ನವದೆಹಲಿ: ಭಾರತೀಯ ಬ್ಯಾಂಕುಗಳಿಂದ 9 ಸಾವಿರ ಕೋಟಿ ರೂಪಾಯಿ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಉದ್ಯಮ ವಿಜಯ್ ಮಲ್ಯ ಅವರನ್ನು ಬ್ರಿಟನ್ ನ್ಯಾಯಾಲಯ 'ದಿವಾಳಿ'ಯೆಂದು ಘೋಷಿಸಿದ ಬೆನ್ನಲ್ಲೇ, ಸಾಲಗಾರರು ನನ್ನನ್ನು ದಿವಾಳಿಯಾಗಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ್ದು, 6,200 ಕೋಟಿ ರೂ ಸಾಲಕ್ಕಾಗಿ ಸರ್ಕಾರದ ಬ್ಯಾಂಕುಗಳ ಆದೇಶದ ಮೇರೆಗೆ ಜಾರಿ ನಿರ್ದೇಶನಾಲಯ ನನ್ನ 14,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಾರಿ ನಿರ್ದೇಶನಾಲಯ(ಇಡಿ)ಗೆ 9 ಸಾವಿರ ಕೋಟಿ ರೂ ಸಾಲದ ಹಣವನ್ನು ಮರುಪಡೆಯುವ ಹಾಗೂ 5 ಸಾವಿರ ಕೋಟಿಗೂ ಅಧಿಕ ಭದ್ರತೆಯನ್ನು ಉಳಿಸಿಕೊಳ್ಳುತ್ತವೆ. ಬ್ಯಾಂಕುಗಳು ನನ್ನನ್ನು ದಿವಾಳಿಯಾಗುವಂತೆ ನ್ಯಾಯಾಲಯವನ್ನು ಕೇಳುತ್ತವೆ. ಏಕೆಂದರೆ ಅವರು ಹಣವನ್ನು ಇಡಿಗೆ ಹಿಂದಿರುಗಿಸಬೇಕಾಗಬಹುದು ಎಂದು ಮಲ್ಯ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.