ್​ಗಳು ಅಮೆಜಾನ್, ಫ್ಲಿಪ್‌ಕಾರ್ಟ್​ನಂತಹ ಇ-ಕಾಮರ್ಸ್ ಕಂಪನಿಗಳೊಂದಿಗೆ ಅಪವಿತ್ರವಾದ ಒಪ್ಪಂದ ಮಾಡಿಕೊಳ್ಳುತ್ತಿವೆ. ಸ್ಪರ್ಧಾತ್ಮಕ ವಿರೋಧಿ ನಡೆಗಳಲ್ಲಿ ಪಾಲ್ಗೊಳ್ಳಲು ಮತ್ತು ಬ್ಯಾಂಕ್​ಗಳಿಗೆ ಆರ್‌ಬಿಐನ 'ಫೇರ್ ಪ್ರಾಕ್ಟೀಸ್ ಕೋಡ್' ಅನ್ನು ಅಪರಾಧ ಎಸಗುವುದಕ್ಕೆ ಅವರೊಂದಿಗೆ ಒಂದು ನಿಯಂತ್ರಣ ಕೂಟ ರೂಪಿಸುತ್ತಿದೆ ಎಂದು ಆರೋಪಿಸಿದೆ.

ಬ್ಯಾಂಕ್​ಗಳು 'ವ್ಯಾಪಾರದ ಮೂಲಭೂತ ಹಕ್ಕಗಳನ್ನು' ಉಲ್ಲಂಘಿಸಿವೆ. ಭಾರತದ ಸಂವಿಧಾನದಡಿಯಲ್ಲಿ ನಿಷೇಧಿಸಲಾಗಿರುವ ದೇಶದ ಜನರೊಳಗಿನ ಭಿನ್ನಾಭಿಪ್ರಾಯವನ್ನು ಸಹ ದಾಟಿದೆ ಎಂದು ಸಿಎಐಟಿ ಆರೋಪಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಹೆಚ್​ಡಿಎಫ್​​ಸಿ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಸಿಟಿ ಬ್ಯಾಂಕ್, ಕೊಟಾಕ್ ಮಹೀಂದ್ರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಹೆಚ್ಎಸ್​​ಬಿಸಿ ಬ್ಯಾಂಕ್ ಮತ್ತು ಆರ್​​ಬಿಎಲ್ ಬ್ಯಾಂಕ್ ವಿರುದ್ಧ ಆರೋಪಿಸಿದೆ.

ABOUT THE AUTHOR

...view details