ನವದೆಹಲಿ:ಸಾರ್ವಜನಿಕ ವಲಯದ 10 ಬ್ಯಾಂಕುಗಳ ವಿಲೀನ ಪ್ರಕ್ರಿಯೆ ವಿರೋಧಿಸಿ ನಾಲ್ಕು ಬ್ಯಾಂಕ್ ಅಧಿಕಾರಿಗಳ ಸಂಘಗಳು ಸೆಪ್ಟೆಂಬರ್ 26 ಮತ್ತು 27ರಂದು ರಾಷ್ಟ್ರವ್ಯಾಪಿ ಕರೆ ನೀಡಿದ್ದ ಮುಷ್ಕರ ಹಿಂಪಡೆಯಲಾಗಿದೆ.
ಬ್ಯಾಂಕ್ ಮುಷ್ಕರ ಹಿಂಪಡೆದ ಒಕ್ಕೂಟಗಳು, ಸಾರ್ವಜನಿಕರು ನಿರಾಳ - ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ
ಮುಷ್ಕರ ಹಿಂಪಡೆದ ಕಾರಣ ಬ್ಯಾಂಕ್ ಸೇವೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗುವುದಿಲ್ಲ. ಎಲ್ಲ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ರಾಜೀವ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಬ್ಯಾಂಕ್
ಪ್ರತಿಭಟನೆಗೆ ಕರೆ ನೀಡಿದ್ದ ನಾಲ್ಕು ಬ್ಯಾಂಕ್ ಅಧಿಕಾರಿಗಳ ಪರವಾಗಿ ಮಾತನಾಡಿದ ಕೇಂದ್ರ ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್, ಬ್ಯಾಂಕುಗಳ ವಿಲೀನದಿಂದಾಗುವ ಕೆಲ ತೊಡಕುಗಳನ್ನು ಪರಿಶೀಲಿಸಲು ಸಮಿತಿ ರಚನೆಗೆ ಕೇಂದ್ರ ಸಮ್ಮತಿಸಿದೆ. ಹೀಗಾಗಿ ಕರೆ ನೀಡಲಾದ ಬಂದ್ ಹಿಂಪಡೆಯಲಾಗಿದೆ ಎಂದರು.
ನಾಳೆಯಿಂದ ಬ್ಯಾಂಕ್ ಸೇವೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗುವುದಿಲ್ಲ. ಎಲ್ಲ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಅವರು ಸ್ಪಷ್ಟನೆ ನೀಡಿದರು.