ಕರ್ನಾಟಕ

karnataka

ETV Bharat / business

ಜೇಟ್ಲಿಯ ಆ ಒಂದು ಮಾತಿನಿಂದ ಚೀನಾ, ಅರ್ಜೆಂಟಿನಾ, ದ.ಆಫ್ರಿಕಾ, ಬ್ರೆಜಿಲ್​ಗೆ ಭಾರೀ ಲಾಭವಾಗಿತ್ತು..!

2003ರ ಸೆಪ್ಟೆಂಬರ್​ನಲ್ಲಿ ಮೆಕ್ಸಿಕೊದ ಕ್ಯಾನ್​ಕನ್​ನಲ್ಲಿ ನಡೆದಿದ್ದ ಡಬ್ಲ್ಯುಟಿಒನ ಸಮಾವೇಶದಲ್ಲಿ ಭಾರತದ ಅಭಿಪ್ರಾಯಗಳನ್ನು ಬಲವಾಗಿ ಪ್ರಸ್ತುತಪಡಿಸಿದ್ದ ಅರುಣ್​ ಜೇಟ್ಲಿ ಅವರು ಪ್ರಶಂಸೆಗೆ ಪಾತ್ರವಾದರು. ರೈತರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಅಗತ್ಯತೆಯನ್ನು ಡಬ್ಲ್ಯುಟಿಒನ ಮುಂದಿಟ್ಟರು.

ಸಾಂದರ್ಭಿಕ ಚಿತ್ರ

By

Published : Aug 24, 2019, 6:51 PM IST

Updated : Aug 24, 2019, 7:22 PM IST

ನವದೆಹಲಿ:ಅರುಣ್ ಜೇಟ್ಲಿ ಅವರು ತಮ್ಮ ಜನ್ಮದತ್ತವಾಗಿ ಪಡೆದುಕೊಂಡು ಬಂದಿದ್ದ ವಾಕ್ಪಟುತ್ವ ಭಾರತದಲ್ಲಿ ಅಷ್ಟೆಯಲ್ಲದೇ ಜಾಗತಿಕ ವೇದಿಕಗಳಲ್ಲಿ ಅದನ್ನು ಪ್ರಸ್ತುತ ಪಡಿಸಿದ್ದರು. ವಿಶ್ವ ವಾಣಿಜ್ಯ ಸಂಘಟನೆಯಲ್ಲಿ (ಡಬ್ಲ್ಯುಟಿಒ) ಅವರು ಮಾಡಿದ್ದ ಭಾಷಣೆಕ್ಕೆ ಅಮೆರಿಕ, ಯುರೋಪ್​ ತಬ್ಬಿಬ್ಬಾಗಿದ್ದವು.

2003ರ ಸೆಪ್ಟೆಂಬರ್​ನಲ್ಲಿ ಮೆಕ್ಸಿಕೊದ ಕ್ಯಾನ್​ಕನ್​ನಲ್ಲಿ ನಡೆದಿದ್ದ ಡಬ್ಲ್ಯುಟಿಒನ ಸಮಾವೇಶದಲ್ಲಿ ಭಾರತದ ಅಭಿಪ್ರಾಯಗಳನ್ನು ಬಲವಾಗಿ ಪ್ರಸ್ತುತಪಡಿಸಿದ್ದ ಜೇಟ್ಲಿ ಅವರು ಪ್ರಶಂಸೆಗೆ ಪಾತ್ರವಾದರು. ರೈತರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಅಗತ್ಯತೆಯನ್ನು ಡಬ್ಲ್ಯುಟಿಒನ ಮುಂದಿಟ್ಟರು.

ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ಸೇರಿದಂತೆ ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ಕೃಷಿಕರ ಹಿತಾಸಕ್ತಿಗಳಿಗಾಗಿ ಭಾರತ ಮತ್ತು ಇತರ ಅಭಿವೃದ್ಧಿಶೀಲ ಆರ್ಥಿಕತೆಯ ರಾಷ್ಟ್ರಗಳ ಮೇಲೆ ರಫ್ತುದಾರರಿಗೆ ನೀಡುತ್ತಿರುವ ಸಹಾಯಧನವನ್ನು ಕಡಿತಗೊಳಿಸುವಂತೆ ಒತ್ತಡ ಹೇರುತ್ತಿವೆ. ಇದು ಅಭಿವೃದ್ಧಿಶೀಲ ರಾಷ್ಟ್ರಗಳ ಸ್ಪರ್ಧಾತ್ಮಕತೆಯನ್ನು ನೋಯಿಸುತ್ತಿದೆ ಎಂದು ಜಾಗತಿಕ ವೇದಿಕೆಯಲ್ಲಿ ಬಲಿಷ್ಠ ಆರ್ಥಿಕ ರಾಷ್ಟ್ರಗಳ ನೀತಿ ಬಯಲು ಮಾಡಿದರು.

ಜೇಟ್ಲಿಯ ಈ ವಾದದಿಂದಾಗಿ ಭಾರತ, ದಕ್ಷಿಣ ಆಫ್ರಿಕಾ, ಬ್ರೆಜಿಲ್​, ಅರ್ಜೆಂಟಿನಾ, ಚೀನಾ ಸೇರಿದಂತೆ ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ಹೆಚ್ಚು ಉಪಯುಕ್ತವಾಯಿತು. ಯು.ಎಸ್. ನೊಂದಿಗೆ ಭಾರತದ ದ್ವಿಪಕ್ಷೀಯ ವ್ಯಾಪಾರ ಸಂಬಂಧವನ್ನು ಶ್ರೀ ಜೇಟ್ಲಿ ಬಲಪಡಿಸಿದರು. ಉತ್ಪಾದನೆ ಮತ್ತು ರಫ್ತು ಹೆಚ್ಚಿಸಲು ಚೀನಾದಲ್ಲಿ ರೂಪಿಸಲಾಗಿದ್ದ "ವಿಶೇಷ ಆರ್ಥಿಕ ವಲಯಗಳನ್ನು" ಸ್ಥಾಪಿಸುವಂತೆ ಭಾರತ ಸರ್ಕಾರಕ್ಕೆ ಜೇಟ್ಲಿ ಒತ್ತಾಯಿಸಿದರು. ಇವರ ಕೋರಿಕೆಯ ಫಲವಾಗಿ ಈ ನೀತಿಯನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರವು 2005ರಲ್ಲಿ ಜಾರಿಗೆ ತಂದಿತು.

Last Updated : Aug 24, 2019, 7:22 PM IST

ABOUT THE AUTHOR

...view details