ಕರ್ನಾಟಕ

karnataka

By

Published : Jul 12, 2019, 9:46 PM IST

Updated : Jul 12, 2019, 10:13 PM IST

ETV Bharat / business

ಕಬ್ಬು ಬೆಳೆಗಾರಿಗೆ ಭಾರತ ಸಬ್ಸಿಡಿ ನೀಡಿರೋದಕ್ಕೆ ಆಸ್ಟ್ರೇಲಿಯಾ ಕೆಂಡಾಮಂಡಲ

ಭಾರತ ಸಕ್ಕರೆ ಉದ್ಯಮದಲ್ಲಿ 'ಡಬ್ಲ್ಯುಟಿಒ'ನ ನಿಯಮಗಳನ್ನು ಉಲ್ಲಂಘಿಸುತ್ತಿದೆ. ಭಾರತ ತನ್ನ ರಾಷ್ಟ್ರದ ಕಬ್ಬು ಬೆಳೆಗಾರರಿಗೆ ಸಬ್ಸಿಡಿಯನ್ನು ನಿರಂತರವಾಗಿ ನೀಡುತ್ತಿದೆ. ಇದು ಜಾಗತಿಕ ಸಕ್ಕರೆ ಬೆಲೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆಸ್ಟ್ರೇಲಿಯಾ ಆಪಾದಿಸಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ:ವಿಶ್ವದಲ್ಲಿ ಎರಡನೇ ಅತಿದೊಡ್ಡ ಪ್ರಮಾಣದಲ್ಲಿ ಸಕ್ಕರೆ ಉತ್ಪಾದಕ ರಾಷ್ಟ್ರವಾದ ಭಾರತದ ಮೇಲೆ ಆಸ್ಟ್ರೇಲಿಯಾ ಸಕ್ಕರೆ ಕುರಿತು ವಾಣಿಜ್ಯ ಸಮರ ಸಾರಿದ್ದು, ದೂರುಗಳ ಕಂತೆಯನ್ನು ಹೊತ್ತುಕೊಂಡು ವಿಶ್ವ ವಾಣಿಜ್ಯ ಸಂಸ್ಥೆಯ (ಡಬ್ಲ್ಯುಟಿಒ) ಕದತಟ್ಟಿದೆ.

ಭಾರತ ಸಕ್ಕರೆ ಉದ್ಯಮದಲ್ಲಿ 'ಡಬ್ಲ್ಯುಟಿಒ'ನ ನಿಯಮಗಳನ್ನು ಉಲ್ಲಂಘಿಸುತ್ತಿದೆ. ಭಾರತ ತನ್ನ ರಾಷ್ಟ್ರದ ಕಬ್ಬು ಬೆಳೆಗಾರರಿಗೆ ಸಬ್ಸಿಡಿಯನ್ನು ನಿರಂತರವಾಗಿ ನೀಡುತ್ತಿದೆ. ಇದು ಜಾಗತಿಕ ಸಕ್ಕರೆ ಬೆಲೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆಪಾದಿಸಿದೆ.

ಭಾರತವು ಸಕ್ಕರೆ ಮಾರುಕಟ್ಟೆಯಲ್ಲಿ ತನ್ನ ಜವಾಬ್ದಾರಿಗಳನ್ನು ಉಲ್ಲಂಘಿಸುತ್ತಿದೆ. ಈ ಬಗ್ಗೆ ತನಿಖೆ ನಡೆಸಲು ಸಮಿತಿಯೊಂದನ್ನು ನೇಮಿಸುವಂತೆ 'ಡಬ್ಲ್ಯುಟಿಒ'ಗೆ ಆಸ್ಟ್ರೇಲಿಯಾ ಮತ್ತು ಬ್ರೆಜಿಲ್ ಕೋರಿವೆ. ಇದಕ್ಕೆ ಗ್ವಾಟೆಮಾಲಾ ಕೂಡ ಕೈಜೋಡಿಸಿದೆ.ಆಸ್ಟ್ರೇಲಿಯಾದ ವಾಣಿಜ್ಯ ಸಚಿವ ಸೈಮನ್​ ಬರ್ಮಿಂಗ್​ಹ್ಯಾಮ್​ ಅವರು ಹಣಕಾಸು ಪರಾಮರ್ಶೆ ವರದಿ ಉಲ್ಲೇಖಿಸಿ ಮಾತನಾಡಿದ ಅವರು, 'ಆಸ್ಟ್ರೇಲಿಯಾದ ದೀರ್ಘಕಾಲದ ಕಳವಳಗಳಿಗೆ ಭಾರತ ಸ್ಪಂದಿಸಿ ಅವುಗಳ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿಲ್ಲ. 'ಡಬ್ಲ್ಯುಟಿಒ'ನ ಬದ್ಧತೆಗಳನ್ನು ಉಲ್ಲಂಘಿಸಿ ಸಬ್ಸಿಡಿ ನೀಡುವುದನ್ನು ಮುಂದುವರಿಸಿದೆ' ಎಂದು ಆಪಾದಿಸಿದ್ದಾರೆ.

'ನ್ಯಾಯಯುತವಲ್ಲದ ಸಬ್ಸಿಡಿಯನ್ನು ಯಥಾವತ್ತಾಗಿ ಮುಂದುವರಿಸಿದರೆ ಕಠಿಣ ಪರಿಶ್ರಮ ವಹಿಸುತ್ತಿರುವ ಆಸ್ಟ್ರೇಲಿಯಾದ ಕಬ್ಬು ಬೆಳೆಗಾರರು, ಮಿಲ್ಲರ್‌ಗಳು ಮತ್ತು ನಮ್ಮ ಪ್ರಾದೇಶಿಕ ಉದ್ಯೋಗಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಭಾರತದಲ್ಲಿನ ಸಬ್ಸಿಡಿ ಜಾಗತಿಕ ಸಕ್ಕರೆ ಮಾರುಕಟ್ಟೆಯ ಬಿಕ್ಕಟ್ಟುಗಳಿಗೆ ಕಾರಣವಾಗಿವೆ. ಜೊತೆಗೆ ಆಸ್ಟ್ರೇಲಿಯಾದ ರೈತರಿಗೆ ನೋವುಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Last Updated : Jul 12, 2019, 10:13 PM IST

For All Latest Updates

TAGGED:

ABOUT THE AUTHOR

...view details